
ಬೆಳ್ತಂಗಡಿ: ಬೆಳ್ತಂಗಡಿಯ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯು ನವೆಂಬರ್ 8 ಮತ್ತು 9 ರಂದು ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದೆ ಮತ್ತು ಶಾಲಾ ಚಾಂಪಿಯನ್ಶಿಪ್ ನ್ನು ಗೆದ್ದುಕೊಂಡಿದೆ 7ನೇ ತರಗತಿಯ ಅಲ್ಸ್ಟನ್ 600ಮೀ ಮತ್ತು 400ಮೀ ಓಟದಲ್ಲಿ ಪ್ರಥಮ ಹಾಗೂ 200ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು. ಅವರಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ದೊರಕಿತು. 9ನೇ ತರಗತಿಯ ಸ್ಟ್ರುಸ್ಟಿ ಶಾರ್ಟ್ಪುಟ್ನಲ್ಲಿ ಪ್ರಥಮ ಮತ್ತು ಹ್ಯಾಮರ್ ಥ್ರೋನಲ್ಲಿ ತೃತೀಯ ಸ್ಥಾನ ಪಡೆದರು. ಹರ್ಡಲ್ಸ್ 100 ಮೀ.ನಲ್ಲಿ 10ನೇ ತರಗತಿಯವರಾದ ಧನುಷ್ ಮತ್ತು ಶಮಿಲ್ ಎರಡು ಮತ್ತು ಮೂರನೇ ಸ್ಥಾನ ಪಡೆದರು. 10ನೇ ತರಗತಿಯ ಜೋಶನ್ 100ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು. 9ನೇ ತರಗತಿಯ ವೆಲೋನಾ ವಾಕ್ ರೇಸ್ನಲ್ಲಿ ದ್ವಿತೀಯ ಸ್ಥಾನ ಪಡೆದರು. ಪ್ರಾಥಮಿಕ ಬಾಲಕರ ರಿಲೇಯಲ್ಲಿ ಲೆವಿನ್, ಆಶಿಶ್, ಪ್ರಜ್ನೇಶ್ ಮತ್ತು ಅವೀಜ್ ಪ್ರಥಮ ಸ್ಥಾನ ಪಡೆದರು. ಹೈಸ್ಕೂಲ್ ಬಾಲಕರ ರಿಲೇಯಲ್ಲಿ ಜೋಶನ್, ವರುಣ್, ಧನುಷ್ ಮತ್ತು ಶಾಮಿಲ್ ಪ್ರಥಮ ಸ್ಥಾನ ಪಡೆದರು. ವಿದ್ಯಾರ್ಥಿಗಳಿಗೆ ಪಿಇಟಿ ಶಿಕ್ಷಕರಾದ ಶ್ರೀ ಶರತ್ ಪಿಂಟೋ ತರಬೇತಿ ನೀಡಿದರು.






