ಮಂಗಳೂರು, ಉಡುಪಿ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರ ಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆದ್ರ್ರ ಮಳೆಯು ಒಂದೆರಡು ದಿನಗಳಿಂದ ತೀವ್ರಗೊಂಡಿದ್ದು., ಸೋಮವಾರ ಬಿರುಸುಗೊಂಡಿದ್ದ ಮಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾನಿಯನ್ನು ಉಂಟುಮಾಡಿದೆ.
ಜೂ.8 ರವರೆಗೆ ಭಾರಿ ಮಳೆಯಾಗಲಿದೆಯೆಂದು ಹವಮಾನ ಇಲಾಖೆ ಎಚ್ಚರಿಸಿದೆ.
ಮಂಗಳೂರಿನಲ್ಲಿ ಪಂಪ್ ವೆಲ್ ಭಾಗದಲ್ಲಿ. ಮೇಲ್ ಸೇತುವೆ ಕೆಳಗಡೆ ಅಸಮರ್ಪಕ ಕಾಮಾಗಾರಿಯಿಂದ ನೀರು ನಿಂತು ದೊಡ್ಡ ಕೆರೆಯಂತೆ ಆಗಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ಉಡುಪಿಯ ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಗುಲಾಬಿ (43) ಮೃತಪಟ್ಟಿದ್ದಾರೆ. ಕುಂಬಳೆ ಸಮೀಪದ ಅಂಗಡಿ ಮೊಗರಿನಲ್ಲಿ ಗಾಳಿ ಮಳೆಯಿಂದಾಗಿ ಮರ ಉರುಳಿ ಬಾಲಕಿ ಆಯಿಷತ್ ಮಿನ್ಹಾ (11) ಸಾವನ್ನಪ್ಪಿದ್ದಾಳೆ.