Ashawadi Prakashan’s 25th Year celebration of Konkani Literary Mission (Began in Kuwait in the year 2000) with publishing of 5 Konkani books.
I am pleased to invite you to this program to be held at Gantalkatte Parish Hall on 19th January 2025 from 9:30am to 12:30pm.
Book Release program followed by Konkani Poetry Recital Session to be chaired by Bai Salomi Miyapadav Mogarnad. Noted authors/poets from Goa, Mumbai are part of the program.
With Kind Regards
Valley QuadrosKonkani Servant
HOLY ROSARY CHURCH, KUNDAPUR – 450 th JUBILEE SOUVENIR 2021
ಕುಂದಾಪುರ ರೋಜರಿ ಚರ್ಚಿನಲ್ಲಿ ಜುಬಿಲಿ ವರ್ಷ 2025 ಕ್ಕೆ ಚಾಲನೆ
ಕುಂದಾಪುರ,ಡಿ29; 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಉಡುಪಿ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29 ರಂದು ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್ ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಅದರ ದ್ಯೋತಕವಾಗಿ ವಿಶ್ವದ ಎಲ್ಲಾ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29ರಂದು ಆಯಾ ಕ್ಯಾಥೆಡ್ರಲ್ ಗಳ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಚಾಲನೆ ನೀಡಲಾಯಿತು, ಅದರಂತೆ ಕುಂದಾಪುರ ಅತ್ಯಂತ ಹಿರಿಯ ಚರ್ಚ್ ಆದ ಹೋಲಿ ರೋಜರಿ ಚರ್ಚಿನಲ್ಲಿ ಶಿಲುಭೆಯನ್ನು ಆಶಿರ್ವದಿಸಿ ಪ್ರತಿಷ್ಠಾಪಿಸುವ ಮೂಲಕ ಅ।ವಂ।ಧರ್ಮಗುರು ಪೌಲ್ ರೇಗೊ ಉದ್ಘಾಟಿಸಿ ಜುಬಿಲಿ ವರ್ಷಕ್ಕೆ ಚಾಲನೆ ನೀಡಿದರು.
ಪ್ರತಿಷ್ಠಾಪಿಸಿದ ಶಿಲುಭೆ ವರ್ಷವೀಡಿ ಅಲ್ಲಿಯೆ ಇದ್ದು, ವರ್ಷಂಪೂರ್ತಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಣೆ ನೀಡಿದರು, ಮತ್ತೊಂದು ಶಿಲುಭೆಯನ್ನು ಆಶಿರ್ವಾದಿಸಿದ, ಆ ಶಿಲುಭೆ ಕುಂದಾಪುರ ಚರ್ಚಿನ ಎಲ್ಲಾ ಕುಟುಂಬಗಳ ಮನೆಗೆ ದಿನಕ್ಕೆ ಒಂದರಂತೆ ಎಲ್ಲಾ ಮನೆಗಳಿಗೆ ಶಿಲುಭೆಯನ್ನು ಕೊಂಡಯ್ದು ಪ್ರಾರ್ಥನಾ ವಿಧಿಗಳನ್ನು ನೆಡಸಲಾಗುವುದು’ ಎಂದು ತಿಳಿಸಿ ಮೊದಲ ದಿನಕ್ಕಾಗಿ ಸಂತ ಜೋಸೆಫ್ ಕಾನ್ವಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯರವರಿಗೆ ಧರ್ಮಗುರುಗಳು ಹಸ್ತಾಂತರಿಸಿದರು. ಬಳಿಕ ಎಲ್ಲಾ ಕುಂಟುಂಬಗಳಿಗೆ ಆ ಶಿಲುಭೆಯನ್ನು ಕೊಂಡಯ್ಯಲಾಗುವುದು.
ಇದೇ ದಿನಂದಂದು ಯೇಸು, ಮೇರಿಮಾತೆ ಮತ್ತು ಸಂತ ಜೋಸೆಫ್ ಇವರ ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.
