ನವೆಂಬರ್ 23 ರ ರವರಿಗೆ ರಾಜ್ಯಾದಲ್ಲಿ ಭಾರೀ ಮಳೆ ಯಾಗುವುದು : ಹವಾಮಾನ ಇಲಾಖೆ ಎಚ್ಚರಿಕೆ

JANANUDI.COM NETWORK

ಬೆ೦ಗಳೂರ: ಈ ವರ್ಷವಿಡಿ ಮಳೆಯಿ೦ದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಳೆ ಇನ್ನು ಮುಂದುವರೆಯುವ ಲಕ್ಷಣಗಳು ಕಾಣುತ್ತಿರುವಂತೆ ಪುನಃ ಹವಾಮಾನ ಇಲಾಖೆ ನವೆಂಬರ್ 23 ರ ರವರೆಗೆ ರಾಜ್ಯಾದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಿದೆ.


ಈಗಾಗಲೇ ಮಳೆ ವಿಪರೀತವಾಗಿ ರೈತರು ಕಣ್ಣೀರುಡುತಿದ್ದಾರೆ, ಇದೀಗ ಇನ್ನು ೪ ದಿನಗಳು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಕೂಚನೆ ನೀಡಿದ್ದು ಆತನಂಕಕಾರಿ ಸುದ್ದಿಯಾಗಿದೆ.


ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯ ರಾಜಧಾನಿ ಬೆ೦ಗಳೂರು ಸೇರಿದ೦ತೆ ವಿವಿಧ ಜಿಲ್ಲೆಗಳಲ್ಲಿ ನವೆ೦ಬರ್‌ 23 ರವರೆಗೆ ಭಾರೀ ಮಳೆಯಾಗಲಿದೆ ಎ೦ಬುದಾಗಿ ತಿಳಿಸಿದೆ.


ರಾಜ್ಯದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ ಕೊಡಗು, ಹಾಗೂ ಶಿವಮೊಗ್ಗಜಿಲ್ಲೆಗಳಲ್ಲಿ ಭಾರೀ ಮಳೆಯಾಲಿದ್ದು, ಈ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್‌ ಅಲರ್ಟ್ ಘೋಷಿಸಲಾಗಿದೆ.


ಇನ್ನೂ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಬೆ೦ಗಳೂರು ನಗರ, ಚಿತ್ರದುರ್ಗ, ಬೆ೦ಗಳೂರು ಗ್ರಾಮಾತ೦ರ,ದಾವಣಗೆರೆ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


ಕಲ್ಬುರ್ಗಿ ವಿಜಯಪುರ, ಬಾಗಲಕೋಟೆ , ಬೀದರ್‌, ಗದಗ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿಯೂ ಭಾರೀ ಮಳೆ ಸುರಿಯಲಿದೆ ಎಂಬುದಾಗಿ ತಿಳಿಸಿದ್ದು ಈ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.