ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಇರುವ ಸಂಬಂಧಕ್ಕೆ ಹೈಕೋರ್ಟ್ ನೋಟಿಸ್

JANANUDI.COM NETWORK


ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವ ಇದ್ದ ಕಾರಣಕ್ಕೆ, ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೇರಳದ ಹೈಕೋರ್ಟ್, ಇದೀಗ ಕೇಂದ್ರ ಸರಕಾರಕ್ಕೆ ನೋಟಿಸ್ ಜ್ಯಾರಿ ಮಾಡಿದೆ.
ಕೇರಳದ ಕೊಟ್ಟಾಯಮ್ ನಿವಾಸಿ ಎಂ.ಪೀಟರ್ ತನಗೆ ಪ್ರಧಾನ ಮಂತ್ರಿ ಮೋದಿಯವರ ಭಾವಚಿತ್ರ ಇಲ್ಲದಿರುವ ಪ್ರಮಾಣ ಪತ್ರ ಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿ ಅರ್ಜಿ ವಿಚಾರಣೆ ನಡೆಸಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಮತ್ತು ಕೇರಳ ರಾಜ್ಯ ಸರಕಾರಗಳಿಗೆ ನೋಟಿಸ್ ಜ್ಯಾರಿ ಮಾಡಿ, ಕೇಂದ್ರ ಸರಕಾರ ಮತ್ತು ಕೇರಳ ರಾಜ್ಯ ಸರಕಾರಕ್ಕೆ ಎರಡು ವಾರದಳೊಗೆ ಅಭಿಪ್ರಾಯ ನೀಡಬೇಕೆಂದು ಸೂಚನೆ ನೀಡಿದೆ.