ಅಸ್ತಮಾ ಅಲರ್ಜಿಗೆ ಗಿಡಮೂಲಿಕೆ ಔಷಧಿ ವಿತರಣಾ ಶಿಬಿರ

ಕೋಲಾರ ಅಕ್ಟೋಬರ್ 10 : ಅಕ್ಟೋಬರ್ 9ರ ಭಾನುವಾರ ಅಶ್ವೀಜ ಮಾಸ ಪವಿತ್ರ ಶರದ್ ಹುಣ್ಣಿಮೆಯ ದಿನದ ಮಧ್ಯರಾತ್ರಿ ಕಿತ್ತಂಡೂರು ಆನಂದ ಮಾರ್ಗ ಶಾಲೆಯ ಆವಣರದಲ್ಲಿ ಆನಂದ ಮಾರ್ಗ ಪ್ರಚಾರಕ ಸಂಘ ಹಾಗೂ ಆನಂದ ಸುವರ್ಣ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್ ಮತ್ತು ಆನಂದ ಮಾರ್ಗ ಶಾಲೆ, ಕಿತ್ತಂಡೂರು, ತೊಟ್ಲಿ ಅಂಚೆ, ಕೋಲಾರ ತಾಲ್ಲೂಕು ಇವರು ಏರ್ಪಡಿಸಿದ್ದ 21ನೇ ಶಿಬಿರ ಯಶಸ್ವಿಯಾಗ ನಡೆಯಿತು.
ಬಾರಿ ಮಳೆಯ ನಡುವೆ ಸಂಜೆಯಿಂದ ರಾತ್ರಿ ಪೂರ್ತಿ ಮಳೆ ಸುರಿದರೂ ಜನರು ಮಳೆಯನ್ನು ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ ಬಸ್, ಕಾರು, ಆಟೋ ಕ್ಯಾಬ್‍ಗಳಲ್ಲಿ ಜನ ಜಮಾವಣಿಯಾಗಿ ಸುಮಾರು ಎರಡು ಕಿಲೋಮೀಟರ್ ರಸ್ತೆ ಬ್ಲಾಕ್ ಆಗಿತ್ತು. ಗಿಡ ಮೂಲಿಕಾ ಔಷಧಿಗಳಿಂದ ತಯಾರಾದ ಪಾಯಸದ ಔಷಧಿ ಸಿದ್ಧಪಡಿಸಿ ಮಧ್ಯರಾತ್ರಿ ಆಚಾರ್ಯ ಚಿನ್ಮಯಾನಂದ ಅವದೂತರು, ಆಚಾರ್ಯ ಗುಣೀಂದ್ರರವರು ಮತ್ತು ಆಚಾರ್ಯ ಗಡಿ ಮಯಾನಂದ ಅವದೂತರ ಸಮ್ಮುಖದಲ್ಲಿ ಮಧ್ಯರಾತ್ರಿ ಪ್ರಾರ್ಥನೆಯೊಂದಿಗೆ ವಿತರಣೆ ಮಾಡಿದರು. ಈ ಹಿಂದಿನ ಶಿಬಿರಗಳಲ್ಲಿ ಔಷಧಿ ಪಡೆದು ಗುಣಮುಖರಾದ ಅನೇಕ ಜನರು ಆಚಾರ್ಯರ ಪಾದಗಳಿಗೆ ನಮಸ್ಕರಿಸಿ ಪ್ರಣಾಮಗಳನ್ನು ಅರ್ಪಿಸಿ, ಕೃತಜ್ಞತೆಗಳನ್ನು ತಿಳಿಸಿದರು.


ಅನೇಕ ಜನರನ್ನು ಸ್ವಯಂಪ್ರೇರಿತರಾಗಿ ಶಿಬಿರಕ್ಕೆ ಕರೆ ತಂದು ಮಳೆಯಲ್ಲಿಯೇ ನಿಂತು, ನೆಂದು ಔಷಧಿಯನ್ನು ಅತ್ಯಂತ ಭಕ್ತಿ ಪೂರ್ವಕವಾಗಿ ಸೇರಿಸಿದರು. ಅನೇಕ ಜನ ಶಿಬಿರಕ್ಕೆ ಮಳೆಯ ಕಾರಣ ಬರಲು ಆಗದೆ ನಿರಾಸೆಯಾಗಿ ಸ್ವಾಮಿಜಿಗಳಿಗೆ ಕರೆ ಮಾಡಿ ಬೈಕ್‍ನಲ್ಲಿ ಬಸ್‍ನಲ್ಲಿ ಬರುವಂತಹ ಅನೇಕ ಶಿಭಿರಾರ್ಥಿಗಳು ತಮ್ಮ ಅಳಲನ್ನು ಹೇಳಿಕೊಂಡರು ಮತ್ತೊಮ್ಮೆ ನಮಗೆ ಔಷಧಿ ನೀಡಲು ಮತ್ತೊಂದು ನಕ್ಷತ್ರ ಸಮಯ ಕೇಳಿಕೊಂಡರು.
ಸ್ವಾಮೀಜಿಗಳು ಅವರ ಕಷ್ಟಗಳಿಗೆ ಸ್ಪಂದಿಸಿ ಮುಂದಿನ ಕಾರ್ತಿಕ ಹುಣ್ಣಿಮೆರ ಮದ್ಯರಾತ್ರಿ ಇದೇ ರೀತಿ ಗಿಡಮೂಲಿಕಾ ಪಾಯಸ ಔಷಧಿಯನ್ನು ವಿತರಿಸುವ ಶಿಬಿರ ಆಂದ್ರ ಪ್ರದೇಶದಲ್ಲಿನ ಹಿಂದೂಪುರದಲ್ಲಿ ಶ್ರೀ ಸರಸ್ಪತಿ ಶ್ರೀ ಸರಸ್ಪತಿ ವಿದ್ಯಾಮಂದಿರ ನಿಂಕಂಪಲ್ಲಿ ರಸ್ತೆ ಹಿಂದೂಪುರದಲ್ಲಿ ವ್ಯವಸ್ಥೆ ಮಾಡಲಾಗುವುದು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಆಚಾರ್ಯರು ಕೋರಿದರು.
ಈ ರೀತಿ ಅನೇಕ ಜನಪರ ಸೇವಾ ಕಾರ್ಯಗಳಿಂದ ಪ್ರಚಲಿತವಾಗಿ ಆನಂದ ಮಾರ್ಗ ಸಂಸ್ಥೆಯ ಸೇವೆಯನ್ನು ಜನ ಗೌರವಯುತವಾಗಿ ಪ್ರಶಂಸೆ ಮಾಡುತ್ತಿದ್ದಾರೆ ಇದೇ ರೀತಿ ಇನಷ್ಟು ಒಳ್ಳೆಯ ಕಾರ್ಯಕ್ರಮಗಳನ್ನು ನಡೆಯಲಿ ಎಂದು ಆಶಿಸುತ್ತೇವೆ.