ಕುಂದಾಪುರ ; ರೆಡ್ ಕ್ರಾಸ್ ಸಂಸ್ಥೆಯಿಂದ ಆರೋಗ್ಯ ತಪಾಸಣಾ ಶಿಬಿರ
ಹುತಾತ್ಮರಾದ ಯೋಧ ಅನೂಪ್ ಪೂಜಾರಿ ಬೀಜಾಡಿ ಯವರ ಮನೆಗೆ ವಿ. ಪ. ಶಾಸಕರಾದ ಐವನ್ ಡಿಸೋಜಾರವರ ಭೇಟಿ
ಬೀಜಾಡಿ; ದಿನಾಂಕ :- 28/12/2024 ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ರವರು ಹುತಾತ್ಮರಾದ ಯೋಧ ಶ್ರೀ ಅನೂಪ್ ಪೂಜಾರಿ ಬೀಜಾಡಿ ಯವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸ್ವಾಂತ್ವನ ತಿಳಿಸಿ ಧೈರ್ಯ ತುಂಬಿದರು.
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನು ಬೇಟಿ ಮಾಡಿ ಸರಕಾರದ ವತಿಯಿಂದ ಸಿಗುವಂತಹ ಸವಲತ್ತುಗಳು ಹಾಗೂ ಪರಿಹಾರ ಸಿಗುವಂತೆ ಮಾತನಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು , ಬಿ ಹಿರಿಯಣ್ಣ ಕೆ ಎಫ್ ಡಿ ಸಿ ಮಾಜಿ ಅಧ್ಯಕ್ಷರು , ವಿನೋದ್ ಕ್ರಾಸ್ಟೊ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ , ರೋಷನ್ ಬರೆಟೊ ಪಂಚಾಯತ್ ಸದಸ್ಯರು , ಅಭಿಜಿತ್ ಪೂಜಾರಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರು, ಅಶೋಕ್ ಸುವರ್ಣ ನಾಮನಿರ್ದೇಶಿತ ಸದಸ್ಯರು, ಜೋಸೆಪ್ ರೆಬೆಲ್ಲೋ ,ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಇತರ ಮುಖಂಡರು ಉಪಸ್ಥಿತರಿದರು.
ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟ
ಮಂಗಳೂರು: ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಇದು ಟಿ20 ಫಾರ್ಮ್ಯಾಟ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಅಗಿದೆ. ಇದರಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿವೆ. ಪ್ರತೀ ಫ್ರಾಂಚೈಸ್ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 5 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್ನಿಂದ ಟಾಪ್ 2 ತಂಡಗಳು ಸೆಮಿಫೈನಲ್ಗಾಗಿ ಅರ್ಹರಾಗುವರು. ಈ ಆಟ OTT ಪ್ಲ್ಯಾಟ್ಫಾರ್ಮ್ ಒಂದರಲ್ಲಿ ಬಿತ್ತರಗೊಳ್ಳಲಿದೆ. KSCA ಯಿಂದ ವೈಶಿಷ್ಟ್ಯಪೂರ್ಣ ಗುರುತಿನ ಸಂಖ್ಯೆಯು ಇರುವವರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ, ಕರ್ನಾಟಕ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಪಾಲ್ಗೊಂಡ 8 ಐಕಾನ್ ಆಟಗಾರರು ಆಡಲಿದ್ದಾರೆ. ನೋಂದಾಯಿತ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ವಿಂಗಡಿಸಲಾಗುವುದು. ಒಂದು Under-19 ಆಟಗಾರ ಮತ್ತು ಎರಡು Under-23 ವಯೋಮಿತಿಯ ಆಟಗಾರರು ಪ್ಲೇಯಿಂಗ್ 11 ರ ತಂಡದಲ್ಲಿರಬೇಕು. ಪ್ರತಿ ದಿನ 3 ಪಂದ್ಯಗಳು. ಪ್ರೇಕ್ಷಕರು ಪ್ರವೇಶ ಶುಲ್ಕವಿಲ್ಲದೆ ಟೂರ್ನಮೆಂಟ್ ಅನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು.
ಮೊದಲ ಡಿವಿಷನ್ ಆಟಗಾರರು ಮಂಗಳೂರು ಝೋನ್ ಆಡಿದವರು ಕೆಟಗರಿ A ಯಲ್ಲಿ ಸೇರಿಸಲ್ಪಡುತ್ತಾರೆ. KSCA ಮಂಗಳೂರು ಝೋನ್ ಲೀಗ್ಗಳನ್ನು ಪ್ರತಿನಿಧಿಸಿದ ಆಟಗಾರರು, ಕಠಿನ ನಿಯಮಗಳು ಮತ್ತು ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುವುದು. ಅದೇ ರೀತಿ ಕೆಟಗರಿ B ಯಲ್ಲಿ ದ್ವಿತೀಯ ಮತ್ತು ತೃತೀಯ ಡಿವಿಷನ್ ಆಟಗಾರರು KSCA ಮಂಗಳೂರು ಝೋನ್ ಲೀಗ್ಗಳನ್ನು ಪ್ರತಿನಿಧಿಸಿದ ಆಟಗಾರರು ಆಗಿರಬೇಕು.
ಆಟಗಾರರು ಮತ್ತು ಮಂಡಳಿಯ ನಡುವೆ ಅಗ್ರಿಮೆಂಟ್ ಕಡ್ಡಾಯವಾಗಿದೆ, KSCA ಆಡಳಿತ ನಿಯಮಾವಳಿಗಳ ಅಡಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.
ಟೂರ್ನಮೆಂಟ್ನ ಅತ್ಯುತ್ತಮ ಆಟಗಾರ, ಟೂರ್ನಮೆಂಟ್ನ ಅತ್ಯುತ್ತಮ ಕ್ಯಾಚ್, ಪರ್ಪಲ್ ಕ್ಯಾಪ್, ಆರಂಜ್ ಕ್ಯಾಪ್, Under-23 ಶ್ರೇಣಿಯ ಅತ್ಯುತ್ತಮ ಎಮರ್ಜಿಂಗ್ ಆಟಗಾರ ಹೀಗೆ ಹಲವಾರು ಪ್ರಶಸ್ತಿಗಳು ಇವೆ. KSCA ಪ್ರಮಾಣಿತ ಮ್ಯಾಚ್ ಅಧಿಕೃತರನ್ನು ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಬಹುದಾಗಿದೆ.
ಕುಂದಾಪುರ್ ಬಾಳ್ಕಾ ಜೆಜುಚೆ ಫೆಸ್ತ್ ಆಚರಣ್ ಕುಂದಾಪುರ್
ಕುಂದಾಪುರ್, ಡಿ.28; ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ ಸನ್ವಾರಾ ಸಕಾಳಿ ಫೆಸ್ತ್ ಆಚರಣ್ ಕೆಲೆಂ. ಪವಿತ್ರ್ ಬಲಿದಾನ್ ಭೆಟಯ್ಲ್ಯಾ ಭೋ।ಮಾ।ಬಾ। ಪೌಲ್ ರೇಗೊ ಹಾಣಿ ಭೆಟಯ್ಲೆಂ. ಹೇರೊದ್ ರಾಯಾಚ್ಯಾ ಅಧಿಕಾರಾಚ್ಯಾ ಆಶೆಕ್, ಜೆಜುಜ್ ಲಗಾಡ್ ಕಾಡ್ಚ್ಯಾ ಖಾತಿರ್ ನಿರಪ್ರಾಧಿ ಚೆರ್ಕ್ಯಾ ಭುರ್ಗ್ಯಾಂಚೊ ಸಂಹಾರ್ ಕೆಲೊ, ಅಸೆಂ ಬಾಳ್ಕಾನಿ ಆಪ್ಲ್ಯಾ ಜಿವಾಚೊ ತ್ಯಾಗ್ ಕೆಲೊ. ಭುರ್ಗಿಂ ಆವಯ್ ಬಾಪಯ್ಚೆಂ ದಾಯ್ಜ್, ಗರ್ಭಾಂತ್ ಆಸ್ಚ್ಯಾ ಬಾಳ್ಕಾಂಚೊ ಸಂಹಾರ್ ಕರಿನಾಕಾತ್’ ಮ್ಹಣುನ್ ಸಂದೇಶ್ ದಿವ್ನ್, ಬಾಳ್ಕಾಂ ಖಾತಿರ್ ವಿಶೇಸ್ ಮಾಗ್ಣೆ ಕರ್ನ್ ಭುರ್ಗ್ಯಾಂಕ್ ಆಶಿರ್ವಾದಿತ್ ಕೆಲೆಂ.
