ಶಂಕರನಾರಾಯಣ : ಕಳೆದ ಎರಡೂವರೆ ದಶಕಗಳಿಂದ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಪ್ರಸ್ತುತ ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣ, ಕುಂದಾಪುರ ತಾಲೂಕಿನಲ್ಲಿ ಮುಖ್ಯಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶ್ರೀ ರವಿದಾಸ್ ಶೆಟ್ಟಿ ಇವರ ನಿಷ್ಠಾವಂತ,ಸರಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಎಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಕೊಯಂಬತ್ತೂರು ತಮಿಳುನಾಡಿನ ಹೊಸೂರು ಕ್ಲಾಸ್ಟಾ ಹಿಲ್ಸ್ ನಲ್ಲಿ ನಡೆದ ಘಟಿಕೋತ್ಸವದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು 28ನೇ ಡಿಸೆಂಬರ್, 2024 ರಂದು ಪ್ರದಾನಮಾಡಲಾಯಿತು
ಈ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಮುಖ್ಯಶಿಕ್ಷಕರನ್ನು ಸಂಸ್ಥೆಯ ಆಡಳಿತಮಂಡಳಿಯ ಅಧಿಕಾರಿದ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭಾಶಯಗಳನ್ನು ಕೋರಿರುತ್ತಾರೆ
HOLY ROSARY CHURCH, KUNDAPUR – 450 th JUBILEE SOUVENIR 2021
ಕ್ರಿಸ್ಮಸ್ – 2024 – ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ರೀತಿಯಲ್ಲಿ ಆಚರಿಸಿದ ಕಥೊಲಿಕ್ ಸಭಾ ಸಿಟಿ ವಲಯ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ಸಿಟಿ ವಲಯವು ಈ ವರ್ಷದ ಕ್ರಿಸ್ಮಸ್ ಹಬ್ಬವನ್ನು ಒಂದು ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ವಿಭಿನ್ನ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು. ವಲಯಕ್ಕೆ ಒಳಪಟ್ಟ ಎಲ್ಲಾ ಘಟಕಗಳು ಹಾಗೂ ಸದಸ್ಯರ ಆರ್ಥಿಕ ನೆರವು ರುಪಾಯಿ 90,000/- ವನ್ನು ಕ್ರಿಸ್ಮಸ್ ದಿನದಂದು ಸಿಟಿ ವಲಯದ ಅಧ್ಯಕ್ಷರಾದ ಶ್ರೀಯುತ ಅರುಣ್ ಡಿಸೋಜ ಇವರು ಶಕ್ತಿನಗರ ಘಟಕದ ಅಧ್ಯಕ್ಷರಾದ ಶ್ರೀಯುತ ಡೇವಿಡ್ ಕ್ರಾಸ್ತಾ ಇವರಿಗೆ ಹಸ್ತಾಂತರ ಮಾಡಿದರು. ಈ ವೇಳೆ ಸಿಟಿ ವಲಯದ ನಿಕಟ-ಪೂರ್ವ ಅಧ್ಯಕ್ಷರಾದ ಶ್ರೀಯುತ ವಿಲ್ಫ್ರೆಡ್ ಆಲ್ವಾರಿಸ್, ವಲಯ ಖಜಾಂಚಿ ಶ್ರೀಯುತ ಪ್ಯಾಟ್ರಿಕ್ ಲೋಬೊ, ರಾಜಕೀಯ ಸಂಚಾಲಕರಾದ ಶ್ರೀಯುತ ಟೋನಿ ಪಿಂಟೊ, ಶಕ್ತಿನಗರ ಚರ್ಚಿನ ಪಾಲನ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ಸ್ಟ್ಯಾನಿ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಮತಿ ಮೇರಿ ಪಿಂಟೊ, ಶಕ್ತಿನಗರ್ ಘಟಕದ ಕಾರ್ಯದರ್ಶಿ ಶ್ರೀಮತಿ ಲವೀನಾ ಪಿಂಟೊ, ಸಮುದಾಯ ಅಭಿವ್ರದ್ದಿ ಸಂಚಾಲಕರಾದ ಶ್ರೀಯುತ ವಿಕ್ಟರ್ ಪಾಸ್ಕಲ್ ಫೆರ್ನಾಂಡಿಸ್, ಘಟಕದ ಸದಸ್ಯರು ಉಪಸ್ಥರಿದ್ದರು.
