HOLY ROSARY CHURCH, KUNDAPUR – 450 th JUBILEE SOUVENIR 2021

ಫಿಟ್ ಇಂಡಿಯಾ ಪ್ರೀಡಂ ರನ್ ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮ


ಅಕ್ಟೋಬರ್ 30ರಂದು ಭಂಡಾರ್ಕಾರ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ , ಮಂಗಳೂರಿನ ಯಾನೆಪೋಯ ದಂತ ವಿಜ್ಞಾನ ಕಾಲೇಜಿನ ಏನ್ ಏಸ್ ಎಸ್ ಘಟಕ, ನಾವುಂದ ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಫ್ರಿಡಂ ರನ್ 3.0 ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುಂದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಿತು.
ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಚಗೊಳಿಸಿದರು.
ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಹಾಗೂ ಸ್ಥಾಪಕ ಅದ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಎಲ್ಲಾ ಲಯನ್ಸ್ ಸದಸ್ಯರು, ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ದಿನೇಶ್ ಆಚಾರ್ ವಂದಿಸಿದರು.ಯೆನೆಪೋಯ ಕಾಲೇಜಿನ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಇಮ್ರಾನ್, ಭಂಡಾರ್ಕರ್ಸ್ ಕಾಲೇಜಿನ ಏನ್ ಎಸ್ ಎಸ್ ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಅರುಣ್ ಎ ಎಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಶುಭಕಾರಾಚಾರಿ ಹಾಗೂ ಉಪನ್ಯಾಸಕರಾದ ಅಣ್ಣಪ್ಪ ಪೂಜಾರಿ, ಶರಣ್ ಹಾಗೂ ಸಂತೋಷ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ವಿದುಷಿ ಸುಜಾತ ಗುರವ್ ಹಿಂದುಸ್ಥಾನಿ ಗಾಯನ ನಡೆಯಲಿದೆ


ವಿದುಷಿ ಶ್ರೀಮತಿ ಸುಜಾತ ಗುರವ್ ಅವರ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ನ. 6 ರಂದು ಆದಿತ್ಯವಾರ ಕುಂದಾಪುರದ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ (ರಿ.) ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಮತ್ತು ಶ್ರೀ ಪ್ರಕಾಶ್ ರಾವ್ ಸ್ಮಾರಕ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಸಂಗೀತಾಸಕ್ತರನ್ನ ಆಹ್ವಾನಿಸಲಾಗಿದೆ.
ತಬಲಾದಲ್ಲಿ ಟಿ. ರಂಗ ಪೈ, ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ, ಮಣಿಪಾಲ ಸಹಕರಿಸಲಿದ್ದಾರೆ. ಶ್ರೀಮತಿ ಸುಜಾತ ಗುರವ್ ಪ್ರಸಿದ್ಧ ಸಂಗೀತಕಾರ ಸಂಗಮೇಶ್ವರ ಗುರವ್ ಅವರ ಪುತ್ರಿಯಾಗಿದ್ದಾರೆ. ಇವರ ಸಹೋದರ ಕೈವಲ್ಯ ಕುಮಾರ್ ಗುರವ್ ಸಹ ಇವರ ಗುರುವಾಗಿದ್ದಾರೆ.

ಎಂಐಟಿ ಕುಂದಾಪುರದ ವಿದ್ಯಾರ್ಥಿನಿ ಮೇಘನಾ ಇವರಿಂದ ಎಸಿಎಸ್ ಟಿಎಂ ಇಂಟೆರ್ ರ್ನ್ಯಾಷನಲ್ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ

ಶ್ರೀನಿವಾಸಪುರ ಅರಣ್ಯ ಒತ್ತುವರಿದಾರರ ಮತ್ತು ಅರಣ್ಯ ಇಲಾಖೆ ಮಧ್ಯೆ ಸಂಘರ್ಷ

ಶ್ರೀನಿವಾಸಪುರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭ

ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 3 – ದಿನ 8 “ಕೆಸರು ಗದ್ದೆಯಲ್ಲೊಂದಿನ”

ಮಿಲಾಗ್ರಿಸ್ ಕಾಲೇಜ್ ಕೈಗಾರಿಕಾ ಪೂರ್ವ ಭೇಟಿ ತರಬೇತಿ ಕಾರ್ಯಕ್ರಮ / Milagres College – Pre-Industrial Visit Training Program

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜ್ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ನಿಯೋಜನೆ ಕೋಶದಿಂದ ಕೈಗಾರಿಕಾ ಭೇಟಿ / Industrial visit by Milagres College Career Guidance and Placement Cell, Kalyanpur

ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 3 – ದಿನ 7

ಕುಂದಾಪುರ- ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮದಿನಾಚರಣೆ