JANANUDI.COM NETWORK
ಶಿವಮೊಗ್ಗ: ಸುಮಾರು ಒ೦ದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೊಂಡಿದ್ದು ಎಫ್‌ಐಆರ್ ಕೂಡ ದಾಖಲಿಸಿ ಕೊಂಡಿತ್ತು. ಫೆ. 21ರ ರಾತ್ರಿ ಶಿವಮೊಗ್ಗದ ಭಾರತಿ ಕಾಲನಿಯಲ್ಲಿ ಹರ್ಷನ ಕೊಲೆ ಮಾಡಲಾಗಿತ್ತು. ಅಂದು ಹರ್ಷನನ್ನು ಅಟ್ಮಾಡಿಸಿಕೊಂಡು ಹೋದದುಷ್ಕರ್ಮಿಗಳು ಭರ್ಜಿಯಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ತಕ್ಷಣ ಮೆಗ್ರಾನ್ ಆಸೃತ್ರಿಗೆ ಕರೆದೊಯ್ದು ದಾಖಲಿಸಿದರೂ ಆತನನ್ನು ಬದುಕುಳಿಯಲಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂಲೀಸರು, ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಹತ್ತು ಆರೋಪಿಗಳನ್ನು ಬಂಧಿಸಿ, ಕೇಸು ದಾಖಲಿಸಿಕೊಂಡಿದ್ದರು. ಬಳಿಕ ರಾಜಕೀಯ ಒತ್ತಡಕ್ಕಾಗಿ ಈ ಪ್ರಕರಣವನ್ನು ಎನ್‌ಐಐಗೆ ಹಸ್ತಾ೦ತರಿಸಲಾಯಿತು. ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ದಳ ಎಫ್‌ಐಆರ್‌ದಾಖಲಿಸಿಕೊ೦ಡಿದೆ. ಎಫ್‌ಐಆರ್ ವರದಿಯಲ್ಲಿ ಕೊಲೆ ಹಿ೦ದಿನ ಉದ್ದೇಶವನ್ನು ಉಲ್ಲೇಖಿಸಲಾಗಿದೆ. ಈ ಹಿಂದೆ ವೈಯಕ್ತಿಕ ದ್ವೇಷದಿ೦ದ ಹರ್ಷನನ್ನು ಕೊಲೆ ಮಾಡಲಾಗಿತ್ತು ಎ೦ದು ಹೇಳಲಾಗಗುತಿದ್ದರೂ, ಇದೀಗ ಮತ್ತೊ೦ದು ಆಘಾತಕಾರಿ ವಿಷಯ ಹೊರಬಿದ್ದಿದೆ. ಆರೋಪಿಗಳು ಕೋಮುಗಲಭೆ ಸೃಷ್ಟಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತ೦ದು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಉದ್ದೇಶದಿ೦ದಲೇ ಈ ಕೊಲೆಯನ್ನು ನಡೆಸಿದ್ದರು ಎ೦ಬುದು ಎನ್‌ಐಎ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸ೦ಬಂಧಿಸಿದ೦ತೆ ತನಿಖೆ ಮುಂದುವರಿದಿದೆ. ಇನ್ನು ಮುಂದಕ್ಕೆ ನೈಜ್ಯ ಆರೋಪಿಗಳು ಯಾರೆಂದು ಗೊತ್ತಾಗಬೇಕಿದೆ