ಗರ್ಭವಾಸ್ಥೆಯಲ್ಲಿ ಅಧಿಕ ರಕ್ತದೊತ್ತಡದಿಂದ ಪ್ರಿ-ಎಕ್ಲಾಂಪ್ಸಿಯಾ ಅಸ್ವಸ್ಥತೆ ಉಂಟಾಗುತ್ತದೆ- ಇದು ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ

ಕೋಲಾರ,ಡಿ.27: ಫ್ಲೋರೋಸಿಸ್ ಒಂದು ಮಹಾಮಾರಿಯಾಗಿ ಪರಿಣಮಿಸಿದೆ. ಫ್ಲೋರೋಸಿಸ್ ದಂತ ಹಾಗೂ ಮೂಳೆಯ ದುಷ್ಪರಿಣಾಮಗಳ ಜೊತೆ ಬಹು ಅಂಗಾಂಗಗಳ ಮೇಲೂ ಸಹ ಪ್ರಭಾವ ಬೀರುತ್ತದೆ. ಗರ್ಭವಾಸ್ಥೆಯನ್ನು ಸಹ ಫ್ಲೋರೋಸಿಸ್ ಹೊರೆತುಪಡಿಸಿಲ್ಲ. ಇದರ ಪ್ರಯುಕ್ತ ಬಹಳ ಸಂಶೋಧನೆಗಳು ಭಾರತ ಹಾಗೂ ಇತರ ರಾಷ್ಟ್ರಗಳಲ್ಲಿಯೂ ಸಹ ನಡೆಯುತ್ತಿದೆ.
ಅಮೇರಿಕಾದ ಮಹಾವಿದ್ಯಾಲಯದ ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ಗರ್ಭವಾಸ್ಥೆಯಲ್ಲಿ ಅಧಿಕ ರಕ್ತದೊತ್ತಡದಿಂದಾಗುವ ಹಾಗೂ ಸಂಬಂಧಿತ ಅಸ್ವಸ್ಥತೆಯನ್ನು ಪ್ರಿ-ಎಕ್ಲಾಂಪ್ಸಿಯಾ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಸಾಮಾನ್ಯವಾಗಿ 20 ವಾರಗಳ ಗರ್ಭಾವಸ್ಥೆಯ ನಂತರ ಸಂಭವಿಸುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಪ್ರಿ-ಎಕ್ಲಾಂಪ್ಸಿಯಾ ಅಸ್ವಸ್ಥತೆಯಿಂದ ತಾಯಿ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಕೃತಿಯಲ್ಲಿ ಫ್ಲೋರೋನಿ ಅಂಶವು ಅನಿಲ ರೂಪದಲ್ಲಿ ಅಧಿಕವಾಗಿ ಕಂಡುಬರುತ್ತದೆ. ಫ್ಲೋರೋನಿ ಅನ್ನು ಸಂಯುಕ್ತದಿಂದ ಬೇರ್ಪಡಿಸಿದಾಗ ಫ್ಲೋರೈಡ್ ಅಯಾನು (ಈಲ) ಆಗಿ ರೂಪಗೊಳ್ಳುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣದ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಫ್ಲೋರೈಡ್ ಪ್ರಭಾವ ಬೀರಬಹುದು ಎಂಬುದು ಸಂಶೋಧನೆಯಿಂದ ಹಾಗೂ ಅಂಕಿ ಅಂಶಗಳಿಂದ ಧೃಡಲ್ಪಟ್ಟಿರುತ್ತದೆ. ಗರ್ಭಾಶಯದಲ್ಲಿನ ಪ್ರಿ-ಎಕ್ಲಾಂಪ್ಟಿಕ್ ಬದಲಾವಣೆಗಳನ್ನು ವೇಗಗೊಳಿಸುವಲ್ಲಿ ಫ್ಲೋರೈಡ್ ಪಾತ್ರ ಬಹು ಮುಖ್ಯವಾಗಿರುತ್ತದೆ. ಪ್ರಿ-ಎಕ್ಲಾಂಪ್ಸಿಯಾ ಮತ್ತು ಫ್ಲೋರೈಡ್ ರೋಸಿಸ್ ಸಂಬಂಧಿತ ಸಂಶೋಧನೆಯ ಧಾಖಲೆಗಳ ಕೊರತೆಯನ್ನು ಮೌಲ್ಯಮಾಪನ ಮಾಡಬೇಕಾಗಿರುವುದರಿಂದ ಹಾಗೂ ಕೋಲಾರವು, ಫ್ಲೋರೋಸಿಸ್‍ಗೆ ಹೆಚ್ಚು ಸ್ವಭಾವಕ್ಕೆ ಒಳಗಾಗುವುದರಿಂದ ಶ್ರೀದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ (SDUMC) ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಫ್ಲೋರೋಸಿಸ್ ಸಂಶೋಧನೆ ಮತ್ತು ಪ್ರಾಯೋಗಿಕ ಲ್ಯಾಬೋರೇಟರಿ (FRRL) ಅನ್ನು ಸ್ಥಾಪಿಸಿದ್ದು ಮತ್ತು ಸಮುದಾಯ ಮಟ್ಟದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ.
