ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಹಿಮೋಗ್ಲೊಬಿನ್ ಪರೀಕ್ಷೆ, ಆರೋಗ್ಯ ಮಾಹಿತಿ ಶಿಬಿರ

JANANUDI.COM NETWORK


ಕುಂದಾಪುರ, ಅ.24; ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ಹಿಮೋಗ್ಲೊಬಿನ್ ಪರೀಕ್ಷೆ, ಆರೋಗ್ಯ ಮಾಹಿತಿ ಶಿಬಿರ ಹಾಗೂ ಫಾ|ಮುಲ್ಲರ್ಸ್ ಆಸ್ಪತ್ರೆಯ ಹೆಲ್ತ್ ಕಾರ್ಡ್ ಬಗ್ಗೆ ಮಾಹಿತಿ ಕಾರ್ಯಕ್ರಮ ಕುಂದಾಪುರ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾ ಭವನದಲ್ಲಿ ನಡೆಯಿತು.
ಫಾ|ಮುಲ್ಲರ್ಸ್ ಆಸ್ಪತ್ರೆಯ ಮಾಜಿ ಸಾರ್ವಜನಿಕ ಸಂಪರ್ಕ ಅದಿಕಾರಿü ಹಾಗೂ ಸಮಾಜ ಸೇವಕ ಡೇವಿಡ್ ಸಿಕ್ವೇರಾ ಫಾ|ಮುಲ್ಲರ್ಸ್ ಆಸ್ಪತ್ರೆಯ ಆರೋಗ್ಯ ಕಾರ್ಡಗಳ ಬಗ್ಗೆ, ಅದರಿಂದ ಸಿಗುವ ಲಾಭ ಮತ್ತು ವೈದ್ಯಕೀಯ ಚಿಕಿತ್ಸೆಯಲ್ಲಿ ರಿಯಾತಿಗಳ ಬಗ್ಗೆ ವಿವರಿಸಿದರು. ತೆಕ್ಕಟ್ಟೆಯ ಸಿರಿ ಆಯುರ್‍ವೇದ ಕ್ಲಿನಿಕ್ ವೈದ್ಯೆ ಡಾ|ವಾಣಿಶ್ರೀ ಐತಾಳ್ ಮನುಷ್ಯನಿಗೆ ಅಗತ್ಯವಿರುವ ಹಿಮೋಗ್ಲೊಬಿನ್ ಬಗ್ಗೆ ವಿವರ ನೀಡಿದರು, ಹಿಮೋಗ್ಲೊಬಿನ್ ಮನುಷ್ಯನ ಆರೋಗ್ಯ ಸಮಸ್ಯೆಯಲ್ಲಿ ಹೆಚ್ಚು ಪಾತ್ರ ವಹಿಸುತ್ತೆ, ಹಿಮೋಗ್ಲೊಬಿನ್ ಕೊರತೆ ಇರುವರಿಗೆ ಬೇಕಾಗುವ ವಿಟಾಮೀನ್ ಆಹಾರಗಳ ಪದ್ದತಿಯನ್ನು ಅವರು ವಿವರಿಸಿದರು. ಶಿಬಿರದಲ್ಲಿ ಭಾಗವಹಿದವರಿಗೆ ಲೈಫ್ ಕೇರ್ ಲ್ಯಾಬ್ ಕುಂದಾಪುರ ಇವರಲ್ಲಿ ಉಚಿತ ತಪಾಸಣೆಯ ವ್ಯವಸ್ಥೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಶಿಬಿರದ ಸಂಚಾಲಕಿ ಡಾ|ಸೋನಿ ಡಿಕೋಸ್ತಾ ಸ್ವಾಗತಿಸಿದರು, ಕಾರ್ಯದರ್ಶಿ ಡಯಾನಾ ಸೆರಾವೊ ವಂದಿಸಿದರು, ಕುಂದಾಪುರ ಘಟಕದ ಕಾರ್ಯದರ್ಶಿಅಲ್ಡ್ರಿನ್ ಡಿಸೋಜಾ ವಂದಿಸಿದರು.