ಕಾರವಾರ: ಕುಮಟಾ- ಕಾರವಾರ ಮಧ್ಯೆ ಹೆದ್ದಾರಿಯ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ ಏಳು ಜನರ ಪೈಕಿ ಶಾಂತಾ ನಾಯ್ಕ ಎಂಬ ಮಹಿಳೆಯ ಶವ ಪತ್ತೆಯಾಗಿದೆ.
ಇಂದು ಬೆಳಗಿನ ಜಾವ 8-45 ಕ್ಕೆ ಧರೆ ಕುಸಿದಿತ್ತು. ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆ ಪಕ್ಕದ ಗುಡ್ಡ ಕುಸಿಯಿತು. ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಇದ್ದ ಟೀ ಸ್ಟಾಲ್ ಹಾಗೂ ಮನೆಯ ಮೇಲೆ ಅಪಾರ ಪ್ರಮಾಣದ ಮಣ್ಣು ಬಿದ್ದು, ಚಹಾ ಅಂಗಡಿಯಲ್ಲಿ ಇದ್ದ ಏಳು ಜನ ಮಣ್ಣಿನ ಅಡಿ ಸಿಲುಕಿದ್ದಾರೆ ಎನ್ನಲಾಗಿದೆ .
ಗುಡ್ಡದ ಪಕ್ಕ ನಿಂತಿದ್ದ ಒಂದು ಲಾರಿ, ಒಂದು ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದೆ. ಗಡ್ಡು ಕುಸಿದ ಮಣ್ಣಿನಡಿ ಜಗನ್ನಾಥ (55), ಲಕ್ಷ್ಮಣ ನಾಯ್ಕ( 47), ಶಾಂತಿ ನಾಯ್ಕ, ಮಕ್ಕಳಾದ ರೋಶನ್, ಅವಂತಿಕಾ ಇದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕುಮಟಾ ಅಂಕೋಲಾ ಮಧ್ಯೆ ರಸ್ತೆ ಸಂಚಾರ ಸ್ಥಗಿತವಾಗಿದೆ.