ಶ್ರೀಯುತ ವಿಲ್ಫ್ರೆಡ್ ಆಲ್ವಾರಿಸ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಯುತ ಅರುಣ್ ಡಿಸೋಜಾ ಈ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಘಟಕದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
ಉಡುಪಿ ಧರ್ಮಪ್ರಾಂತ್ಯದಲ್ಲಿ ಸಾಮಾನ್ಯ ಜುಬಿಲಿ ವರ್ಷ 2025 ಕ್ಕೆ ಚಾಲನೆ
ಉಡುಪಿ: 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಉಡುಪಿ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29 ರಂದು ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್ ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಅದರ ದ್ಯೋತಕವಾಗಿ ವಿಶ್ವದ ಎಲ್ಲಾ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29ರಂದು ಆಯಾ ಕ್ಯಾಥೆಡ್ರಲ್ ಗಳ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಚಾಲನೆ ನೀಡಲಾಯಿತು.
ಬಳಿಕ ಧರ್ಮಾಧ್ಯಕ್ಷರು ಪವಿತ್ರ ಬಲಿಪೂಜೆ ಅರ್ಪಿಸಿ ತಮ್ಮ ಸಂದೇಶದಲ್ಲಿ ಹಳೆಯ ಒಡಂಬಡಿಕೆಯಿಂದ ಉದಾಹರಣೆಗಳನ್ನು ಉಲ್ಲೇಖಿಸುವ ಮೂಲಕ ಜುಬಿಲಿ ಮಹೋತ್ಸವದ ಅರ್ಥ ಮತ್ತು ಮಹತ್ವವನ್ನು ವಿವರಿಸಿದರ. ಮಹೋತ್ಸವವು ಐದು ಪ್ರಮುಖ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದ ಅವರು
ಜುಬಿಲಿ ಎಂದರೆ ಪಂಚ ‘ಸ’ ಗಳ ಸುಮಧರ ಸಮ್ಮಿಲನವೆ ಜುಬಿಲಿ ಸಂಭ್ರಮದ ಸಂವತ್ಸರ. ಸ್ಮರಣೆ, ಸಂತಾಪ, ಸಂಧಾನ, ಸನ್ಮಾರ್ಗ ಮತ್ತು ಸಂಭ್ರಮ. ನಮ್ಮ ದೈನಂದಿನ ಜೀವನದಲ್ಲಿ ದೇವರ ಪ್ರೀತಿಯನ್ನು ಸ್ಮರಣೆ ಮಾಡುವುದರ ಮೂಲಕ, ದೇವರು ಮತ್ತು ಸಮಾಜದೊಂದಿಗೆ ಸಂಧಾನ ಮತ್ತು ಸಾಮರಸ್ಯದ ಮೂಲಕ ಸನ್ಮಾರ್ಗದಲ್ಲಿ ಬದುಕುವ ಮೂಲಕ ಸಂಭ್ರಮದ ಆಚರಣೆ ಮಾಡುವುದು ಮಹೋತ್ಸವದ ಮುಖ್ಯ ಉದ್ದೇಶ. ಜುಬಿಲಿ ವರ್ಷವು ದೇವರ ಕೊಡುಗೆಯಾಗಿದ್ದು ಮಹೋತ್ಸವವನ್ನು ಆಚರಿಸುವಾಗ ನಾವೆಲ್ಲರೂ ಸಮುದಾಯಕ್ಕೆ ಸಮೃದ್ಧಿಯನ್ನು ತರುವಲ್ಲಿ ದೇವರ ಆಶೀರ್ವಾದಕ್ಕಾಗಿ ಕೃತಜ್ಞತೆ ಸಲ್ಲಿಸಬೇಕು ಎಂದರು.