ಗ್ಯಾಸ್ ಸಿಲಿಂಡರ್ ತುಂಬಿದ್ದ ಕ್ಯಾಂಟರ್ ಹಾಗೂ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ – ಹೊತ್ತಿ ಉರಿದ ಲಾರಿಗಳು
ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ತುಂಬಿದ್ದ ಕ್ಯಾಂಟರ್ ಹಾಗೂ ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ಲಾರಿಗಳು ಹೊತ್ತಿ ಉರಿದ ಘಟನೆ ಚಿಕ್ಕಬಳ್ಳಾಪುರದ ಹುನೇಗಲ್ ಗ್ರಾಮದಲ್ಲಿ ನಡೆದಿದೆ.
ಸಿಲಿಂಡರ್ ತುಂಬಿ ಕೊಂಡು ಹೋಗುತ್ತಿದ್ದ ಕ್ಯಾಂಟರ್ ಗೆ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ನಡುರಸ್ತೆಯಲ್ಲೇ ಲಾರಿಗಳು ಬೆಂಕಿಗಾಹುತಿಯಾಗಿವೆ.
ಘಟನೆಯಲ್ಲಿ ಎರಡೂ ಲಾರಿಯ ಚಾಲಕರು ಹಾಗೂ ಕ್ಲೀನರ್ ಗಳು ಬಚಾವ್ ಆಗಿದ್ದು, ಗಾಯಗಳಾಗಿವೆ. ಆದರೆ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಖಪ್ಪ ಮತ್ತು ಆತನ ಕ್ರಿಸ್ಮಸ್ ಆಚರಣೆ – ನಮಗೆ ಪ್ರೇರಣೆಯಾಗಲಿ / Lakhappa and his Christmas celebration – may it inspire us
.
Report: Pratapananda Naik, sj
27ನೇ ಡಿಸೆಂಬರ್ 2024: 1996 ರಲ್ಲಿ, ಲಾಖಪ್ಪ ಹೆಚ್. ಕನ್ನಡಿಗ ಹಿಂದೂ, ವೃತ್ತಿಯಲ್ಲಿ ಮೋಟಾರ್ಸೈಕಲ್ ಪೈಲಟ್ (ಗೋವಾದಲ್ಲಿ ಪ್ರಯಾಣಿಕರನ್ನು ಸಾಗಿಸಲು ಬಾಡಿಗೆಗೆ ಲಭ್ಯವಿರುವ ಮೋಟರ್ಸೈಕ್ಲಿಸ್ಟ್ಗಳನ್ನು ಪೈಲಟ್ ಎಂದು ಕರೆಯಲಾಗುತ್ತದೆ) ಗೋವಾದ ಸೇಂಟ್ ಇನೆಜ್ನಲ್ಲಿ ವಾಸಿಸುತ್ತಿದ್ದರು, ಅವರು ತಮ್ಮ ಕುಟುಂಬದೊಂದಿಗೆ ಕೇರಳದ ಪೋಟಾಗೆ ಹೋದರು. ತನ್ನ ದುರ್ಗುಣಗಳಿಂದ ತನ್ನನ್ನು ಮುಕ್ತಗೊಳಿಸಿ. ಅಲ್ಲಿ ಅವರು ಗುಣಮುಖರಾದರು. ಅವರು ಕ್ಯಾಥೋಲಿಕ್ ಆಗಲು ಬಯಸಿದ್ದರು. ಆದರೆ ಕ್ಯಾಥೋಲಿಕ್ ಪಾದ್ರಿ ಅಥವಾ ಜ್ಞಾನವುಳ್ಳ ಕ್ಯಾಥೋಲಿಕ್ ವ್ಯಕ್ತಿಯನ್ನು ಕ್ಯಾಥೋಲಿಕ್ ನಂಬಿಕೆಯಲ್ಲಿ ಕಲಿಸಲು ಅವನಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಹಿಂದೂವಾಗಿಯೇ ಮುಂದುವರಿದರು. ತನ್ನ ಆಂತರಿಕ ಗುಣಪಡಿಸುವಿಕೆಗಾಗಿ ಯೇಸುವಿಗೆ ಕೃತಜ್ಞತೆಯ ಸಂಕೇತವಾಗಿ, ಅವನು ತನ್ನ ನೆರೆಹೊರೆಯವರನ್ನು ಕ್ರಿಸ್ಮಸ್ ಊಟಕ್ಕೆ ಆಹ್ವಾನಿಸಲು ಪ್ರಾರಂಭಿಸಿದನು. ಅಂದಿನಿಂದ, ಪ್ರತಿ ಕ್ರಿಸ್ಮಸ್ ದಿನದಂದು ಅವರು ಸೇಂಟ್ ಇನೆಜ್ ಮತ್ತು ಬಾಂಬೋಲಿಮ್ನಲ್ಲಿ ತಮ್ಮ ನೆರೆಹೊರೆಯವರಿಗೆ 200 ಪ್ಲಸ್ಗೆ ಕ್ರಿಸ್ಮಸ್ ಊಟವನ್ನು ನೀಡಲು ಪ್ರಾರಂಭಿಸಿದರು. ಮಾರ್ಚ್ 31, 2013 ರಂದು, ಲಖಪ್ಪ ಮತ್ತು ಅವರ ಕುಟುಂಬವು ಒಂದು ವರ್ಷದ ಧಾರ್ಮಿಕ ಶಿಕ್ಷಣದ ನಂತರ ಕ್ಯಾಥೋಲಿಕ್ ಆಗಿ ಬ್ಯಾಪ್ಟೈಜ್ ಮಾಡಲಾಯಿತು.
25ನೇ ಡಿಸೆಂಬರ್ 2024 ರಂದು ಲಖಪ್ಪ ಅವರು ಕ್ರಿಸ್ಮಸ್ ಊಟವನ್ನು ಬಡಿಸುವ ತಮ್ಮ 29 ವರ್ಷಗಳನ್ನು ಪೂರೈಸಿದರು. ಈ ವರ್ಷ ಸರಿಸುಮಾರು 125 ಜನರು ಕ್ರಿಸ್ಮಸ್ ಊಟಕ್ಕೆ ಅವರ ಮನೆಗೆ ಬಂದಿದ್ದರು. ಅವರ ನೆರೆಹೊರೆಯಲ್ಲಿ ಕೆಲವು ಕುಟುಂಬಗಳು “ನಂಬಿಗಸ್ತರು” ಆಗಿರುವುದರಿಂದ ಅವರ ಸಂಖ್ಯೆ ಕಡಿಮೆಯಾಗಿದೆ ಮತ್ತು ಅವರು ಕ್ರಿಸ್ಮಸ್ ಊಟವನ್ನು ಬಡಿಸಲು ಲಖಪ್ಪನ ಮಾದರಿಯನ್ನು ಅನುಸರಿಸುತ್ತಾರೆ.
