ಮಾದಕ ದ್ರವ್ಯದ ವ್ಯಸನಿಯ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ : ಅಬಕಾರಿ ಉಪ ಆಯುಕ್ತ ಎಚ್.ಎಂ.ರಮೇಶ್‍ಕುಮಾರ್

ಶ್ರೀನಿವಾಸಪುರ: ಮಾದಕ ವಸ್ತುಗಳ ಸೇವೆನೆಗೊಮ್ಮೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಇದರಿಂದ ಮಾದಕ ದ್ರವ್ಯದ ವ್ಯಸನಿಯ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಎಚ್.ಎಂ.ರಮೇಶ್‍ಕುಮಾರ್ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಅಬಕಾರಿ ಇಲಾಖೆ , ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಅಬಕಾರಿ ನಿರೀಕ್ಷಕ ರೋಹಿತ್ ಮಾತನಾಡಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವೆನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ದುಶ್ಚಟಕ್ಕೆ ಬಾಣಸರಾದವರು ಸಾಮಾನ್ಯವಾಗಿ ಸುಳ್ಳು ಹೇಳುವುದು ಜಾಸ್ತಿ. ಈ ಒಂದು ದೃಷ್ಟಿಯಿಂದ ಯುವ ಪೀಳಿಗೆಯು ಎಚ್ಚರದೊಂದಿಗೆ ಜೀವನ ನಡೆಸಬೇಕು ಎಂದರು.
ಉಪನ್ಯಾಸಕರಾದ ಮೃತ್ಯುಂಜಯ, ಹರೀಶ್, ನವೀನ್ ಇದ್ದರು.