ಸತತ ಒಂದು ವರ್ಷ ನಿರಂತರ ಕಾರ್ಯಕ್ರಮಗಳ ಮೂಲಕ ಜುಬಿಲಿ ವರ್ಷದ ಆಚರಣೆ ನಡೆಯಲಿದ್ದು, ಇದು ಹೊರಗಿನ ಆಡಂಬರಕ್ಕೆ ಅವಕಾಶವಿಲ್ಲ ಬದಲಾಗಿ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ವರ್ಷವಿಡೀ ಧರ್ಮಪ್ರಾಂತ್ಯದ ಚರ್ಚುಗಳ ಪ್ರತಿ ಕುಟುಂಬಗಳಿಗೆ ಪವಿತ್ರ ಶಿಲುಬೆಯ ಮೆರವಣಿಗೆ ಜರುಗಲಿದ್ದು ಈ ಮೂಲಕ ಆಧ್ಯಾತ್ಮಿಕ ಜೀವನಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಪವಿತ್ರ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ|ಡಾ|ರೋಶನ್ ಡಿಸೋಜಾ, ಅನುಗ್ರಹ ಪಾಲನಾ ಕೇಂದ್ರದ ನಿರ್ದೇಶಕ ವಂ|ವಿನ್ಸೆಂಟ್ ಕ್ರಾಸ್ತಾ, ಸಂಪದ ನಿರ್ದೇಶಕ ವಂ|ರೆಜಿನಾಲ್ಡ್ ಪಿಂಟೊ, ಧಾರ್ಮಿಕ ಆಯೋಗಳಗಳ ವಂ|ಸಿರಿಲ್ ಲೋಬೊ, ವಂ|ವಿಲ್ಸನ್ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಸಹಾಯಕ ಧರ್ಮಗುರುಗಳಾದ ವಂ|ಪ್ರದೀಪ್ ಕಾರ್ಡೋಜಾ, ವಂ|ಡಾ|ಜೆನ್ಸಿಲ್ ಆಳ್ವಾ, ಅತಿಥಿ ಧರ್ಮಗುರುಗಳಾದ ವಂ|ರೋನ್ಸನ್ ಡಿಸೋಜಾ, ವಂ|ಮನೋಜ್ ಫುರ್ಟಾಡೊ, ವಂ|ವಲೇರಿಯನ್ ಕ್ಯಾಸ್ತಲಿನೋ, ವಂ|ವಿನ್ಸೆಂಟ್ ಲೋಬೊ ಉಪಸ್ಥಿತರಿದ್ದರು.
ಬಾಕ್ಸ್ ಐಟಮ್
ಜುಬಿಲಿ ವರ್ಷ ಆಧ್ಯಾತ್ಮಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಹಿನ್ನಲೆಯಲ್ಲಿ ಪವಿತ್ರ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವಿದ್ದು ಧರ್ಮಪ್ರಾಂತ್ಯದಲ್ಲಿ ಅಧಿಕೃತ ಪವಿತ್ರ ಯಾತ್ರಾ ಸ್ಥಳಗಳಾದ ಮಿಲಾಗ್ರಿಸ್ ಕ್ಯಾಥೆಡ್ರಲ್ ಕಲ್ಯಾಣಪುರ, ಸೈಂಟ್ ಲಾರೆನ್ಸ್ ಮೈನರ್ ಬೆಸಿಲಿಕಾ ಅತ್ತೂರು ಕಾರ್ಕಳ, ಸ್ಟೆಲ್ಲಾ ಮಾರಿಸ್ ಪುಣ್ಯಕ್ಷೇತ್ರ ಕಲ್ಮಾಡಿ ಹಾಗೂ ಸಂತ ಅಂತೋನಿಯವರ ಪುಣ್ಯಕ್ಷೇತ್ರ ಕೆರೆಕಟ್ಟೆ ಹೊಸಂಗಡಿ ಇಲ್ಲಿಗೆ ವರ್ಷದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಜೀವನದಲ್ಲಿ ಆಧ್ಯಾತ್ಮಿಕ ಆನಂದವನ್ನು ಪಡೆಯಲು ಧರ್ಮಾಧ್ಯಕ್ಷರು ಸಲಹೆ ನೀಡಿದರು.
ಶಿವಮೊಗ್ಗ ಧರ್ಮಪ್ರಾಂತ್ಯದಲ್ಲಿ ಜಯಂತ್ಯುತ್ಸವ -2025 ರ ಉದ್ಘಾಟನೆ / INAUGURATION OF THE JUBILEE YEAR -2025 AT DIOCESE OF SHIMOGA
ಡಿಸೆಂಬರ್ 29,2024 ರಂದು ಶಿವಮೊಗ್ಗ ಧರ್ಮಕ್ಷೇತ್ರದ ಇತಿಹಾಸದಲ್ಲಿ ಚಿರಸ್ಥಾಯಿಯಾದ ದಿನವಾಗಿದೆ. ವಿಶ್ವಗುರು ಫ್ರಾನ್ಸಿಸ್ ಕರೆನೀಡಿದ “ಜ್ಯೂಬಿಲಿ -2025”ರ ಉದ್ಘಾಟನೆಯು ಪ್ರಾರಂಭಿಕವಿಧಿಗಳು ಸಿಎಸ್ಐ ಚರ್ಚಿನ ಆವರಣದಲ್ಲಿ ನೆರವೇರಿದವು. ಮಹೋತ್ಸವದ ಪ್ರಾರಂಭದಲ್ಲಿ, ವಂ. ಸಂತೋಷ್ ಅಲ್ಮೇಡಾರವರು “ದಯೆಯ ಜಪಸರ”ವನ್ನು ಮುನ್ನಡೆಸಿದರು. ನಂತರ ಜ್ಯೂಬಿಲಿ ವರ್ಷ-2025ರ ಉದ್ಘಾಟನಾ ವಿಧಿಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊರವರು ನೆರವೇರಿಸಿದರು. ಪವಿತ್ರ ಗ್ರಂಥದ ವಾಚನದ ನಂತರ ಜ್ಯೂಬಿಲಿ ವರ್ಷದ “ಶಿಲುಬೆಯ” ಕುರಿತು ವಂ.ಸಂತೋಷ್ ಪಿರೇರಾರವರು ಸಂಕ್ಷಿಪ್ತವಾಗಿ ವಿವರಿಸಿದರು. ಪವಿತ್ರ ಶಿಲುಬೆಯನ್ನು ನಂತರ ಸುಂದರವಾಗಿ ಅಲಂಕರಿಸಿದ ವಾಹನದಲ್ಲ್ಲಿರಿಸಿ, ಮೆರವಣಿಗೆಯಲ್ಲಿ ನಗರದ ಮುಖ್ಯ ರಸ್ತೆಯ ಮೂಲಕ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಕಡೆಗೆ ಭಕ್ತಿಯಿಂದ ಮುನ್ನಡೆಸಲಾಯಿತು. ಪವಿತ್ರ ಶಿಲುಬೆಯ ದಿವ್ಯಮೆರವಣಿಗೆಯಲ್ಲಿ ಧರ್ಮಾಧ್ಯಕ್ಷರು. ಗುರುಗಳು, ಧಾರ್ಮಿಕ ಸಹೋದರ ಸಹೋದರಿಯರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಭಕ್ತಾಧಿಗಳು ಭಾಗಿಯಾಗಿದ್ದರು. ಬ್ಯಾಂಡ್, ಅಲಂಕಾರಿಕ ಕೊಡೆಗಳು ಮೆರವಣಿಗೆಗೆ ಭಕ್ತಿಯ ಮೆರುಗು ನೀಡಿತು.
