ಬ್ರಹ್ಮಾವರ: ನಮ್ಮ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ವಿನೂತನ ಆವಿಷ್ಕಾರಗಳು ಮತ್ತು ಸಂಶೋಧನೆಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಲ್ಲಿ ವಿವಿಧ ಕೌಶಲ್ಯವನ್ನು ರೂಪಿಸುವ ವಿಶಿಷ್ಟ ಶಿಕ್ಷಣ ಪದ್ಧತಿಯನ್ನು ಪ್ರಸಕ್ತ ವಿದ್ಯಾಮಾನಕ್ಕೆ ಹೊಂದುವಂತೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಪ್ರಸ್ತುತ ಪಡಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಯಕ್ಷಗಾನ ಕಾಲವಿದ ಮಾರಾಳಿ ಪ್ರಭಾಕರ ಶೆಟ್ಟಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸಿಂಡಿಕೇಟ್ ರೈತರ ಸೇವಾ ಸಹಕಾರಿ ನಿ. ಕೊಕ್ಕರ್ಣೆ ಇವರು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ 19ನೇ ಕರ್ಜೆ ಗ್ರಾಮ ಪಂಚಾಯತ್ ರೋಟರಿ ರಾಯಲ್ ಬ್ರಹ್ಮಾವರ, ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಕರ್ಜೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಮಕ್ಕಳಿಗೆ ಕರಕುಶಲ ವಸ್ತು ಪ್ರಾತ್ಯಕ್ಷಿತೆ ಮತ್ತು ಮಾಹಿತಿ ಶಿಬಿರ – 2024 ಉದ್ಘಾಟಿಸಿ ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಿಗೆ ಸಮಯ ಸದ್ವಿನಿಯೋಗ ಮಾಡುವ ಕ್ರಿಯೆಗಳು ಮುಂದೆ ಅವರ ಜೀವನ ಉತೃಷ್ಟಕ್ಕೆ ನಾಂದಿಯಾಗುತ್ತದೆ. ಪ್ರತಿ ಮಗುವಿನಲ್ಲಿ ಕಲಾತ್ಮಕ ಇರುತ್ತದೆ. ಅದನ್ನು ಸೂಕ್ತ ಸಮಯದಲ್ಲಿ ವಿಸೃತಗೊಳಿಸಿದಾಗ ಮುಂದೆ ಅದು ಹವ್ಯಾಸವಾಗಿ ಬೆಳೆವಣಿಗೆ ಹೊಂದುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಉದಯಕುಮಾರ್ ಬ್ರಹ್ಮಾವರ, ಅಧ್ಯಕ್ಷರು ಅತುಲ ಯುವಕ ಸಂಘ (ರಿ.), ಹೇರಾಡಿ ಬಾರಕೂರು ಮಾತನಾಡಿ ಮಕ್ಕಳಲ್ಲಿ ಮೌಲ್ಯ ಪ್ರಜ್ಞೆ, ನಿರಂತರ ಶಾಲೆಯಲ್ಲಿ ಕಲಿಕೆಯಾಗುತ್ತದೆ. ಆದರೆ ಪಠ್ಯೇತರ ಚಟುವಟಿಕೆ ತುಂಬಾ ಕಡಿಮೆ ಆದ್ದರಿಂದ ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿದಾಗ ಅದು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಗಣೇಶ್ ಪೂಜಾರಿ, ಅಧ್ಯಕ್ಷರು ರೋಟರಿ ರೋಯಲ್, ಬ್ರಹ್ಮಾವರ ಇವರು ಮಾತನಾಡಿ ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಬೌದ್ಧಿಕತೆ ವಿಕಾಸಗೊಂಡು ಮಕ್ಕಳಲ್ಲಿ ತಾಳ್ಮೆ ಹೆಚ್ಚುತ್ತದೆ. ಈ ತಾಳ್ಮೆಯಿಂದ ಕಲಿಕೆ ಸುಗಮವಾಗುತ್ತದೆ.
ವೇದಿಕೆಯಲ್ಲಿ ಉದಯಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷರು ರೋಟರಿ ರೋಯಲ್ ಬ್ರಹ್ಮಾವರ ಹಾಗೂ ಜಯರಾಮ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು, ರಘು ನಾಯ್ಕ್, ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ರಮೇಶ್ ವಕ್ವಾಡಿ, ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಲಕ್ಷಾಧಿನಿ ಉಪಸ್ಥಿತರಿದ್ದರು.
ಸಭಾಧ್ಯಕ್ಷತೆಯನ್ನು ಶ್ರೀ ಲಕ್ಷಾಧಿನಿ ನಿರ್ವಹಿಸಿ ಮಕ್ಕಳಿಗೆ ಕಲಾತ್ಮಕ ಅಭಿರುಚಿಯನ್ನು ಪ್ರೌಢಶಾಲಾ ಹಂತದಲ್ಲಿ ಅನುಷ್ಠಾನಗೊಳಿಸಿದಾಗ ಅದು ಮುಂದೆ ಅವರ ಜೀವನದಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮವನ್ನು ಕು| ಅನಿಶಾ ಪೇತ್ರಿ ನಿರ್ವಹಿಸಿ ರಮೇಶ್ ವಕ್ವಾಡಿ ಸ್ವಾಗತಿಸಿ ಪ್ರಾಸ್ತಾವನೆಗೈದು ವಂದಿಸಿದರು. ಸುಮಾರು 86 ವಿದ್ಯಾರ್ಥಿಗಳು, ಪೋಷಕರು ಈ ಶಿಬಿರದಿಂದ ಪ್ರಯೋಜನ ಪಡೆದರು.