ಕುಂದಾಪುರ: ಜೀವನದಲ್ಲಿ ಅನುಭವಕ್ಕೆ ಬರುವ ಮೌಲ್ಯಗಳು ಜೀವನದ ಆಶಯ ನೆರವೇರಿಸಲು ಪ್ರೇರಣೆಯಾಗಲಿ ಎಂದು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ ದೇವದಾಸ ಕಾಮತ್ ಹೇಳಿದರು. ಅವರು
ನವೆಂಬರ್ 4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜು, ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಅಂಬಲಪಾಡಿ ಮತ್ತು ಶ್ರೀ ಕುಂದೇಶ್ವರ ದೇವಸ್ಥಾನ, ಕುಂದಾಪುರ ಇವರ ಸಹಯೋಗದಲ್ಲಿ ಒಂದು ದಿನದ “ಜೀವನ ಮೌಲ್ಯ ಶಿಕ್ಷಣ ಶಿಬಿರ” ಉದ್ಘಾಟಿಸಿ ಮಾತನಾಡಿದರು. ಮೌಲ್ಯಗಳು ನಮ್ಮ ಗುರಿಯನ್ನು ಮುಟ್ಟಲು ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್, ಸದಾನಂದ ಚಾತ್ರ, ಅಭಿನಂದನ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಮ್.ಗೊಂಡ ವಂದಿಸಿದರು. ಉಪನ್ಯಾಸಕಿ ಹರ್ಷಿತಾ ವಂದಿಸಿದರು.
ನಂತರ ನಡೆದ ಶಿಬಿರದಲ್ಲಿ ಮೊದಲ ಗೋಷ್ಠಿಯಲ್ಲಿ “ಜೀವನ ಯಾತ್ರೆಗೆ ಪ್ರೀತಿಯ ಬೆಳಕು – ಇದೊಂದು ಸುಂದರ ಪಯಣ” ಎಂಬ ವಿಷಯದ ಕುರಿತು ಎನ್.ಆರ್.ದಾಮೋದರ ಶರ್ಮ ಅವರು ಮಾತನಾಡಿದರು.
ಎರಡನೇ ಗೋಷ್ಠಿಯಲ್ಲಿ
“ಮಂಕುತಿಮ್ಮನ ಕಗ್ಗದಲ್ಲಿ ಜೀವನ ದರ್ಶನ” ಎಂಬ ವಿಷಯದ ಕುರಿತು ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿದರು. ಮೂರನೇ ಗೋಷ್ಠಿಯಲ್ಲಿ ” ಮೌಲ್ಯಯುಕ್ತ ಜೀವನ” ಕುರಿತು ಮುನಿರಾಜ ರಂಜಾಳ ಮಾತನಾಡಿದರು.
HOLY ROSARY CHURCH, KUNDAPUR – 450 th JUBILEE SOUVENIR 2021
ಕುಂದಾಪುರ ನಗರ ಪ್ರಾಧಿಕಾರ ಇದರ ಅಧ್ಯಕ್ಷರಾಗಿ ವಿನೋದ್ ಕ್ರಾಸ್ಟೊ ನೇಮಕ
ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಇದರ ಅಧ್ಯಕ್ಷರಾಗಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಅವರು ನೇಮಕಗೊಂಡಿದ್ದಾರೆ.ಇವರ ಜೊತೆಗೆ ಪ್ರಾಧಿಕಾರದ ಸದಸ್ಯರಾಗಿ ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮಹಮ್ಮದ್ ಅಲ್ಪಾಜ್ ಅವರನ್ನು ನೇಮಕಗೊಳಿಸಿ ಸರಕಾರದ ಅಧೀನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ.
ವಿನೋದ್ ಕ್ರಾಸ್ಟೊ ಬಿ.ಇ ಪದವೀದರರಾಗಿದ್ದು, ಇವರು ನಗರ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಹಿಂದೆ ಇವರ ತಂದೆ ಎಡ್ವಿನ್ ಕ್ರಾಸ್ಟೊ ಇವರು 1975ರಲ್ಲಿ ಪೌರಸಮಿತಿ ರಚಿಸಿ ಪುರಸಭೆಗೆ ಸ್ಪರ್ಧಿಸಿ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು. ಇವರ ತಾಯಿ ಶ್ರೀಮತಿ ಲೇನಿ ಕ್ರಾಸ್ಟೊ ಇವರು ಕೂಡ ಪುರಸಭಾ ಉಪಾಧ್ಯಕ್ಷೆಯಾಗಿ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದರು.
