ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೋವಿಡ್ 19 ತಡೆಯಲು ಸಹಕರಿಸಿ- ಮುಖ್ಯಾಧಿಕಾರಿ ಡಿ ಶೇಖರ್.
ಶ್ರೀನಿವಾಸಪುರ : ಕಡ್ಡಾಯವಾಗಿ ಮಾಸ್ಕ್ ಧರಸಿ ಕೋವಿಡ್ -19 ತಡೆಗಟ್ಟಲು ಸಾರ್ವಜನಿಕರ ಸಹಕಾರ ಬಹಳ ಅಗತ್ಯವಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಡಿ. ಶೇಖರ್ ರೆಡ್ಡಿ ತಿಳಿಸಿದರು .
ಪಟ್ಟಣದ ಸಂತೇ ಮೈದಾನದಲ್ಲಿ ಕೊವಿಡ್ 19 ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಮಾಸ್ಕ್ ಧರಸದೆ ಇರುವವರಿಗೆ ದಂಡವನ್ನು ವಿಧಿಸಿ ಮಾತನಾಡಿದ ಡಿ . ಶೇಖರ್ ಗ್ರಾಮೀಣ ಪ್ರದೇಶದ ಜನರು ವಿವಿದ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಬರುತ್ತಾರೆ .
ಕೋವಿಡ್ 19 2ನೇ ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯಾಪಾರ ವಹಿವಾಟು ಮಾಡಿಕೊಳ್ಳಬೇಕು ತಪ್ಪಿದ್ದಲ್ಲಿ ದಂಡವನ್ನು ಹಾಕಲಾಗುವುದು ಇದಕ್ಕೆ ಸಾರ್ವಜನಿಕರು ಅವಕಾಶ ನೀಡಬೇಡಿ ನಿಮ್ಮ ಆರೋಗ್ಯ ದೃಷ್ಟಿಯಿಂದ ನಾವು ದಿನನಿತ್ಯ ಜಾಗೃತಿವನ್ನು ಪುರಸಭೆ ವತಿಯಿಂದ ಮಾಡುತ್ತಿದ್ದೇವೆ ಸಾರ್ವಜನಿಕರು ಸಹಕರಿಸಬೇಕು ಎಂದರು .
ಈ ಸಂದರ್ಭದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಮೇಶ್ , ಕಂದಾಯ ನಿರೀಕ್ಷಕ ಎನ್ ಶಂಕರ್ , ಕಿರಿಯ ಆರೋಗ್ಯ ನಿರೀಕ್ಷ ಪೃಥ್ವಿರಾಜ್ ,ಚಂಡು, ಕಛೇರಿ ಸಿಬ್ಬಂದಿ ಹಾಜರಿದ್ದರು ,