ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಹಾಗೂ ಜಾಕೀರ್ ಹುಸೇನ್ ಮೊಹಲ್ಲಾದ ಮಾರಿಯಮ್ ಮಸೀದಿಯಲ್ಲಿ ಇಫ್ತಾರ್ ಸಂದರ್ಭದಲ್ಲಿ ಹಿಂದೂ ಭಾಂದವರು ಸಹ ಭಾಗಿಯಾಗಿ ಆಚರಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ .ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದ ಮಾರಿಯಮ್ ಮಸೀದಿ ಬಳಿ ನಡೆದ ಪವಿತ್ರ ರಂಜಾನ್ ಮಾಯ ಇಫ್ತಾರ್ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರಿಗೆ ಮಸೀದಿನಲ್ಲಿ ಇಫ್ತಾರ್ ಮಾಡಿಸುವ ಮೂಲಕ ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇದ್ದಿವಿ ಎಂಬ ಮನೋಭಾವ ತೋರಿಸಿದರು .
ಈ ಇಫ್ತಾರ್ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ವೃತ್ತ ನೀರಿಕ್ಷಕ ಸಿ.ರವಿ ಕುಮಾರ್ ರವರು ಭಾಗವಹಿಸಿ ಮಾತನಾಡಿ ಇಸ್ಲಾಂನ ತತ್ವಗಳಲ್ಲಿ ರಂಜಾನ್ ಉಪವಾಸ ಎನ್ನುವುದು ಅತೀ ಪವಿತ್ರವಾದದ್ದು ಇದರಲ್ಲಿ ಮುಸ್ಲಿಂ ಬಾಂಧವರು ಅತಿ ಕಠಿಣವಾದ ಉಪವಾಸವನ್ನು ಆಚರಿಸುತ್ತಿದ್ದಾರೆ .
ಕಾರ್ಯ ಅಲ್ಲಾನನ್ನು ಪ್ರಾರ್ಥಿಸುತ್ತಾ ತಮ್ಮ ಬೇಡಿಕೆಗಳನ್ನು ಆಹವಾಲನ್ನು ಮುಂದಿಡುವ ಮೂಲಕ ಹಬ್ಬವನ್ನು ಆಚರಿಸಿಕೊಳ್ಳುವುದರ ಜೊತೆಗೆ ಇಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹಿಂದೂ ಬಾಂಧವರು ಆಗಮಿಸಿ ಉಪವಾಸವನ್ನು ತೆಗೆಯುವ ವೇಳೆ ಮುಸ್ಲಿಂ ಬಾಂಧವರಿಗೆ ಅಲ್ಲಾಹನಲ್ಲಿ ಶುಭ ಪ್ರಾರ್ಥನೆ ಮಾಡಿದರು . ಈ ವೇಳೆ ವೃತ್ತ ನಿರೀಕ್ಷಿಕರಾದ ರವಿ ಕುಮಾರ್ ,ಮೌಲಾನಾ ಅಬು ಬಕರ್ ಪುರಸಭೆ ಸದಸ್ಯ ಕ ಅನೀಸ್ ಅಹ್ಮದ್ , ಕೆ ಕ ಮಂಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ರೆಡ್ಡಿ ಮುನಿವೆಂಕಟರೆಡ್ಡಿ , ಶ್ರೀನಿವಾಸ್ , ಮಂಜುನಾಥ್ ಶಂಕರ್ . ಹಾಗೂ ಮುಸ್ಲಿಂ ಬಾಂದವರು , ಹಿಂದೂ ಮುಖಂಡರು ಹಾಜರಾಗಿದ್ದರು .