ಪ್ರಸ್ತುತ ವಿನೋದ್ ಕ್ರಾಸ್ಟೊ ಶೆವೋಟ್ ಪ್ರತಿಷ್ಠಾನ್ ಟ್ರಸ್ಟಿನ ಅಧ್ಯಕ್ಷರಾಗಿ, ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ, ಕುಂದಾಪುರ ಕಥೋಲಿಕ್ ಸಭಾ ವಲಯ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಇಂದಿಗೂ ಕಥೊಲಿಕ್ ಸಭಾ ಸಂಘಟನೇಯಲ್ಲಿ ಸಕ್ರಿಯರಾಗಿದ್ದಾರೆ, ಇವರು ಹೆಸರುವಾಸಿ ಕ್ರಾಸ್ಟೊ ಇಂಜಿನಿಯರಿಂಗ್ ವರ್ಕ್ಸ್ ಮಾಲಕರಾಗಿದ್ದಾರೆ.
ಇವರನ್ನು ಕಾಂಗ್ರೆಸಿನ ಮುಖಂಡರು, ಕಥೊಲಿಕ್ ಸಭೆಯ ಮುಖಂಡರು, ಅವರ ಅಭಿಮಾನಿಗಳು ಅಭಿನಂದಿಸಿದ್ದಾರೆ.
ಕುಂದಾಪುರ ಎಚ್ಎಂಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ
ಕುಂದಾಪುರ (ನ.1): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ಎಂಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನೆರವೇರಿತು.
ಪ್ರಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಹಲವಾರು ಪ್ರತಿಭಾ ಪ್ರದರ್ಶನಗಳು ಮೂಡಿಬಂದವು. ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.
ಭಂಡಾರ್ಕಾರ್ ಕಾಲೇಜ್ ಆರೋಹ – 2024 ಹಿಂದಿ ದಿನಾಚರಣೆ ಮತ್ತು ಅಂತರ್ ತರಗತಿ ಹಿಂದಿ ಸ್ಪರ್ಧೆಗಳ ಸಮಾರಂಭ
ಕುಂದಾಪುರ; ಹಿಂದಿ ಭಾಷೆಯು ವಿಶ್ವದ ಜನ ಮಾನಸದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಭಾವೈಕ್ಯತೆಯ ಜ್ಞಾನ ಭಂಡಾರವನ್ನು ತಲುಪಿಸುವ ಶ್ರೇಷ್ಠ ಭಾಷೆಯಾಗಿದೆ. ಸಾಮಾಜಿಕ ಭಾಂದವ್ಯ ಮತ್ತು ವೈವಿಧ್ಯಮಯ ಜನ ಜೀವನದಲ್ಲಿ ಸಮಾನತೆಯ ಸಂದೇಶವನ್ನು ಸಾರುವ ಭಾಷೆ ಹಿಂದಿ. ಇಂದು ಮಾನವನ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ಹಿಂದಿ ಭಾಷೆಯು ಉನ್ನತ ದರ್ಜೆಯಲ್ಲಿದೆ. ಭಾರತ ದೇಶದ ಸಾಂಸ್ಕೃತಿಕ ಮತ್ತು ಜನಪದೀಯ ಬದುಕಿನ ವಿವಿಧ ಜ್ಞಾನ ಪದರಗಳ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಸರಳ ಸುಂದರ ಭಾಷೆ ಹಿಂದಿಯಾಗಿದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಔದ್ಯೋಗಿಕ ಮತ್ತು ದುಡಿಮೆಯ ಭಾಷೆಯಾಗಿರುವ ಹಿಂದಿ ಅನುವಾದ, ಸಾಹಿತ್ಯದ ಬರವಣಿಗೆಯ ಬೆಳವಣಿಗೆಯ ಮೂಲಕ ಇತರ ಭಾಷಾ ಪದಗಳನ್ನು ತನ್ನೊಳಗೂಡಿಸಿಕೊಳ್ಳುತ್ತಾ, ಅಂತರ್ಜಾಲ ಮತ್ತು ಕಂಪ್ಯೂಟರ್ ನಲ್ಲಿ ಅತಿ ಹೆಚ್ಚು ಮಾಹಿತಿ ನೀಡುತ್ತಿರುವ ಭಾಷೆಯಾಗಿದೆ ಎಂದು ಉಡುಪಿ ತಾಲೂಕಿನ ಶಿರ್ವದ ಸೈಂಟ್ ಮೇರಿಸ್ ಕಾಲೇಜಿನ ನಿವೃತ್ತ ಹಿಂದಿ ಪ್ರಾಧ್ಯಾಪಕ ಡಾ. ವಿಠಲ್ ನಾಯಕ್ ಹೇಳಿದರು. ಅವರು ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲಿ ನಡೆದ “ಆರೋಹ – 2024” ಹಿಂದಿ ದಿನಾಚರಣೆಯ ಅಂತರ್ ತರಗತಿಹಿಂದಿ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸುತ್ತಾ, ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಶಿಕ್ಷಣ ಪದ್ದತಿಯು ವಿಶ್ವಕ್ಕೇ ಮಾದರಿಯಾಗಿದೆ ಹಾಗೂ ಭವಿಷ್ಯದಲ್ಲಿ ಹಿಂದಿ ಭಾಷೆಯು ಜಾಗತಿಕ ಸಂಪರ್ಕ ಭಾಷೆ ಮತ್ತು ಸಂವಹನ ಭಾಷೆಯಾಗಿ ಮೂಡಿ ಬರಲಿದೆ ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದರು.
“ಆರೋಹ” ಹಿಂದಿ ದಿನಾಚರಣೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಶುಭಕರಾಚಾರಿ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಫುಲ್ಲಾ. ಬಿ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಜಿ. ಎಂ. ಗೋಂಡಾ, ಪದವಿ ಕಾಲೇಜಿನವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಸತ್ಯನಾರಾಯಣ ಹತ್ವಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಬಿ. ಕಾಂ ವಿದ್ಯಾರ್ಥಿ ಧ್ರುವ ಅತಿಥಿಗಳನ್ನು ಪರಿಚಯಿಸಿದರು.
ವೇಲೆನ್ಸಿಯಾ ಚರ್ಚ್ನಲ್ಲಿ 71ಮಕ್ಕಳ ದೃಢೀಕರಣದ ಸಂಸ್ಕಾರದ ಸಂಭ್ರಮ / Celebration of Confirmation of 71 children in Valencia Church
News by Gordon DAlmeida Pics by Stanly Bantwal
ಮಂಗಳೂರು; ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ನವೆಂಬರ್ 1, 2024 ರಂದು ವೆಲೆನ್ಸಿಯಾ ಚರ್ಚ್ನಲ್ಲಿ ಸಾಮೂಹಿಕ 71 ಮಕ್ಕಳಿಗೆ ದೃಢೀಕರಣದ ಸಂಸ್ಕಾರವನ್ನು ನೀಡಿದರು. ಚರ್ಚ್ನಲ್ಲಿ ಕುಟುಂಬ, ಸ್ನೇಹಿತರು ಮತ್ತು ಧರ್ಮಕೇಂದ್ರದವರು ಪವಿತ್ರ ಸಂಭ್ರಮವನ್ನು ವೀಕ್ಷಿಸಿದರು.
ಪವಿತ್ರ ಬಲಿದಾನದ ಆಚರಣೆಯ ಅಧ್ಯಕ್ಷತೆಯನ್ನು ವಹಿಸಿದ ಬಿಷಪ್ ಸಲ್ಡಾನ್ಹಾ ಅವರು ಯುವ ಯುವತಿಯರಿಗೆ ದೃಢೀಕರಣವನ್ನು ಧೈರ್ಯ ಮತ್ತು ಸಹಾನುಭೂತಿಯಿಂದ ತಮ್ಮ ನಂಬಿಕೆಯಿಂದ ಜೀವಿಸಲು ಪ್ರೋತ್ಸಾಹಿಸಿದರು. ಧರ್ಮಕೇಂದ್ರದ ಧರ್ಮಗುರು ವಂ। ರೋಕ್ ಡಿಎಸ್ಎ ಮತ್ತು ಸಹಾಯಕ ಧರ್ಮಗುರು ವಂ। ಪ್ರದೀಪ್ ರೋಡ್ರಿಗಸ್ ಅವರು ಬಿಷಪ್ ಅವರೊಂದಿಗೆ ಸಹಬಲಿದಾನ ಅರ್ಪಿಸಿ ಅವರು ಆಧ್ಯಾತ್ಮಿಕ ಪಯಣದಲ್ಲಿ ಈ ಮಹತ್ವದ ಹೆಜ್ಜೆಯನ್ನು ಪ್ರಾರಂಭಿಸುವ ಮಕ್ಕಳಿಗೆ ಸ್ಪೂರ್ತಿ ನೀಡಿದರು.
ಪವಿತ್ರ ಆತ್ಮದ ಉಡುಗೊರೆಗಳ ಮುದ್ರೆಯನ್ನು ಸಂಕೇತಿಸುವ ದೃಢೀಕರಣ ಸಮಾರಂಭವು ಚರ್ಚಿನ ಯುವ ಯುವತಿಯರಿಗೆ ಮತ್ತು ಅವರ ಕುಟುಂಬಗಳಿಗೆ ಪ್ರಮುಖ ಮೈಲಿಗಲ್ಲನ್ನು ಸೂಚಿಸುವ ಈ ವಿಶೇಷ ಸಂಭ್ರಮ ಏಕತೆ ಮತ್ತು ನಂಬಿಕೆಯನ್ನು ಆಚರಿಸುವ ಮೂಲಕ ಸ್ಥಳೀಯ ಸಮುದಾಯವನ್ನು ಒಟ್ಟುಗೂಡಿಸಿತು.
Celebration of Confirmation of 71 children in Valencia Church
In a profound moment of faith and community, the Bishop of Mangalore Diocese, Rev. Dr Peter Paul Saldanha, administered the Sacrament of Confirmation to 71 children during 5pm mass on 1 November 2024 at Valencia Church. The church was filled with family, friends, and parishioners gathered to witness the sacred occasion.
Bishop Saldanha, who also presided over the Holy Eucharistic celebration, encouraged the young confirmands to live out their faith with courage and compassion. Parish Priest Fr Roque DSa and Assistant Parish Priest Fr Pradeep Rodrigues served as concelebrants, joining the bishop in prayer and support for the children embarking on this significant step in their spiritual journey.
The confirmation ceremony, which symbolizes the sealing of the gifts of the Holy Spirit, marks an important milestone for the young parishioners and their families. This special event brought together the local community, celebrating unity and faith.
Passed away – Stella Dsouza (77) (St.Joseph Vaz ward) Holy Rosary Church Kundapura
W/o Late Joseph Dsouza
M/o Meena / Alex Fernandes, Metilda D’Souza, Miller / Sonica D’Souza
Grandmother of Alen, Mishel, Shreyan
Passed away on 2nd November 2024.
Funeral Cortege leaves Residence “ZION” opp. Indian petrol bunk, Sunday 3rd November, 3.15 p.m, Mass at 3.45 p.m & Burial at Holy Rosary Church , Kundapur .
Sorrowing Family.
Contact : 9964027232
ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ರಿಕ್ಷಾ ಚಾಲಕರೊಂದಿಗೆ ರಾಜ್ಯೋತ್ಸವ ಸಂಭ್ರಮ
ಉದ್ಯಾವರ : ಕರ್ನಾಟಕ ರಾಜ್ಯೋತ್ಸವದ ಸಂಭ್ರಮವನ್ನು ಉದ್ಯಾವರ ಲಯನ್ಸ್ ಕ್ಲಬ್ ಸನ್ ಶೈನ್ ಸ್ಥಳೀಯ ಸಂಪಿಗೆ ನಗರ ರಿಕ್ಷಾ ಚಾಲಕ ಮಾಲಕರೊಂದಿಗೆ ಸಂಭ್ರಮದಿಂದ ಆಚರಿಸಿದರು.