ಮೆರವಣಿಗೆಯು ಪವಿತ್ರಹೃದಯ ಪ್ರಧಾನಾಲಯವನ್ನು ತಲುಪಿದ ಬಳಿಕ ಪವಿತ್ರ ಜ್ಯೂಬಿಲಿ ಶಿಲುಬೆಯನ್ನು ಪ್ರಧಾನಾಲಯದ ಅಲಂಕರಿಸಿದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು. ಯಾಜಕರು ತದನಂತರ ಜ್ಯೂಬಿಲಿಯ ಪೂಜಾಬಟ್ಟೆಯಿಂದ ಶೋಭಿತರಾಗಿ, ಧರ್ಮಾಧ್ಯಕ್ಷರೊಂದಿಗೆ ಸಾಂಭ್ರಮಿಕ ದಿವ್ಯಬಲಿಪೂಜೆಯಲ್ಲಿ ಭಾಗಿಯಾದರು. ಪವಿತ್ರ ನೀರಿನ ಆಶೀರ್ವಾದ ಮತ್ತು ಭಕ್ತರ ಮೇಲೆ ಪವಿತ್ರ ಜಲದಿಂದ ಪ್ರೋಕ್ಷಣೆ ಮಾಡಿ ಜ್ಯೂಬಿಲಿ ಮಹೋತ್ಸವವನ್ನು ಅಜರಾಮರಗೊಳಿಸಿತು.
ಬಲಿಪೂಜೆಯ ಅಂತ್ಯದಲ್ಲಿ ಧರ್ಮಕ್ಷೇತ್ರದ ಆಯೋಗಗಳ ಸಂಘಟಕರಾಗಿರುವ ವಂ. ಡಾ ಸೈಮನ್ ಪಿಂಟೋ ಸಿದ್ಧಪಡಿಸಿದ ಧರ್ಮಕ್ಷೇತ್ರದ ಪಾಲನಾ ಯೋಜನೆ -2025ನ್ನು ಧರ್ಮಾಧ್ಯಕ್ಷರು ಭಕ್ತಾಧಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಜ್ಯೂಬಿಲಿ ಸಮಿತಿಯ ಸಂಚಾಲಕರಾದ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ದಿನದ ಯಶಸ್ಸಿಗೆ ಕಾರಣರಾದ ಸರ್ವರನ್ನೂ ವಂದಿಸಿದರು. ಧರ್ಮಾಧ್ಯಕ್ಷರ ಆಶೀರ್ವಾದದೊಂದಿಗೆ ದಿವ್ಯಬಲಿಪೂಜೆ ಸುಸಂಪನ್ನವಾಯಿತು. ಈ ಭಕ್ತಿಪ್ರಧಾನ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಯಾಜಕರು, ಧಾರ್ಮಿಕಸಹೋದರ ಸಹೋದರಿಯರು ಮತ್ತು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು.
INAUGURATION OF THE JUBILEE YEAR -2025 AT DIOCESE OF SHIMOGA
Shivamogga, December 30, 2024: On December 29,2024 marked a significant day in the history of the Diocese of Shimoga. On this day, the inauguration of the Jubilee year -2025 took place with pomp & gay.
The inaugural rite took place at St Thomas CSI Church, near Shivappa Naik Circle, Shimoga City. In the beginning, Rev Fr Santhosh Almeida led the Mercy Rosary. Then followed the inaugural rite, presided by Most Rev Dr Francis Serrao S J, Bishop of Shimoga. Rev Fr Santhosh Pereira gave a brief reflection on the Holy Jubilee Cross, after the reading of the holy gospel. Then followed the procession carrying the Holy Jubilee Cross on a beautifully decorated chariot through the main road of the city for around a kilometer, towards the Sacred Heart Cathedral. The chariot was in front, followed by Bishop, Priests, Women Religious and lay faithful. The musical band, colour ful Umbrellas, Altar Servers in their wonderful attire added devotional glamour to the procession.
Once the procession reached the Cathedral, the Solemn Eucharist began, as the clergy were decked with the new Jubilee vestments. The Holy Jubilee Cross was placed in the Sanctuary in a prominent place at the decorated site. Thereafter, there was the blessing of holy water near the Baptismal font and sprinkling of the holy water on the faithful, followed by the singing of Gloria.