ಲಖಪ್ಪ ಮತ್ತು ಅವರ ಕುಟುಂಬವನ್ನು ಸೇಂಟ್ ಇನೆಜ್ ಪ್ಯಾರಿಷ್ನಲ್ಲಿ ಸ್ವೀಕರಿಸಲಾಗಿದೆ ಮತ್ತು ಗೌರವಿಸಲಾಗಿದೆ. ಅವರ ಮಗ ಗೋವಿಂದ್ ಅವರ ಪ್ಯಾರಿಷ್ನಲ್ಲಿ ಯುವ ನಾಯಕರಾಗಿದ್ದರು. ಅವರು ಉಪನ್ಯಾಸಕರಾಗಿ (ಮಾಸ್ ಸಮಯದಲ್ಲಿ ಚರ್ಚ್ನಲ್ಲಿ ಓದುವವರು) ಮತ್ತು ಯೂಕರಿಸ್ಟಿಕ್ ಮಂತ್ರಿಯಾಗಿ ಮುಂದುವರೆದಿದ್ದಾರೆ. ಪ್ಯಾರಿಷಿಯನ್ನರ ಸೇವೆ ಮಾಡಲು ಅವರು ಯಾವಾಗಲೂ ಸಿದ್ಧರಾಗಿದ್ದಾರೆ.
ಲಖಪ್ಪ ತನ್ನ ಕುಟುಂಬದ ಸದಸ್ಯರು ಮತ್ತು ಇತರರ ಬಗ್ಗೆ ಉದಾರ ವ್ಯಕ್ತಿ. ಅವನು ತನ್ನ ಕ್ರಿಸ್ಮಸ್ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವಾದರೆ, 3 ರಿಂದ 5 ಶತಮಾನಗಳಿಂದ ಕ್ಯಾಥೋಲಿಕ್ ಎಂದು ಹೇಳಿಕೊಳ್ಳುವ ನಾವು, ಖಂಡಿತವಾಗಿಯೂ ಇತರರನ್ನು, ವಿಶೇಷವಾಗಿ ಕಡಿಮೆ ಸವಲತ್ತು ಹೊಂದಿರುವ ಜನರನ್ನು ಆಹ್ವಾನಿಸುವ ಮೂಲಕ ನಮ್ಮ ಸಂತೋಷವನ್ನು ಹಂಚಿಕೊಳ್ಳಬೇಕು. ಲಖಪ್ಪ ಅವರ ಉದಾತ್ತ ಉದಾರ ಕಾರ್ಯವು ಇತರರನ್ನು ಹಂಚಿಕೊಳ್ಳುವ ಮತ್ತು ಕಾಳಜಿ ವಹಿಸುವ ಅವರ ಮಾದರಿಯನ್ನು ಅನುಸರಿಸಲು ನಮಗೆ ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. – ಪ್ರತಾಪಾನಂದ ನಾಯ್ಕ್, ಎಸ್.ಜೆ
Lakhappa and his Christmas celebration
Goa,27th December 2024; In 1996, Lakhappa H. a Kannadiga Hindu, by profession a motorcycle pilot (in Goa those motorcyclists who are available to be hired to transport passengers are called pilots) living at St. Inez, Goa went to Pota, Kerala with his family, to free himself of his vices. There he was healed. He wanted to be a Catholic. But he could not get a Catholic priest or knowledgeable Catholic person to instruct him in Catholic faith. Hence, he continued as a Hindu. As a sign of gratitude to Jesus for his inner healing, he started to invite his neighbours for the Christmas lunch. Since then, every Christmas day he started to serve Christmas meal to 200 plus to his neighbours at St. Inez and Bambolim. On 31st March 2013, Lakhappa and his family were baptized as Catholics after a year of religious instruction.
On 25th December 2024 Lakhappa completed 29 years of his gesture of serving Christmas meal. This year approximately 125 persons came to his home for the Christmas meal. The number has decreased because in his neighbourhood a few families have become “Believers” and they too follow the example of Lakhappa, to serve the Christmas meal.
Lakhappa and his family have been accepted and respected in the St. Inez parish. His son Govind was a youth leader in his parish. He continues to be the lector (one who reads in the church during Mass) and Eucharistic Minister. He is ever ready to serve the parishioners.
