ಹಾಲಾಡಿ ಜಿಲ್ಲಾ ಪಂಚಾಯತ್ -ಕಾಂಗ್ರೆಸ್ ಬೆಂಬಲಿಗರಿಗೆ ಅಭಿನಂದನಾ ಸಭೆ

JANANUDI.COM NETWORK

ಗ್ರಾಮದ ಅಭಿವೃದ್ದಿಯ ಚಿಂತನೆ ಇರುವವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ದರೆ ಗ್ರಾಮಗಳ ಅಭಿವೃದ್ಧಿ ಯಾಗುವುದು ಖಚಿತ. ಪಂಚಾಯತ್ ರಾಜ್ ವ್ಯವಸ್ಥೆ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.
ರವಿವಾರ ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಸಭಾಂಗಣದಲ್ಲಿ ಹಾಲಾಡಿ ಜಿಲ್ಲಾ ಪಂಚಾಯತ್ ಗೆದ್ದ ಮತ್ತು ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಅಶೋಕ ಕುಮಾರ್ ಕೊಡವೂರು ಅವರು ಗ್ರಾಮೀಣ ಮಟ್ಟದಲ್ಲಿ ಪಕ್ಷ ಕಟ್ಟಿದಾಗ ಮಾತ್ರ ಪಕ್ಷಕ್ಕೆ ಬಲ ಬರುತ್ತದೆ. ಆ ನಿಟ್ಟಿನಲ್ಲಿ ಚಿಂತನೆ ಮಾಡುವುದು ಅಗತ್ಯ ವೆಂದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿಯವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ನ ಮತ್ತೊರ್ವ ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಅಹ್ಮದ್, ಬಾಲಕೃಷ್ಣ ಪೂಜಾರಿ, ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ಹಾರ್ದಳ್ಲಿ- ಮಂಡಳ್ಳಿ ನೂತನ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ, ಹಾಲಾಡಿಯ ಸಾಧು ಹರಿಜನ, ಮೊಳಹಳ್ಳಿಯ ಇಂದಿರಾ ಶೆಟ್ಟಿ, ಉದಯ ಕುಮಾರ ಶೆಟ್ಟಿ ಮಡಾಮಕ್ಕಿ ,ವಸುಂದರ ಹೆಗ್ಡೆ ಹೆಂಗವಳ್ಳಿ , ಆನಂದ ಮೊಗವೀರ ಹೊಂಬಾಡಿ ಮಂಡಾಡಿ, ಐಟಿ ಸೆಲ್‌ನ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ವಿಕಾಸ್ ಹೆಗ್ಡೆ,ಕಿಸಾನ್ ಘಟಕದ ಭಾಸ್ಕರ ಶೆಟ್ಟಿ, ಇಚ್ಛಿತಾರ್ಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಸದಸ್ಯರಾದ ಅಶ್ವತ್ ಕುಮಾರ್, ಆಶೋಕ್ ಸುವರ್ಣ, ಡೊಲ್ಫಿ ಡಿಕೋಸ್ಟ, ರೋಶನ್ ಶೆಟ್ಟಿ, ಶೋಭಾ ಸಚ್ಚಿದಾನಂದ ಮೊದಲಾದವರು ಉಪಸ್ಥಿತರಿದ್ದರು.

ಜಯರಾಮ ಶೆಟ್ಟಿ ಅಧ್ಯಕ್ಷ ರು ಬೆಳ್ವೆ ವ್ಯವಸಾಯ ಸಹಕಾರಿ ಸೇವಾ ಸಂಘ ಇವರು ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಕೃಷ್ಣ ಪೂಜಾರಿ ಅಮಾಸೆಬೈಲ್ ವಂದಿಸಿದರು.

ಸನ್ಮಾನನ ಪಟ್ಟಿಯನ್ನು ಆಶಾ ಕಾರ್ವಾಲೋ ವಾಚಿಸಿದರು. ಜ್ಯೋತಿ ಡಿ.ನಾಯ್ಕ ಪ್ರಾರ್ಥಿಸಿದರು.