After the post communion prayer, THE DIOCEAN PASTORAL PLAN -2025 as well as Regional Pastoral Plan was released, prepared by Very Rev Fr Dr Simon Pinto, the Diocesan Co ordinator of Commissions. At the end, Fr Clifford Roshan Pinto, the Convener of Jubilee Year Committee, proposed the vote of thanks. A large multitude of lay faithful participated with a lot of devotion in this great event. There were 40 priests and an equal number of Women religious.
ಕುಂದಾಪುರದ ಅಕ್ಷಯ ಪೂಜಾರಿ ಸಿಎ ತೇರ್ಗಡೆ
ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ನವದೆಹಲಿ ನವೆಂಬರ್ 2024 ರಲ್ಲಿ ಏರ್ಪಡಿಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಕುಂದಾಪುರ-ಕೋಣಿ ಗ್ರಾಮದ ಅಕ್ಷಯ ಪೂಜಾರಿ ತೇರ್ಗಡೆ ಹೊಂದಿ ಸಿಎ ಪದವಿ ಪಡೆದಿದ್ದಾರೆ.
ಬಾಬು ಪೂಜಾರಿ ಮತ್ತು ಶ್ರೀಮತಿ ಪದ್ದು ಪೂಜಾರಿ, ಕೋಣ್ಸಾಲ್ ಮನೆ, ಕೋಣಿ, ಕುಂದಾಪುರ ಇವರ ಪುತ್ರರಾದ ಇವರು ಕುಂದಾಪುರದ ಮೆ| ಟಿ. ಎನ್. ಪ್ರಭು ಎಂಡ್ ಕೋ. ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದು ಸಾಧನೆ ಮಾಡಿದ್ದಾರೆ.
ಲೆಕ್ಕ ಪರಿಶೋಧಕ ಟಿ. ಎನ್. ಪ್ರಭು ಹಾಗೂ ಸಂಸ್ಥೆಯ ಸಹೋದ್ಯೋಗಿಗಳು ಇವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಎಂ ಐ ಟಿ ಕುಂದಾಪುರ, ವಿಜ್ಞಾನ ಮಾದರಿ ಸ್ಪರ್ಧೆ / MIT Kundapura, Science Model Competition
ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗದ ವತಿಯಿಂದ ಎಂಐಟಿ ಕುಂದಾಪುರದಲ್ಲಿ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ವೈಜ್ಞಾನಿಕ ಪರಿಕಲ್ಪನೆಗಳ ತಿಳುವಳಿಕೆಯನ್ನು ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕೋಟ ವಿವೇಕ ಪಿಯು ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ.ಸುಜಾತಾ , ಕೋಟ ವಿವೇಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕಿ ಯಶವಂತಿ ಸ್ಪರ್ಧೆಯ ತೀರ್ಪುಗಾರಾಗಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ 80 ಕ್ಕೂ ಹೆಚ್ಚು ನವೀನ ಮಾದರಿಗಳು ಇದ್ದು, ಅದರಲ್ಲಿ 12 ಮಾದರಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಯಿತು. ರಕ್ಷಿತಾ, ಧನ್ಯ ಡಿ, ನಾಗರತ್ನ ಎಂ ನಾಯ್ಕ್, ಪ್ರೇಕ್ಷಾ ಎಸ್, ಉದ್ದವ್ವ ತಂಡ ಪ್ರಥಮ ಬಹುಮಾನದೊಂದಿಗೆ ರೂ. 5000
ನಗದು ಪಡೆದರು. ದ್ವಿತೀಯ ಸ್ಥಾನ ಮತ್ತು ರೂ. 3000 ನಗದು ಮಾನ್ಯ ಎಂ ಎಸ್, ಸೌಂದರ್ಯ ದಾಸ್ ಬಿ ಎ, ಪ್ರಮೋಧಿನಿ ಪಿ ಕೆ, ಶೇನಾ ಜೆ ಎಸ್, ದೀಪಾ ಪಿ ಅವರನ್ನೊಳಗೊಂಡ ತಂಡ ಗೆದ್ದಿತು.
ತೃತೀಯ ಸ್ಥಾನವನ್ನು ಭಾಗ್ಯಶ್ರೀ ಶೆಟ್ಟಿ, ಹರ್ಷಿತಾ, ದಿಶಾ ಶೆಟ್ಟಿ, ಪೂಜಾರಿ ವಿ ಶ್ರಿಧರ್ , ಅಖಿಲೇಶ್ ತಂಡವು ರೂ.2000 ನಗದು ಬಹುಮಾನದೊಂದಿಗೆ ಪಡೆದರು.
ಎಲ್ಲಾ ತಂಡಗಳು ಮಾಡಿದ ಶ್ಲಾಘನೀಯ ಪ್ರಯತ್ನಗಳನ್ನು ತೀರ್ಪುಗಾರರು ಶ್ಲಾಘಿಸಿದರು ಮತ್ತು ಅಮೂಲ್ಯವಾದ ಸಲಹೆಗಳನ್ನು ನೀಡಿದರು.
ವಿಭಾಗದ ಮುಖ್ಯಸ್ಥ ಪ್ರೊ.ದೀಪಕ್ ಶೆಟ್ಟಿ, ಅವರು ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿ ವಿದ್ಯಾರ್ಥಿಗಳ ಪ್ರಯತ್ನ ಮತ್ತುಅಧ್ಯಾಪಕರ ಪ್ರೇರಣೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮವನ್ನು ತ್ರಿಶಾ ಶೆಟ್ಟಿ ಮತ್ತು ಲಿಖಿತ ನಿರೂಪಿಸಿದರು. ಕೊನೆಯಲ್ಲಿ ತ್ರಿಶಾ ಶೆಟ್ಟಿ ಧನ್ಯವಾದ ಅರ್ಪಿಸಿದರು.
MIT Kundapura, Science Model Competition
The Prize distribution Ceremony of Science Model Competition which was organized at MIT Kundapura was held recently at the Auditorium of the college by Basic Science and Humanities Department. The competition was held with the aim of fostering innovation and creativity among students while enhancing their understanding of scientific concepts. Prof. Sujatha HOD of Chemistry Viveka PU college, Kota, Prof Yashwanthi Department of Electronics of the Viveka College who judged the competition were present on the occasion. Over 80 innovative models were there for the competition out of which 12 were selected for the finals Team of Rakshita, Dhanya D ugrani, Nagarathna M naik, Preksha S , Uddavva won the First Prize with a cash of Rs 5000.
Second Place with a cash prize of Rs. 3000 , won by the team consisting of Manya M S , Soundarya Das B A, Promodhini P K,Shena J S, Deepa P.
Third Place went to the team of Bhagyashree Shetty ,Harshitha, Dhisha Shetty ,Poojari V Shidhar , Akhilesh with a cash Prize Rs.2000.
Judges appreciated the commendable efforts done by all the batches of the the students and gave valuable feedback.
Head of Department Prof. Deepak Shetty,addressed the gathering appreciating the students’ efforts and motivation of the faculty members emphasizing the importance of practical learning.
The event was anchored by Trisha Shetty and Likitha.Trisha Shetty delivered the vote of thanks.
Ashawadi Prakashan’s Konkani Transliteration Book-Release (19 Jan 2025)
Ashawadi Prakashan’s 25th Year celebration of Konkani Literary Mission (Began in Kuwait in the year 2000) with publishing of 5 Konkani books.
I am pleased to invite you to this program to be held at Gantalkatte Parish Hall on 19th January 2025 from 9:30am to 12:30pm.
Book Release program followed by Konkani Poetry Recital Session to be chaired by Bai Salomi Miyapadav Mogarnad. Noted authors/poets from Goa, Mumbai are part of the program.
With Kind Regards
Valley QuadrosKonkani Servant
ಕುಂದಾಪುರ ರೋಜರಿ ಚರ್ಚಿನಲ್ಲಿ ಜುಬಿಲಿ ವರ್ಷ 2025 ಕ್ಕೆ ಚಾಲನೆ
ಕುಂದಾಪುರ,ಡಿ29; 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಉಡುಪಿ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29 ರಂದು ಭಾನುವಾರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಚಾಲನೆ ನೀಡಿದರು. ಜುಬಿಲಿ ವರ್ಷಕ್ಕೆ ಡಿಸೆಂಬರ್ 24 ರಂದು ವ್ಯಾಟಿಕನ್ ನಲ್ಲಿ ಜಗದ್ಗುರು ಪೋಪ್ ಜಗದ್ಗುರು ಫ್ರಾನ್ಸಿಸ್ ಅವರು ಸೈಂಟ್ ಪೀಟರ್ ಬೆಸಿಲಿಕಾದ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಉದ್ಘಾಟನೆ ಮಾಡಿದ್ದು ಅದರ ದ್ಯೋತಕವಾಗಿ ವಿಶ್ವದ ಎಲ್ಲಾ ಕಥೊಲಿಕ ಧರ್ಮಪ್ರಾಂತ್ಯದಲ್ಲಿ ಡಿಸೆಂಬರ್ 29ರಂದು ಆಯಾ ಕ್ಯಾಥೆಡ್ರಲ್ ಗಳ ಮುಖ್ಯ ದ್ವಾರವನ್ನು ತೆರೆಯುವ ಮೂಲಕ ಚಾಲನೆ ನೀಡಲಾಯಿತು, ಅದರಂತೆ ಕುಂದಾಪುರ ಅತ್ಯಂತ ಹಿರಿಯ ಚರ್ಚ್ ಆದ ಹೋಲಿ ರೋಜರಿ ಚರ್ಚಿನಲ್ಲಿ ಶಿಲುಭೆಯನ್ನು ಆಶಿರ್ವದಿಸಿ ಪ್ರತಿಷ್ಠಾಪಿಸುವ ಮೂಲಕ ಅ।ವಂ।ಧರ್ಮಗುರು ಪೌಲ್ ರೇಗೊ ಉದ್ಘಾಟಿಸಿ ಜುಬಿಲಿ ವರ್ಷಕ್ಕೆ ಚಾಲನೆ ನೀಡಿದರು.
ಪ್ರತಿಷ್ಠಾಪಿಸಿದ ಶಿಲುಭೆ ವರ್ಷವೀಡಿ ಅಲ್ಲಿಯೆ ಇದ್ದು, ವರ್ಷಂಪೂರ್ತಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಣೆ ನೀಡಿದರು, ಮತ್ತೊಂದು ಶಿಲುಭೆಯನ್ನು ಆಶಿರ್ವಾದಿಸಿದ, ಆ ಶಿಲುಭೆ ಕುಂದಾಪುರ ಚರ್ಚಿನ ಎಲ್ಲಾ ಕುಟುಂಬಗಳ ಮನೆಗೆ ದಿನಕ್ಕೆ ಒಂದರಂತೆ ಎಲ್ಲಾ ಮನೆಗಳಿಗೆ ಶಿಲುಭೆಯನ್ನು ಕೊಂಡಯ್ದು ಪ್ರಾರ್ಥನಾ ವಿಧಿಗಳನ್ನು ನೆಡಸಲಾಗುವುದು’ ಎಂದು ತಿಳಿಸಿ ಮೊದಲ ದಿನಕ್ಕಾಗಿ ಸಂತ ಜೋಸೆಫ್ ಕಾನ್ವಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯರವರಿಗೆ ಧರ್ಮಗುರುಗಳು ಹಸ್ತಾಂತರಿಸಿದರು. ಬಳಿಕ ಎಲ್ಲಾ ಕುಂಟುಂಬಗಳಿಗೆ ಆ ಶಿಲುಭೆಯನ್ನು ಕೊಂಡಯ್ಯಲಾಗುವುದು.
ಇದೇ ದಿನಂದಂದು ಯೇಸು, ಮೇರಿಮಾತೆ ಮತ್ತು ಸಂತ ಜೋಸೆಫ್ ಇವರ ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.