Lakhappa is a generous person towards his family members and others. If he can share his Christmas joy with others, we who claim Catholics for 3 to 5 centuries, surely should share our joy by inviting others, especially the less privileged people. I hope and pray that the noble generous action of Lakhappa will inspire us to follow his example of sharing and caring others.-Pratapananda Naik, sj
ಶ್ರೀನಿವಾಸಪುರ – ಬೆಂಗಳೂರಿನ ವೈದೇಹಿ ಆಸ್ಪತ್ರೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀನಿವಾಸಪುರ : ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದು ತಾ.ಪಂ. ಮಾಜಿ ಸದಸ್ಯ ಕೆ.ಕೆ.ಮಂಜುನಾಥ್ ಹೇಳಿದರು.
ತಾಲೂಕಿನ ಯಲ್ದೂರು ಗ್ರಾಮದ ನ್ಯಾಷನಲ್ ಹೈಸ್ಕೂಲ್ ಶಾಲಾವರಣದಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ರವರ ಸಾರಥ್ಯದಲ್ಲಿ ಶುಕ್ರವಾರ ಬೆಂಗಳೂರಿನ ವೈದೇಹಿ ಆಸ್ಪತ್ರೆ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು.
ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಮೊಣಕಾಲು ಸಮಸ್ಯೆ , ಮೂತ್ರಕೋಶ ಸಮಸ್ಯೆ, ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತಖಾಯಿಲೆಗಳಾಗಿದ್ದು, ಆದ್ದರಿಂದ ಗ್ರಾಮೀಣ ಭಾಗದ ಸಾರ್ವಜನಿಕರು ಇಂತಹ ಶಿಬಿರಗಳಲ್ಲಿ ಪಾಲ್ಗೂಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಜೀವನವನ್ನು ನಡೆಸುವಂತೆ ಸಲಹೆ ನೀಡಿದರು.
ತಾ.ಪಂ.ಮಾಜಿ ಸದಸ್ಯ ಶ್ಯಾಗತ್ತೂರು ಸುಧಾಕರ್ ಮಾತನಾಡಿ ತಪಾಸಣೆ ಶಿಬಿರದಲ್ಲಿ ಸಮಸ್ಯೆ ಇದ್ದಲ್ಲಿ , ವೈದೇಹಿ ಆಸ್ಪತ್ರೆಯವರೇ ಉಚಿತ ಹೆಚ್ಚಿನ ಚಿಕಿತ್ಸೆ ನೀಡುತ್ತಾರೆ ಇದನ್ನ ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರಗೌಡ , ಪಿಡಿಒ ಕೆ.ಪಿ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಮೋಹನ್ಬಾಬು, ಮಾಜಿ ಅಧ್ಯಕ್ಷರಾದ ಕೆ.ಟಿ.ಜಯಣ್ಣ, ಜಿ.ಎನ್.ಕೋದಂಡರಾಮಯ್ಯ, ಸದಸ್ಯರಾದ ನಾಗರಾಜ್, ಅಂಬರೀಶ್, ಶ್ರೀನಾಥ್, ಶೆಟ್ಟಿಹಳ್ಳಿ ಹಾಲು ಡೈರಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಗಾಜಲಪಲ್ಲಿ ಚಂದ್ರಪ್ಪ, ಹರಳಕುಂಟೆ ಶಶಿಕುಮಾರ್, ರಮೇಶ್ ಬಾಬು, ಸಮಾಜ ಸೇವಕ ಅಂಬರೀಶ್, , ಕೊಳತರೂ ಗ್ರಾ.ಪಂ.ಅಧ್ಯಕ್ಷ ನಾಗಮಣಿವೆಂಕಟರಾಜು, ಅರುಣ್ಕುಮಾರ್, ನಿವೃತ್ತ ಶಿಕ್ಷಕ ಹರಿಕುಮಾರ್, ವೈದೇಹಿ ಆಸ್ಪತ್ರೆಯ ಸಂಯೋಜಕ ಡಾ|| ಪಿ.ಎ.ಲೋಕೇಶ್ಭರಣಿ, ವೈದ್ಯರಾದ ಡಾ|| ಶ್ರಾವಣಿ, ಡಾ|| ದೀಪಕ್ ಕುಮಾರ್, ಡಾ|| ಹೈದರಾಲಿ ಇದ್ದರು.