ಎರಡು ದಿನಗಳಲ್ಲಿ ಅವಶ್ಯ ಇದ್ದವರಿಗೆ ವ್ಯಾಕ್ಸಿನ್ಸ್ ನೀಡದಿದ್ದರೆ, ನ್ಯಾಯಾಲಯ ವ್ಯಾಕ್ಸಿನ್ಸ್ ನೀಡಬೇಕೆಂದು ಆದೇಶ ನೀಡಬೇಕಾಗುತ್ತದೆ – ಹೈಕೋರ್ಟ್ ಎಚ್ಚರಿಕೆ

JANANUDI.COM NETWORK

ಬೆಂಗಳೂರು:ಮೇ.13. ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಲಸಿಕೆ ನೀಡಿಕೆಯಲ್ಲಿ ವಿಳಂಬ ಧೋರಣೆ ಅನುಸರಿ ರಾಜ್ಯ ಸರ್ಕಾರ ಲಸಿಕೆ ಕೊರತೆ ಎಂದು ಹೇಳಿ ಜನರು ಲಸಿಕಾ ಕೇಂದ್ರಗಳಿಗೆ ಬಂದು ವಾಪಸ್ ಹೋಗುವಂತೆ ಸತಾಯಿಸುತ್ತದೆ. ಇದೆಂಥ ಲಸಿಕಾ ಅಭಿಯಾನ ಎಂದು ಹೈಕೋರ್ಟ್ ಕರ್ನಾಟಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತು.


ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನರಿದ್ದಾರೆ, ಆದರೂ ಇನ್ನೂ ಒಂದು ಪರ್ಸೆಂಟ್ ಜನರಿಗೆ ಲಸಿಕೆ ನೀಡಲಾಗಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಪರಿಸ್ಥಿಯಲ್ಲಿ ರಾಜ್ಯದ ಜನತೆಗೆ ಲಸಿಕೆ ನೀಡುವುದಾದರೂ ಯಾವಾಗ’ ಕಟುವಾಗಿ ಪ್ರಶ್ನಿಸಿದೆ.


ಈಗಾಗಲೇ ಮೊದಲ ಡೋಸ್ ಲಸಿಕೆ ಪಡೆದವರಿಗೆ 2ನೇ ಡೋಸ್ ಸಿಕ್ಕಿಲ್ಲ. 2ನೇ ಡೋಸ್ ಪಡೆಯುವುದು ಜನರ ಹಕ್ಕಲ್ಲವೇ? ಸುಮಾರು 26 ಲಕ್ಷ ಜನರು ವ್ಯಾಕ್ಸಿನ್ ಗಾಗಿ ಕಾಯುತ್ತಾ ಇದ್ದಾರೆ. ಈ ಅಂತರವನ್ನು ಹೇಗೆ ಸರಿಪಡಿಸುತ್ತೀರಿ? ವ್ಯಾಕ್ಸಿನ್ಸ್ ಜನರಿಗೆ ಸಮರ್ಪಕವಾಗಿ ನೀಡಿ, ಇಲ್ಲದಿದ್ದರೆ ಇನ್ನು 2 ದಿನಗಳಲ್ಲಿ ವ್ಯಾಕ್ಸಿನ್ ನೀಡ ಬೇಕೆಂದು ನ್ಯಾಯಾಲಯ ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ ಕರ್ನಾಟಕ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