


ಕುಂದಾಪುರ (06.04.2024) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಆಯೋಜಿಸಲಾದ ಸಮ್ಮರ್ ಕ್ಯಾಂಪ್ ‘ಪ್ಯಾಟಿ ಮಕ್ಕಳ್ ಹಳ್ಳಿ ಟೂರ್’ ನ 2ನೇ ದಿನದಂದು ಎಲ್ಲಾ ಶಿಬಿರಾರ್ಥಿಗಳು ಕಮಲಶಿಲೆಯ ಸುಪಾಶ್ವ ಗುಹಾಲಯವನ್ನು ವೀಕ್ಷಿಸಿ, ಗುಹೆಯ ಹುಟ್ಟು, ಅಲ್ಲಿನ ವಿಶೇಷತೆಯನ್ನು ಮಾಹಿತಿಗಾರರಾದ ರಾಘವೇಂದ್ರ ಜೋಗಿಯವರಿಂದ ಅರಿತರು.
ನಂತರ ಕಮಲಶಿಲೆಯ ಹಿರಿಯ ಅನುಭವಿ ಕೃಷಿಕರಾದ ನಾಗಭೂಷಣ ಭಟ್ ರವರಿಂದ ಅಡಿಕೆ ತೋಟದ ನಿರ್ವಹಣೆ, ಬೆಳೆಯ ಸಂರಕ್ಷಣೆ ಹಾಗೂ ವಿವಿಧ ಯಂತ್ರೋಪಕರಣಗಳ ಬಳಕೆಯ ಬಗೆಗಿನ ಮಾಹಿತಿ ಪಡೆದರು.
ಬಳಿಕ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದು ಅಡಿಕೆ ಹಾಳೆ ತಟ್ಟೆಯ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ನಾಗರಾಜ ಚಾತ್ರರವರಿಂದ ಹಾಳೆ ತಟ್ಟೆಯ ತಯಾರಿಕಾ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.


