

ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಆಯೋಜಿಸಲ್ಪಟ್ಟ “ಸಮ್ಮರ್ ಕ್ಯಾಂಪ್ 2024 – ಪ್ಯಾಟಿ ಮಕ್ಳಳ್ ಹಳ್ಳಿ ಟೂರ್” ನ 7ನೇ ದಿನವಾದ ಎಪ್ರಿಲ್ 11, ಗುರುವಾರದಂದು ವಿದ್ಯಾರ್ಥಿಗಳು ರೈಲು ಪ್ರಯಾಣದ ಅನುಭವವನ್ನು ಪಡೆದರು. ಬೆಳಿಗ್ಗೆ 8.15ಕ್ಕೆ ಕುಂದಾಪುರದ ರೈಲ್ವೆ ನಿಲ್ದಾಣದಿಂದ ಮಡಗಾಂವ್ ಎಕ್ಸ್ಪ್ರೆಸ್ ಟ್ರೈನ್ನಲ್ಲಿ ಹೊರಟ ವಿದ್ಯಾರ್ಥಿಗಳು ಬೈಂದೂರಿನ ಸುರಂಗಮಾರ್ಗದ ಮೂಲಕ ಶಿರೂರು ರೈಲ್ವೆ ನಿಲ್ದಾಣದವರೆಗೆ ಪ್ರಯಾಣಿಸಿ, ರೈಲು ಪ್ರಯಾಣದ ಖುಷಿಯನ್ನು ಅನುಭವಿಸಿದರು,
ನಂತರ ಶಿರೂರುನಿಂದ ಹೊರಟು ಒತ್ತಿನೆಣೆಯಲ್ಲಿರುವ ನೇಸರ ಕ್ಷಿತಿಜಧಾಮದಲ್ಲಿ ವಿವಿಧ ಮೋಜು ಮಸ್ತಿಯ ಆಟಗಳನ್ನು ಆಡಿ ಸಂಭ್ರಮಿಸಿದರು. ಬಳಿಕ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ತಲುಪಿ, ವಿನಾಯಕನ ದರ್ಶನ ಪಡೆದು ಅಲ್ಲಿಯೇ ಊಟ ಮುಗಿಸಿ ಶಾಲೆಗೆ ತಲುಪಿದರು.

