ಕುಂದಾಪುರ : ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಬೆಡ್ಡಿನ ಮೇಲೆ ಸೂರನ್ನು ದ್ರಷ್ಟಿಸುತ್ತಾ ಉದ್ದಕ್ಕೂ ಮೈ ಚೆಲ್ಲಿ ಬಿದ್ದಿರುವ ಇವರ ಹೆಸರು ಚಂದ್ರ ದೇವಾಡಿಗ.ಊರು ಬೈಂದೂರು ತಾಲೂಕಿನ ಕಂಬದ ಕೋಣೆ. ಕೂಲಿ ನಾಲಿಯ ಜತೆ ತೆಂಗಿನ ಮರದ ಕಾಯಿ ಕೀಳುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದ ಇವರದ್ದು ಪತ್ನಿ ಹಾಗೂ 2 ಪುಟ್ಟ ಮಕ್ಕಳ ಸಣ್ಣ ಸಂಸಾರ.ಅವತ್ಯಾಕೋ ವಿಧಿ ಕಾರಣವಿಲ್ಲದೆ ಮುನಿದು ಬಿಟ್ಟಿತು. ಪಕ್ಕದ ಗ್ರಾಮದೊರ್ವರ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಮರ ಹತ್ತಿದರು.ಅದೇನಾಯಿತೋ ಗೊತ್ತಿಲ್ಲ ತಲೆ ಸುತ್ತು ಬಂದ ಅನುಭವ ಅಷ್ಟೇ. ಎರಡು ದಿನಗಳ ನಂತರ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಗ ಸೊಂಟದ ಕೆಳಗೆ ಚಲನೆಯೇ ಇರಲಿಲ್ಲ. ನರ, ಮೂಳೆಗಳು ಚದುರಿಹೋಗಿವೆ.ಇದೆ ಸ್ಥಿತಿಯಲ್ಲಿ ಎರಡೂವರೆ ವರ್ಷಗಳು ಸರಿದಿವೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೊತ್ತೊಯ್ದರೂ ಪರಿಣಾಮ ಮಾತ್ರ ಶೂನ್ಯ. ಈಗಾಗಲೇ ಸಾಲ ಸೋಲಮಾಡಿ ಹಲವು ಲಕ್ಷಗಳನ್ನು ಚಿಕಿತ್ಸೆಗಾಗಿ ವ್ಯಯಿಸಿ ಜೀವಚ್ಛವದಂತೆ ಬಿದ್ದುಕೊಂಡಿರುವ ಪತಿಗೆ ಹೆಗಲಿಗೆ ಹೆಗಲು ನೀಡುತ್ತಿರುವ ಪತ್ನಿಯ ಕಣ್ಣುಗಳಲ್ಲಿ ಭವಿಷ್ಯದ ಕರಾಳತೆ. ಬದುಕನ್ನು ಇನ್ನೂ ಅಚ್ಚರಿಯಿಂದ ದಿಟ್ಟಿಸುತ್ತಿರುವ ಮುಗ್ಧ ಪುಟ್ಟ ಮಕ್ಕಳ ಮನದಲ್ಲಿ ಅಯ್ಯೋ ನಮ್ಮ ಅಪ್ಪನಿಗೆ ಹೀಗೇಕಾಯ್ತು ಎಂಬ ಉತ್ತರ ಸಿಗದ ಪ್ರೆಶ್ನೆ. ಆಸಹಾಯಕತೆ ಎದುರು ಸ್ವಾಭಿಮಾನ ಮುದುಡಿಹೋಗಿದೆ. ಬೇರೆ ದಾರಿ ಕಾಣದೆ ಸಹಾಯಕ್ಕಾಗಿ ಯಾಚಿಸಿದ್ದಾರೆ. ನಿಮ್ಮ ಪುಟ್ಟ ಸಹಕಾರವೇ ಆ ಅಭಾಗ್ಯ ಕುಟುಂಬಕ್ಕೆ ಬ್ರಹತ್ ಸಹಾಯದಂತೆ ದಯವಿಟ್ಟು ಸ್ಪಂದಿಸಿ.
ಚಂದ್ರ, ಖಾತೆ ನ.8012500102705801
Ifsc: KARB 0000801,ಕರ್ನಾಟಕ ಬ್ಯಾಂಕ್ ,ಕಂಬದ ಕೋಣೆ.