JANANUDI.COM NETWORK
ಕುಂದಾಪುರ : ಉಡುಪಿ ನಗರದ ಮಹಿಳಾ ಕಾಲೇಜಿನಲ್ಲಿ ಹಿಜಾಬ್ (ಮುಸ್ಲಿಂ ಹುಡುಗಿಯರು ಧರಿಸುವ ಶೀರ ವಸ್ತ್ರ) ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ ಬೆನ್ನಲ್ಲೇ ಕುಂದಾಪುರದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಕೂಡ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಲೆ ಎದ್ದಿದೆಯೆ೦ದು ತಿಳಿದು ಬಂದಿದೆ.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಿಜಾಬ್ ವಿಷಯವಾಗಿ ಮುಸ್ಲಿಂವಿದ್ಯಾರ್ಥಿನಿಯರ ಪೋಷಕರೊಂದಿಗೆ ಮಾತುಕತೆ ನಡೆಸಿದ್ದು ಅಸಫಲವಾಗಿದೆಎಂದು ತಿಳಿದುಬಂದಿದೆ .
ವಸ್ತ್ರಸಂಹಿತೆ ಹೊರತಾಗಿ ಬೇರೆ ಬಟ್ಟೆಗಳಿಗೆ ಅವಕಾಶ ಇಲ್ಲ ಎಂದು ಸಚಿವರು ಸೂಚನೆ ನೀಡಿದ್ದರು ಆದರೆ ಉಡುಪಿಯಾ ವಿದ್ಯಾರ್ಥಿನಿಯರು ನ್ಯಾಯಾಲಯಡಾ ಮೆಟ್ಟಲೇರಿದ್ದಾರೆ. ಶಾಲಾ ಸಂಸ್ಥೆ ಸಮವಸ್ತ್ರದ ಹೊರತಾಗಿ ಇತರ ವಸ್ತ್ರ ಧರಿಸಿ ಬಂದರೆ ಕಾಲೇಜು ಆವರಣದೊಳಗೆ ಪ್ರವೇಶ ಇಲ್ಲ ಎಂದು ತಿಳಿಸಲಾಗಿದೆಯೆಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಪೊಲೀಸರಿಗೆ ಪೊಲೀಸರಿಗೆ ತಿಳಿಸಲಾಗಿದ್ದು ಕುಂದಾಪುರ ಪೊಲೀಸರು ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.