ಕುಂದಾಪುರ(ಜ.1):ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 4ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕೆ ಪೂಜಾರಿ, ನಿಹೊನ್ಸಿಕಿ ಕರಾಟೆ ಆಂಡ್ ಸ್ಪೋರ್ಟ್ಸ ಫೆಡರೇಶನ್ ನ ವತಿಯಿಂದ ಕರಾಟೆಯಲ್ಲಿ ಕೊಡಮಾಡುವ 2024 ನೇ ಸಾಲಿನ
ʼದಿ ಬೆಸ್ಟ್ ಸ್ಟೂಡೆಂಟ್ʼ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು