

ಬಸ್ರೂರು ಪಂಚಾಯತ್ ಪರಿಸರದಲ್ಲಿ ಕಥೋಲಿಕ್ ಸಭಾ ಬಸ್ರೂರು ಘಟಕದಿಂದ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ಸ್ವಸ್ಥ ಹಾಗೂ ನಿರ್ಮಲ ಪರಿಸರ ಅಭಿಯಾನ ನೆಡಸಾಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರು ಬೇಳೂರು ದಿನಕರ ಶೆಟ್ಟಿ ಊರನ್ನು ಸ್ವಚ್ಚವನ್ನಾಗಿ ಇಡುವುದು ನಮ್ಮೆಲ್ಲರ ಹಕ್ಕು , ಇದಕ್ಕೆ ಜಾತಿ ಧರ್ಮ ಇಲ್ಲ. ದೇಶದ ಪ್ರಧಾನಿ ಸಹ ದೇಶದ ಜನತೆಯೊಂದಿಗೆ ಕೈ ಜೋಡಿಸಿ ಸ್ವಚತೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು
ಕಥೋಲಿಕ್ ಸಭಾ ಬಸ್ರೂರು ಘಟಕದ ಅಧ್ಯಕ್ಷ ವಿಕ್ರಮ್ ಡಿ’ ಸೋಜ ಭಾಗಿಯಾದವರಿಗೆ ಹ್ಯಾಂಡ್ ಗ್ಲೌಸ್ ಕೊಟ್ಟು ಚಾಲನೆ ನೀಡಿದರು. ಕಥೊಲಿಕ್ ಬಸ್ರೂರು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಇತರರು ಸೇರಿ ಸ್ವಚತ ಕಾರ್ಯದಲ್ಲಿ ಭಾಗಿಯಾದರು. ಕಾರ್ಯಕ್ರಮವನ್ನು ಮೇಬಲ್ ಡಿ’ ಸೋಜ ನಿರೂಪಿಸಿದರು.




