ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ 2022

ವರದಿ: ರಮೇಶ್ ವಕ್ವಾಡಿ 



ಹಂಗಾರಕಟ್ಟೆ: ಮಕ್ಕಳಿಗೆ ಸಕಾಲದಲ್ಲಿ ಶಾಲಾ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ತೀರಾ ಅಗತ್ಯ ಮತ್ತು ವಿವಿಧ ಕಲಾಕೃತಿಗಳು ರಚಿಸುವ ಮನೋಭೂಮಿಕೆ ಪ್ರತಿ ಶಾಲೆಯಲ್ಲೂ ನೀಡಬೇಕು. ಇದರಿಂದ ಮಕ್ಕಳ ಭಾಗವಹಿಸುವಿಕೆ ಹಕ್ಕನ್ನು ಪ್ರತಿಪಾದಿಸುತ್ತದೆ. ಅಲ್ಲದೇ ಅವರಲ್ಲಿ ಮನೋಸ್ಥೈರ್ಯ, ಗುಂಪು ನಿರ್ವಹಣೆ ಕೌಶಲ್ಯ, ಹೊಂದಾಣಿಕೆ ಮನೋಭಾವ ಹೆಚ್ಚುತ್ತದೆ ಎಂದು ಶ್ರೀ ಸಂತೋಷ್‍ಕುಮಾರ್ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಸ. ಹಿ. ಪ್ರಾ ಶಾಲೆ ನೂಜಾಡಿ – 1 ಇವರು ಹೇಳಿದರು.
ಅವರು ಇತ್ತೀಚೆಗೆ ಅಭಿವೃದ್ದಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ಹಕ್ಲಾಡಿ ಸ.ಹಿ.ಪ್ರಾ ಶಾಲೆ ನೂಜಾಡಿ 1 ಬೈಂದೂರು ವಲಯ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ “ಮಕ್ಕಳ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ 2022” ಉದ್ಘಾಟಿಸಿ ಮಾತಾಡಿದರು.
ಮುಖ್ಯ ಅತಿಥಿಯಾಗಿ ಶ್ರೀ ರಾಜೀವ ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕರು ಮಾತಾಡಿ ಇಂತಹ ಉಪಯುಕ್ತ ಮಾಹಿತಿ ಶಿಬಿರದಿಂದ ಮಕ್ಕಳು ಕ್ರಿಯಾಶೀಲರಾಗುತ್ತಾರೆ. ಸದಾ ಕಲಿಕೆಯಲ್ಲಿ ಮುಂದೆ ಬರುತ್ತಾರೆ. ಮಕ್ಕಳಲ್ಲಿ ಅಕ್ಷರ ಕಲಿಕೆಯ ಜೊತೆಗೆ ಸೃಜನಶೀಲತೆ ಹೆಚ್ಚುತ್ತದೆ. ಒಂದು ವಸ್ತುವನ್ನು ವೀಕ್ಷಿಸುವ ಚಿಂತನೆ ಬೆಳೆಯುತ್ತದೆ. ತನ್ಮೂಲಕ ಏಕಾಗ್ರತೆ ಹೆಚ್ಚುತ್ತದೆ. ಸಂಪನ್ಮೂಲ ವ್ಯಕ್ತಿಗಳು ತಿಳಿಸುವ ವಿವಿಧ ಕಲಾಕೃತಿ ಮುಖವಾಡ ಹೂದಾನಿ, ಕಾಗದದಿಂದ ಚೀಲ ರಚನೆ ಇವುಗಳಿಂದ ಸೂಕ್ಷ್ಮತೆ, ಸಮಯ ಪ್ರಜ್ಞೆ ಮತ್ತು ಗುಂಪು ನಿರ್ವಹಣೆ ಕೌಶಲ್ಯ ಹೆಚ್ಚುತ್ತದೆ.
ಸಭಾಧ್ಯಕ್ಷತೆಯನ್ನು ಶ್ರೀ ಚೇತನ್‍ಕುಮಾರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಹಕ್ಲಾಡಿ ಇವರು ನಿರ್ವಹಿಸಿ ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಪ್ರಶ್ನಿಸುವಿಕೆ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಟ್ಟರು. ಬೇರೆ ಬೇರೆ ಸಂಪನ್ಮೂಲ ವ್ಯಕ್ತಿಗಳು ವಿಭಿನ್ನ ರೀತಿಯಲ್ಲಿ ಕೌಶಲ್ಯವನ್ನು ಹೆಚ್ಚಿಸುವ ವಿವಿಧ ಕಲಾಕೃತಿಗಳಿಂದ ಮಕ್ಕಳಲ್ಲಿ ಏನೋ ಹೊಸ ಚಿಂತನೆ ಕುತೂಹಲ ಬೆಳೆಯುತ್ತದೆ ಎಂದರು.
ಸಭೆಯಲ್ಲಿ ಶ್ರೀ ಮಂಜುನಾಥ ಅಧ್ಯಕ್ಷರು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಸದಸ್ಯರಾದ ಶ್ರೀಮತಿ ಜ್ಯೋತಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರವೀಣ್ ಶೆಟ್ಟಿ ಶ್ರೀಮತಿ ವೀಣಾರಾಣಿ, ಮುಖ್ಯ ಶಿಕ್ಷಕರಾದ ಶ್ರೀ ತಿಮ್ಮಪ್ಪ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ ವಕ್ವಾಡಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕು| ವರ್ಷ ಸಾಲಿಗ್ರಾಮ ನಿರೂಪಿಸಿ ಶ್ರೀ ರಮೇಶ್ ವಕ್ವಾಡಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ಸುಧಾ ಭಟ್ ಬ್ರಹ್ಮಾವರ ವಂದಿಸಿದರು. ಸುಮಾರು 68 ವಿದ್ಯಾರ್ಥಿಗಳು ಭಾಗವಹಿಸಿ ಈ ಶಿಬಿರದಿಂದ ಪ್ರಯೋಜನ ಪಡೆದರು