ಶ್ರೀನಿವಾಸಪುರ 1 : ಮನುಕುಲಕ್ಕೆ ಆರೋಗ್ಯವೇ ಪ್ರಧಾನವಾಗಿದ್ದು, ಪ್ರತಿಯೊಬ್ಬರು ತಮ್ಮ – ತಮ್ಮ ಆರೋಗ್ಯವನ್ನು ಜಾಗೃತವಾಗಿ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸಾರ್ವಜನಿಕರಿಗೆ ಇಒ ಕೃಷ್ಣಪ್ಪ ಸಲಹೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ, ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಹಾಗು ಕಾರ್ಯಕ್ರಮ ವಿಶ್ವ ಜನ ಸಂಖ್ಯಾದಿನಾಚರಣೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರ, ವಸತಿ, ಉಡುಪು, ಉದ್ಯೋಗ, ಜೀವನ ನಿರ್ವಹಣೆ, ಸೇವೆ, ಶ್ರುಶೂಷ ಇತ್ಯಾದಿ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದು ಇದನ್ನ ತಡೆಗಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯ್ರಂತಣ ಅಧಿಕಾರಿ ಡಾ|| ಪ್ರಸನ್ನಕುಮಾರ್ ಮಾತನಾಡಿ 2030 ಒಳಗೆ ಎಲ್ಲಾ ಆರೋಗ್ಯ, ಎಲ್ಲಡೆ ಆರೋಗ್ಯ ಎಂಬ ಘೋಷಣೆಯಂತೆ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ಕ್ರಮಕೈಗೊಳ್ಳಬೇಕಾಗಿದೆ . 2025ರ ಒಳಗೆ ಕರ್ನಾಟಕ ರಾಜ್ಯವನ್ನು ಕ್ಷಯರೋಗ ಮುಕ್ತಮಾಡುವ ಬಗ್ಗೆ ಸರ್ಕಾರವು ಆದೇಶವನ್ನು ಹೊರಡಿಸಿದ್ದು, ಅಧಿಕಾರಿಗಳು ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಿಡಿಒ ಅಧಿಕಾರಿಗಳು ಕರೋನ ಟಾಸ್ಕ್‍ಪೋರ್ಸ್ ಅವರ ಜೊತೆ ಸಹಕಾರ ಪಡೆದು ಕ್ಷಯರೋಗಿಗಳನ್ನು ಪತ್ತೆ ಮಾಡಿ ಎಷ್ಟು ಜನಕ್ಕೆ ರೋಗವಿದೆ. ರೋಗವಿರುವವರು ಎಷ್ಟು ಜನ ಮಾತ್ರೆಗಳನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದು ರೋಗ ಲಕ್ಷಣ ಇರುವವರಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದರು.
ತಾಲೂಕಿನ ಯಾವ ಗ್ರಾಮಪಂಚಾಯಿತಿ ಕ್ಷಯರೋಗದ ಬಗ್ಗೆ ಹೆಚ್ಚು ಕಾರ್ಯನಿರ್ವಹಿಸತ್ತದೋ ಆ ಗ್ರಾಮಪಂಚಾಯಿತಿಗೆ ಮಹಾತ್ಮ ಗಾಂದಿಜೀಯವರ ಬಾವಚಿತ್ರ ಇರುವ ಪ್ರಥಮ ಬಹುಮಾನವಾಗಿ ಬಂಗಾರ ನಾಣ್ಯ, ಎರಡನೇ ಬಹುಮಾನವಾಗಿ ಬೆಳ್ಳಿ ನಾಣ್ಯ, ಮೂರನೇ ಬಹುಮಾನವಾಗಿ ಕಂಚು ನಾಣ್ಯವನ್ನು ನೀಡಲಾಗುವುದು ಎಂದರು. ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಕ್ಷಯಮುಕ್ತವನ್ನಾಗಿ ಮಾಡಬೇಕು ಎಂದರು.
ಜನರನ್ನು ಜಾಗೃತಗೊಳಿಸಲು ಮತ್ತು ಜನಸಂಖ್ಯೆ ನಿಯಂತ್ರಣದ ಅಗತ್ಯೆಯ ಅರಿವು ಮೂಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ತಗೆದುಕೊಳ್ಳುತ್ತಿದೆ ಜನಸಂಖ್ಯೆ ನಿಯಂತ್ರಣದಲ್ಲಿ ಗಂಡ, ಹೆಂಡತಿ ಪಾತ್ರ ಮುಖ್ಯ ಸಹಕಾರ ಬೇಕಿದೆ ಎಂದರು.
ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳ ಪಿಡಿಒಗಳು ಹಾಜರಿದ್ದರು. ಟಿಎಚ್‍ಒ ಡಾ|| ಷರೀಫ್, ಬ್ಲಾಕ್ ರೋಗ ನಿಯಂತ್ರಣ ಅಧಿಕಾರಿ ಆಂಜಲಮ್ಮ, ಮೇಲ್ವಿಚಾರಕ ಶಿವರಾಜ್, ಆರೋಗಯ ನಿರೀಕ್ಷ ಗಿರೀಶ್‍ಪ್ರಸಾದ್, ಕಾರ್ಯಕ್ರಮದ ವ್ಯವಸ್ಥಾಪಕ ಟಿ.ಹರೀಶ್‍ಕುಮಾರ್, ತಾ.ಪಂ.ಗಣಕಯಂತ್ರ ಅಪರೇಟರ್ ಕೆ.ಎನ್.ಶ್ರೀನಾಥ್ ಇದ್ದರು.