ಇಲ್ಲಿಯವರೆಗೆ ಫ್ಲೋರೋಸಿಸ್‍ನ ಕುರಿತು ಕನಿಷ್ಠ 12 ಸಂಶೋಧನೆ ಯೋಜನೆಗಳು ಪೂರ್ಣಗೊಳಿಸಿದೆ. ಅಂಗರಚನಾಶಾಸ್ತ್ರ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹಯೋಗದಲ್ಲಿ ಡಾ.ಶಶಿಧರ್ ಕೆ.ಎನ್, ಡಾ.ಆರ್. ಸಾಯಿ ದೀಪಿಕಾ, ಡಾ.ಹರೀಶ್ ಆರ್ ಮತ್ತು ಶ್ರೀಮತಿ ಇಂದುಮತಿ ಎ.ಎನ್ ಅವರು ಪ್ರಿ-ಎಕ್ಲಾಂಪ್ಸಿಯಾದ ಮೂರು ಯೋಜನೆಗಳನ್ನು ನಡೆಸಿದರು.
ಕೋಲಾರವು ಸಮುದ್ರ ಮಟ್ಟದಿಂದ 849 ಮೀ ಎತ್ತರದಲ್ಲಿ, ಕರ್ನಾಟಕದ ಆಗ್ನೇಯ ಭಾಗದಲ್ಲಿರುವ ಜಿಲ್ಲೆ. ಗಣಿಗಾರಿಕೆ ಮತ್ತು ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಪ್ರಾಕೃತಿಕ ಕಾರಣಗಳಿಂದಲೂ ಕೋಲಾರದ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯುಂಟು. ವೈದ್ಯಕೀಯ ಕ್ಷೇತ್ರದಲ್ಲಿ, ಫ್ಲೋರೋಸಿಸ್ ಪ್ರಪಂಚದಾದ್ಯಂತ ಕಾಳಜಿಯ ಕಾಯಿಲೆಯಾಗಿದ್ದು, ಇದನ್ನು ವ್ಯಾಪಕವಾಗಿ ತನಿಖೆ ಮಾಡಬೇಕು. ಶ್ರೀದೇವರಾಜ್ ಅರಸು ವೈದ್ಯಕೀಯ ಮಹಾವಿದ್ಯಾಲಯವು ಫ್ಲೋರೋಸಿಸ್ ಮತ್ತು ಪ್ರಿಕ್ಲಾಂಪ್ಸಿಯಾ ಕುರಿತು ವೆಬಿನರ್ ಅನ್ನು ಪ್ರಮುಖ ಅತಿಥಿ ಡಾ. ಲಾಜ್ಯಾ ದೇವಿ ಗೋಯಲ್ ಪ್ರಾಚಾರ್ಯ ಮತ್ತು ಸ್ತ್ರಿ ರೋಗ ಪ್ರಸೂತಿ ವಿಭಾಗದ ಮುಖ್ಯಸ್ಥರು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಟಿಂದ, ಪಂಜಾ ಅವರೊಂದಿಗೆ ನಡೆಸಿತು.
ಅವರು ತಾಯಿ ಮತ್ತು ಭ್ರೂಣದ ಆರೋಗ್ಯದ ಮೇಲೆ ಫ್ಲೋರೈಡ್‍ನಿಂದ ಹಾನಿಕಾರಕ ಪರಿಣಾಮಗಳಾಗುವ ಸಾಧ್ಯತೆಗಳನ್ನು ವಿಶ್ಲೇಷಿಸಿದರು. ವೆಬಿನರ್ ಅನ್ನು ನಮ್ಮ ಫ್ಲೋರೋಸಿಸ್ ಸಂಶೋಧನೆ ಮತ್ತು ಉಲ್ಲೇಖಿತ ಲ್ಯಾಬೊರೇಟರಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು. (https://www.youtube.com/watch?v=ToODcS83JCk) ಹೆಚ್ಚಿನ ಮಾಹಿತಿಗಾಗಿ, ಈ ದೂರವಾಣಿ 9845248742 ಸಂಖ್ಯೆಯನ್ನು ಸಂಪರ್ಕಿಸಬಹುದು.