ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : – ದೇಶಕ್ಕಾಗಿ ಶಿಸ್ತು ಬದ್ಧ ಯುವ ಪಡೆಯನ್ನು ಸಜ್ಜುಗೊಳಿಸುವ ಸಲುವಾಗಿ ಭಾರತ ಸೇವಾದಳವನ್ನು ಆರಂಭಿಸಿ ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ನಾ.ಸು.ಹರ್ಡೀಕರ್‌ದೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು . ನಗರದ ಟೇಕಲ್ ರಸ್ತೆಯ ಮಕ್ಕಳ ಉದ್ಯಾನದಲ್ಲಿ ಕೋಲಾರ ಕ್ರೀಡಾ ಸಂಘದ ಮಕ್ಕಳ ಬೇಸಿಗೆ ಶಿಬಿರದಲ್ಲಿ ನಾ.ಸು.ಹರ್ಡೀಕರ್ ಅವರ 134 ನೇ ಜಯಂತಿಯಲ್ಲಿ ಅವರು ಮಾತನಾಡುತ್ತಿದ್ದರು . ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದತ್ತ ಆಕರ್ಷಿತರಾಗಿ ವೈದ್ಯರಾಗಿ ಹೋರಾಟಗಾರರಾಗಿ ಜೀವನ ಪೂರ್ತಿ ದೇಶಕ್ಕಾಗಿಯೇ ಮುಡಿಪಾಗಿಟ್ಟು ಹಿಂದೂಸ್ತಾನ್ ಸೇವಾದಳ ಆರಂಭಿಸಿ ನಂತರ ಪಕ್ಷಾತೀತ ಸಂಘಟನೆಯಾಗಿ ಭಾರತ ಸೇವಾದಳವನ್ನು ಮುನ್ನಡೆಸುವ ಮೂಲಕ ಹರ್ಡೀಕರ್ ದೇಶ ಪ್ರೇಮಿಗಳ ಆದರ್ಶಪ್ರಾಯರಾಗಿದ್ದಾರೆಂದರು .
ರೋಟರಿ ಸೆ೦ಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಮಾತನಾಡಿ , ಕೋಲಾರ ಜಿಲ್ಲೆಯಲ್ಲಿ ಭಾರತ ಸೇವಾದಳವು ಮಕ್ಕಳಲ್ಲಿ ಶಿಸ್ತು ಸೇವಾ ಮನೋಭಾವನೆ ಮತ್ತು ದೇಶ ಪ್ರೇಮವನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುವ ಗಮನ ಮೂಲಕ ಸೆಳೆಯುತ್ತಿದೆಯೆಂದು ಶ್ಲಾಸಿದರು . ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ , ಸೇವಾದಳಕ್ಕೆ ಸುಭದ್ರ ಅಡಿಪಾಯವನ್ನು ಹಾಕುವ ಮೂಲಕ ನಾ.ಸು.ಹರ್ಡೀಕರ್ ಮಹಾತ್ಮ ಗಾಂಧೀಜಿಯವರ ಆದರ್ಶಗಳಿಗೆ ಮನಸೋತು ಸತ್ಯಅಹಿಂಸೆ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರೆಂದು ವಿವರಿಸಿದರು . ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ , ಮಕ್ಕಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ದಾಸರಾಗುವ ಮೂಲಕ ಕ್ರೀಡಾ ಚ ಟುವ ಟಿಕೆಗಳಿಂದ ದೂರ ಉಳಿದು ಅನಾರೋಗ್ಯವನ್ನು ಅಹ್ವಾನಿಸಿಕೊಳ್ಳುತ್ತಿದ್ದಾರೆ , ಕೋಲಾರ ಕ್ರೀಡಾ ಸಂಘವು ನಿರಂತರವಾಗಿ ಪ್ರತಿ ವರ್ಷವೂ ಉಚಿತವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸುವ ಮೂಲಕ ಮಕ್ಕಳಲ್ಲಿ ಕ್ರೀಡಾ ಚೈತನ್ಯವನ್ನು ಹುಟ್ಟಿಸುತ್ತಿದೆಯೆಂದರು . ಕ್ರೀಡಾ ತರಬೇತುದಾರ ಪುರುಷೋತ್ತಮ್ ಮಾತನಾಡಿ , ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತ್ಯಾಗ ಬಲಿದಾನ ಮಾಡಿದ್ದು , ಬಹುತೇಕರ ಪರಿಚಯ ಯುವ ಪೀಳಿಗೆಗೆ ಇಲ್ಲವಾಗಿದೆ . ದೇಶಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ನಾ.ಸು.ಹರ್ಡೀಕರ್ ಜೀವನ ಮಕ್ಕಳಿಗೆ ಪರಿಚಯಿಸುತ್ತಿರುವುದು ಉತ್ತಮ ಕಾರ್ಯವಾಗಿದೆ , ಇದೇ ರೀತಿ ಸ್ಥಳೀಯ ಹೋರಾಟಗಾರರ ಬಗ್ಗೆಯೂ ಅಭಿಮಾನ ಮೂಡಬೇಕಿದೆಯೆಂದರು . ಕೋಲಾರ ಕ್ರೀಡಾ ಸಂಘದ ಅಧ್ಯಕ್ಷ ಸಾಮಾ ಅನಿಲ್‌ಬಾಬು ಮಾತನಾಡಿ , ಕೋಲಾರ ಕ್ರೀಡಾ ಸ ೦ ಘದಲ್ಲಿ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡೀಕರ್ ಜಯಂತಿ ಹಮ್ಮಿಕೊಂಡಿರುವುದು ಮಕ್ಕಳಿಗೆ ಪ್ರಯೋಜನಕಾರಿಯಾಗಿದೆಯೆಂದರು . ಇದೇ ಸಂದರ್ಭದಲ್ಲಿ ಕೊರೊನಾ ನಾಲ್ಕನೇ ಅಲೆಯನ್ನು ಎದುರಿಸುವ ಸಲುವಾಗಿ ಬೇಸಿಗೆ ಶಿಬಿರದ ನೂರೈವತ್ತು ಮಕ್ಕಳಿಗೂ ಸೇವಾದಳವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು . ಈ ಸಂದರ್ಭದಲ್ಲಿ ಸೇವಾದಳ ಕಾರ್ಯದರ್ಶಿ ಎಸ್.ಸುಧಾಕರ್ , ಮುನಿವೆಂಕಟ್ , ಮಲ್ಲಿಕಾ ಪ್ರಕಾಶ್ , ಯಲ್ಲಪ್ಪಜ್ಯೂಸ್ ನಾರಾಯಣಸ್ವಾಮಿ , ಚಂದ್ರು , ಕ್ರೀಡಾ ತರಬೇತುದಾರರು ಹಾಗೂ ಮಾಜಿ ಯೋಧರಾದ ಕೃಷ್ಣಮೂರ್ತಿ , ಸುರೇಶ್ , ಕ್ರೀಡಾ ಸಂಘದ ಕಾರ್ಯದರ್ಶಿ ಹರೀಶ್ ಇತರರು ಹಾಜರಿದ್ದರು . ಭಾರತ ಸೇವಾದಳ ಸಂಘಟಕ ದಾನೇಶ್ ಕಾರ್ಯಕ್ರಮ ನಿರೂಪಿಸಿದರು . ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು .