ಉಡುಪಿ : ಕಲ್ಯಾಣಪುರದ ವೀರಭದ್ರ ದೇವಸ್ಥಾನದ ಹಿಂಭಾಗದಲ್ಲಿ ಇರುವ ವಾರಾಹಿ ನೀರಾವರಿ ಯೋಜನೆಯ ಪೈಪ್ ಶೇಖರಣಾ ಸ್ಥಳದಲ್ಲಿ ಭಾರೀ ಬೆಂಕಿ ಅನಾಹುತ ಘಟನೆ ಇಂದು ಸಂಜೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಶೇಖರಣಾ ಕೇಂದ್ರದಲ್ಲಿ ದಾಸ್ತಾನು ಇರಿಸಿದ್ದ ಪೈಪ್ ರಾಶಿ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ಜನರು ಮತ್ತು ಪೊಲೀಸರು ಈ ಕಾರ್ಯದಲ್ಲಿ ಆಗ್ನಿ ಶಾಮಕ ಸಿಬಂದಿಗೆ ಸಹಾಯ ಮಾಡಿದರು.. ಪೈಪ್ಗಳು ಸುಟ್ಟು ಹೋಗಿರುವುದರಿಂದ ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿ ಕೊಂಡಿದೆ. ಬೆಂಕಿ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ.