ಕುಂದಾಪುರ, ಜು.5: ಕುಂದಾಪುರ- ಬೈಂದೂರು ಭಾಗದಲ್ಲಿ ಹಲವಾರು ದಿನಗಳಿಂದ ಸತತ ಮಳೆಯಾಗುತೀದ್ದು, ನಿನ್ನೆ ಮತ್ತು ಇವತ್ತಿನ ಮಳೆಯಿಂದ ಕುಂದಾಪುರ- ಬೈಂದೂರು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತೀದ್ದು ಈ ಭಾಗದ –ಎಲ್ಲಾ ನದಿಗಳು ಹೊಳೆಗಳು, ತೋಡುಗಳು ಉಕ್ಕಿ ಹರಿಯುತ್ತೀವೆ. ಆದರಿಂದ ನಾಗರಿಕರು ಎಚ್ಚರಿಕೆಯಿಂದ ಇರಬೇಕು.
ಬಳ್ಕುರು- ಗುಲ್ವಾಡಿ ಡ್ಯಾಮ್ ನಲ್ಲಿ ನೀರು ಉಕ್ಕಿ ಹರಿಯುತೀದ್ದು, ನೀರಿನ ಸೆಳೆತ ಅಬ್ಬರ ಭಾರಿ ಜೋರಾಗಿದೆ. ಕುಂದಾಪುರ ಆನಗಳ್ಳಿ ರೈಲ್ವೆ ಸೇತುವೆ, ಹೇರಿಕುದ್ರು ಹಟ್ಟಿಕುದ್ರು, ಸೂಳ್ ಕುದ್ರು ಮತ್ತು ಹತ್ತಿರದ ಇತರ ಕುದ್ರುಗಳಲ್ಲಿ ನೀರಿನ ಸೆಳೆತ, ಅಬ್ಬರ ಜೋರಾಗಿದ್ದು, ನಿವಾಸಿಗಳು ನೀರಿಗಿಳಿಯದೆ ಜಾಗ್ರತರಾಗಿರಬೇಕು.
ಈ ಮಳೆ 9 ನೇ ತಾರೀಕಿನ ವರೆಗೆ ಇದೆಯೆಂದು ಹವಮಾನ ಇಲಾಖೆ ತಿಳಿಸಿದೆ. ಅದ ನಂತರ ಮುಂದಿನ ಮಳೆಯ ಪರಿಸ್ಥಿತಿ ತಿಳಿಯಲಾಗುವುದು. ನಾಳೆಯೂ ಕೂಡ ಉಡುಪಿ ಜಿಲ್ಲೆಯಾದ್ಯಂತಹ ಮಳೆಯ ನಿಮಿತ್ತ ರಜೆ ಘೋಸಿಸಲಾಗಿದೆ.