ಪ್ರತಿಷ್ಠಿತ ಎಂಸಿಸಿ ಬ್ಯಾಂಕ್ ಉದ್ಯೋಗಿ ಲಯನ್ ರಿತೇಶ್ ಡಿಸೋಜ ಕರ್ನಾಟಕ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ಬಳಿಕ ಎಲ್ಲಾ ಆಟೋರಿಕ್ಷಾ ಚಾಲಕರಿಗೆ ಮತ್ತು ಆಗಮಿಸಿದ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಧ್ವಜ ಮತ್ತು ಶಾಲು ನೀಡಲಾಯಿತು.
ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯ ಲಯನ್ ರೊಯ್ಸ್ ಫೆರ್ನಾಂಡಿಸ್, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲಯನ್ ರೋನಾಲ್ಡ್ ರೆಬೆಲ್ಲೊ, ಕಾರ್ಯದರ್ಶಿ ಲಯನ್ ಜೆರಾಲ್ಡ್ ಪಿರೇರಾ, ಕೋಶಾಧಿಕಾರಿ ಲಯನ್ ಅನಿಲ್ ಮಿನೇಜಸ್, ಸಂಪಿಗೆನಗರ ರಿಕ್ಷಾ ಚಾಲಕ ಮಾಲಕರ ಸಂಘದ ಸಂತೋಷ್, ರವಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ದೇಶಕರಾದ ಲಯನ್ ಎಡ್ವಿನ್ ಲೂವಿಸ್ ಸ್ವಾಗತಿಸಿದರೆ, ಲಯನ್ ಐವನ್ ಡಿಸಿಲ್ವ ಧನ್ಯವಾದ ಸಮರ್ಪಿಸಿದರು. ಲಯನ್ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.
ಸಕಲ ಸಂತರ ದಿನದಂದು ಮೌಂಟ್ ರೋಸರಿ ಚರ್ಚ್ನಲ್ಲಿ ವಾಹನಗಳ ಆಶೀರ್ವಾದ
ಕಲ್ಯಾಣಪುರ. 1 ನೇ ನವೆಂಬರ್, 2024ಃ ಮೌಂಟ್ ರೋಸರಿ ಚರ್ಚ್ನಲ್ಲಿ ಆಚರಣೆಗಳಣನ್ನು ನೆಡೆಸಲಾಯಿತು. ಸಕಲ ಸಂತರ ದಿನ ವಾಹನಗಳ ಆಶೀರ್ವಚನ, 69 ನೇ ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ, ನಾಲ್ಕು ಆಚರಣೆಗಳಣನ್ನು ನೆಡೆಸಲಾಯಿತು. ಹಬ್ಬದ ಪವಿತ್ರ ಮಾಸಾಚರಣೆಯ ನಂತರ, ಪ್ರಧಾನ ಧರ್ಮಗುರು ರೆ.ಡಾ.ರೋಕ್ ಡಿಸೋಜಾ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಪ್ರಯಾಣಿಸುವವರಿಗೆ ಸುರಕ್ಷತೆ ಮತ್ತು ದೈವಿಕ ರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು ಮತ್ತು ಸಹಾಯಕ ವಿಕಾರ್ ರೆ.ಫಾ.ಆಲಿವರ್ ಸಿ. ನಜರೆತ್ ಅವರೊಂದಿಗೆ ವಾಹನಗಳಿಗೆ ಪವಿತ್ರ ಜಲದಿಂದ ಆಶೀರ್ವದಿಸಿದರು.
ಕಥೋಲಿಕ್ ಸಭಾ ಮೌಂಟ್ ರೋಸರಿ ಚರ್ಚ್ ಘಟಕವು ಅದರ ಅಧ್ಯಕ್ಷರಾದ ಎಲಿಯಾಸ್ ಡಿಸೋಜಾ ಮತ್ತು ತಂಡದ ನೇತೃತ್ವದಲ್ಲಿ ವಾಹನಗಳಿಗೆ ವಿಸ್ತಾರವಾದ ಮತ್ತು ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿತ್ತು.
ಕಾರ್ಯಕ್ರಮವು ಸಮುದಾಯದಲ್ಲಿ ದೀರ್ಘಕಾಲದ ಸಂಪ್ರದಾಯವನ್ನು ಎತ್ತಿ ತೋರಿಸುತ್ತದೆ, ನಂಬಿಕೆ ಮತ್ತು ಏಕತೆಯಲ್ಲಿ ಚರ್ಚ್ ಭಕ್ತಾಧಿಗಳನ್ನು ಒಟ್ಟುಗೂಡಿಸಿತು. ಅನೇಕ ಭಕ್ತಾಧಿಗಳು ತಮ್ಮ ದೈನಂದಿನ ಪ್ರಯಾಣ ಮತ್ತು ಪ್ರಯಾಣದಲ್ಲಿ ಸುರಕ್ಷತೆಗಾಗಿ ಆಶಿಸುತ್ತಾ, ಆಶೀರ್ವಾದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
Blessings of the Vehicles of parishioners, in Mount Rosary Church, on All Saints Day
Friday, 1st November, 2024 has witnessed three celebrations together – The All Saints Day, 69th Karnataka Rajyotsava and Deepavali, the festival lights – in the Church Campus. After the festal Holy Mass at 7.30 am, the main celebrant and the parish priest Rev Dr Roque DSouza offered special prayers, emphasizing the importance of safety and divine protection for those who travel and blessed the vehicles along with Assistant Vicar Rev Fr Oliver C. Nazareth.
Catholic Sabha Mount Rosary Church Unit led by its President Elias DSouza and team, made elaborate and systematic parking arrangements for wide range of vehicles with reserved slots for various categories.
Following the Mass, the priest conducted the blessing in the church premises, where vehicles lined up as the priest moved from one to the next, sprinkling holy water and offering blessings to protect drivers, passengers, and pedestrians.
The event highlighted a long-standing tradition in the community, bringing together parishioners in faith and unity. Many parishioners expressed gratitude for the blessings, hoping for safety in their daily travels and journeys.
The blessing of vehicles on All Saints Day at Mount Rosary Church has become an annual reminder of seeking divine intervention for safety and well-being on the roads.
Reported by: P. Archibald Furtado, Photographs: Praveen Cutinho.
ಶ್ರೀನಿವಾಸಪುರ ಶ್ರೀ ವಿಜಯಾದ್ರಿ ವಿದ್ಯಾ ಸಂಸ್ಥೆ ಆವರಣದಲ್ಲಿ ಶುಕ್ರವಾರ 69ನೇ ಕನ್ನಡರಾಜ್ಯೋತ್ಸವ
ಶ್ರೀನಿವಾಸಪುರ; ಪಟ್ಟಣ ಹೊರವಲಯದ ಶ್ರೀ ವಿಜಯಾದ್ರಿ ವಿದ್ಯಾ ಸಂಸ್ಥೆ ಆವರಣದಲ್ಲಿ ಶುಕ್ರವಾರ 69ನೇ ಕನ್ನಡರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನ ವಿದ್ಯಾ ಸಂಸ್ಥೆಯ ಆಡಳಿತ ಮಂಡಲಿವತಿಯಿಂದ ವಿತರಿಸಲಾಯಿತು.
ಆಡಳಿತ ಮಂಡಲಿ ಅಧ್ಯಕ್ಷ ಆರ್.ನಾರಾಯಣಸ್ವಾಮಿ, ಆಡಳಿತಾಧಿಕಾರಿ ಎ.ವೆಂಕಟರಾಮರೆಡ್ಡಿ,ಕಾರ್ಯದರ್ಶಿ ಬಾಬುಗೌಡ, ಪ್ರಾಂಶುಪಾಲ ಎನ್.ಶಿವಕುಮಾರ್, ಉಪನ್ಯಾಸಕರಾದ ಸತೀಶ್, ಪಿ.ವಿ.ಶಿವಕುಮಾರ್, ರೀಯಜ್ ಪಾಷ, ಭವ್ಯ, ಬಿ.ಎಮ್.ಪವಿತ್ರ,ಎನ್.ಚಲಪತಿ, ಎಚ್.ಎನ್.ಸಂದೀಪ್, ಅನೀಲ್ಕುಮಾರ್, ಪೃಥ್ವಿ, ಶಿಕ್ಷಕರಾದ ಸಲ್ಮ ಸುಲ್ತಾನ, ಪ್ರೇಮಾ, ಸುಮತಿ, ಎನ್.ಝೈಬಾ ಆಯೇಶಾ, ವೈಷ್ಣವಿ, ಅಶ್ವಥಮ್ಮ ಇದ್ದರು.