ಸ್ವಾತಂತ್ರ್ಯ ನಂತರ ದೇಶವನ್ನು ಆಳಿದ ಸರಕಾರಗಳು ಭಾರತ ದೇಶಕ್ಕೆ ಮತ್ತು ಜನತೆಗೆ ಏನು ಮಾಡಿಲ್ಲ, ಭ್ರಮಾ ಲೋಕದಲ್ಲಿ ತೆಲಿಸಿ ಅಧಿಕಾರಕ್ಕೆ ಬರುವುದಷ್ಟೆ ಅವರ ಸಾಧನೆ: ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ

JANANUDI.COM NETWORK

ಕುಂದಾಪುರ, ಜೂ.13; ಸ್ವಾತಂತ್ರ್ಯ ನಂತರ ದೇಶವನ್ನು ಆಳಿದ ಸರಕಾರಗಳು ಭಾರತ ದೇಶಕ್ಕೆ ಮತ್ತು ಜನತೆಗೆ ಏನು ಮಾಡಿಲ್ಲ ಬಿಜೆಪಿಗೆ ಅಧಿಕಾರ ಕೊಟ್ಟರೆ ದೇಶದ ಎಲ್ಲಾ ಪ್ರಚೆಗಳನ್ನು 5 ವರ್ಷಗಳಲ್ಲಿ ಶ್ರೀಮಂತರನ್ನಾಗಿ ಮಾಡುತ್ತೆವೆಂದು ಜನರನ್ನು ಭ್ರಮಾ ಲೋಕದಲ್ಲಿ ತೆಲಿಸಿ ಅಧಿಕಾರಕ್ಕೆ ಅಧಿಕಾರಕ್ಕೆ ಬರುವುದಷ್ಟೆ ಅವರ ಸಾಧನೆ, ಹೀಗೆ ಅಧಿಕಾರಕ್ಕೆ ಬಂದ ನರೇಂದ್ರ ಮೋಧಿ ನೇತ್ರತ್ವದ ಬಿಜೆಪಿ ಸರಕಾರ ನೋಟ್ ಬ್ಯಾನ್ ,ಜಿ ಎಸ್ ಟಿ ಯಂತಹ ಅವೈಜ್ಞಾನಿಕ ಮಸೂದೆ ಜ್ಯಾರಿ ಮಾಡುವ ಜೊತೆಗೆ ಕರೋನಾದಂತಹ ಮಹಾಮಾರಿ ಸಾಂಕ್ರಾಮಿಕ ರೋಗ ಇರುವ ಸಂದರ್ಭದಲ್ಲಿ ಜನತೆ ಆಹಾರ ವಸ್ತು ಖರಿದಿಗೆ ಕಷ್ಟದಲ್ಲಿರುವಾಗ ನಿರಂತರ ಡಿಸೇಲ್, ಪೆಟ್ರೋಲ್ ,ಗ್ಯಾಸ್ ದರ ಎರಿಸಿ ತನ್ನನ್ನು ಅಧಿಕಾರ ದಲ್ಲಿ ಕೂರಿಸಿದ ಪ್ರಜೆಗಳನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿದ್ದಾರೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದರು.

ತೈಲ ಬೆಲೆ ಏರಿಕೆಯ 3 ನೇ ದಿನದ ಪ್ರತಿಭಟನೆಯ ಪ್ರಯುಕ್ತ ಹುಣ್ಸೆಮಕ್ಕಿ ಇಂಡಿಯಾನ್ ಆಯಿಲ್ ಪಂಪ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಗ್ಯಾಸ್ ಸಿಲಿಂಡರ್ ಗೆ 400 ರೂಪಾಯಿ ಇದ್ದಾಗ 5 ರೂಪಾಯಿ ಹೆಚ್ಚಾದರೂ ರಸ್ತೆ ತಡೆ ಮಾಡುವವರು ಅದೇ ಗ್ಯಾಸ್ ಸಿಲಿಂಡರ್ ಗೆ 900 ರೂಪಾಯಿ ಆದಾಗಲೂ ಮಾತಾಡಿಲ್ಲ. ಪೆಟ್ರೋಲ್ ಡೀಸೆಲ್ ಲೀಟರ್ ಗೆ 50 ರೂಪಾಯಿ ಆಸುಪಾಸು ಇದ್ದಾಗ 10 ಪೈಸೆ ಏರಿಕೆಯಾದರು ರಸ್ತೆ ತಡೆಮಾಡಿ ಪ್ರತಿಭಟನೆ ಮಾಡಿದ ಬಿ ಜೆ ಪಿ ಯವರು ಕೊರೊನಾ ಸಂಕಷ್ಟ ಕಾಲದಲ್ಲಿ ಒಂದೇ ತಿಂಗಳಿಗೆ 19 ಬಾರಿ ಪೆಟ್ರೊಲ್‌ ಡೀಸೆಲ್ ಬೆಳೆ ಏರಿಕೆ ಮಾಡಿ ಲೀಟರ್ ಗೆ 100 ರೂಪಾಯಿ ದಾಟಿದರೂ ಮಾತಾಡದೆ ಸಮರ್ಥನೆ ಮಾಡುತ್ತಿರುವುದು ದುರದ್ರಷ್ಟಕರ. ತೈಲ ದರ ಏರಿಕೆ ಕಾರಣದಿಂದ ಸಾಗಾಣಿಕೆ ವೆಚ್ಚ ದುಬಾರಿಯಿಂದ ಎಲ್ಲಾ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ.

2014 ರ ಮೊದಲು ಪೆಟ್ರೊಲ್‌ ಡೀಸೆಲ್ ಗೆ ಕೇಂದ್ರ ಸರ್ಕಾರ ವಿಧಿಸುತ್ತಿದ್ದ ತೆರಿಗೆ ಎಷ್ಟು, ಈಗಿನ ಕೇಂದ್ರ ಸರ್ಕಾರದ ತೆರಿಗೆ ಎಷ್ಟು ಇನ್ನುವ ಕನಿಷ್ಠ ಜ್ಞಾನ ಇಲ್ಲದ ಬಿ ಜೆ ಪಿ ಯವರು ಇಂದು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಬದಲು, ಅವರ ಪರ ಮಾತಾಡುವ ಬದಲು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆನಂದ ಮೊಗವೀರ ಯಡಾಡಿ,ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಪೂಜಾರಿ, ದಿನೇಶ ಮೊಗವೀರ ,ಆರ್ ಜಿಪಿಆರ್ ಎಸ್ ಅಧ್ಯಕ್ಷ ಸತೀಶ ಜಪ್ತಿ ,ಸಂತೋಷ ಕುಮಾರ್ ಶೆಟ್ಟಿ ಬಿದ್ಕಲ್ ಕಟ್ಟೆ ,ಅನಿಲ್‌ ಕುಮಾರ ಶೆಟ್ಟಿ , ಅಜಯ ಶೆಟ್ಟಿ ಗಾವಳಿ ,ಆದರ್ಶ ಗಾವಳಿ,ಅನಂತ ಕುಲಾಲ, ರಘುರಾಮ ಪ್ರಭು ,ಆದರ್ಶ ಮೊಳಹಳ್ಳಿ , ಜಯಕರ ಶೆಟ್ಟಿ ದೀಕ್ಷಿತ್ ,ಸಲಾಂ ,ಕಿಶೋರ್ ಮತ್ತಿತರು ಉಪಸ್ಥಿತರಿದ್ದರು.