JANANUDI.COM NETWORK

ಹಾಸನ: ಪೂಜೆಯ ನೆಪದಲ್ಲಿ ಪೂಜಾರಿಯೊಬ್ಬ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆಅ ಪರಿಣಾಮ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದಲ್ಲಿ ನಡೆದಿದೆ.
ವರದಿಯ ಪ್ರಕಾರ, ಡಿಸೆಂಬರ್ 7ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. 47 ವರ್ಷದ ಪಾರ್ವತಿ ಅವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಿಯೂ ಗುಣಮುಖರಾಗದ ಹಿನ್ನೆಲೆಯಲ್ಲಿ ಗ್ರಾಮದ ಪಿರಿಯಾಪಟ್ಟಣದ ದೇವರ ಪೂಜಾರಿ ಮಧು ಎಂಬವರ ಬಳಿಗೆ ಕರೆದುಕೊಂಡು ಹೋಗಿದ್ದು, ತಲೆ ನೋವನ್ನು ಬೆತ್ತದಿಂದ ಸರಿಪಡಿಸುವುದಾಗಿ ಹೇಳಿದ ಪೂಜಾರಿ ಬೆತ್ತದಿಂದ ಮಹಿಳೆಗೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಪೂಜಾರಿಯ ಏಟಿನಿಂದಾಗಿ ಡಿಸೆಂಬರ್ 8ರಂದು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಡಿಸೆಂಬರ್ 9ರಂದು ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಗೆ ಬಿದ್ದ ಬಲವಾದ ಒಂದೇ ಏಟಿಗೆ ಪಾರ್ವತಿ ಅವರು ತೀವ್ರ ಅಸ್ವಸ್ಥಗೊಂಡಿದ್ದರು ಎನ್ನಲಾಗಿದ್ದು, ಆ ವೇಳೆ ನಿಂಬೆ ರಸ ಕುಡಿಸಿ ಕಾಯಿಲೆ ಗುಣವಾಗಿದೆ ಎಂದು ಹೇಳಿ ಕುಟುಂಬಸ್ಥರನ್ನು ಪೂಜಾರಿ ಕಳುಹಿಸಿದ್ದನು ಎಂದು ಕೂಡ ತಿಳಿದು ಬಂದಿದೆ.