JANANUDI.COM NETWORK

ಕುಂದಾಪುರ : ಇಲ್ಲಿನ ಹಳೆ ಆಳಿವೆ ನಿವಾಸಿ ಭಾರತೀಯ ಜೀವಾ ವಿಮಾ ನಿಗಮದ ಅಡವೈಸರ್ , ಪ್ರಗತಿಪರ ಕೃಷಿಕರು ಪಿಯುಸ್ ನಗರ ಚರ್ಚಿನಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡ, ಸ್ಟ್ಯಾನಿ ಡಿ’ಸೋಜ (58) ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿ, ಕಥೊಲಿಕ್ ಸಭಾದ ಅಧ್ಯಕ್ಷರಾಗಿ, ಕುಂದಾಪುರದ ಬ್ಲಾಕ್ ಕಾಂಗ್ರೆಸ್ ನ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾಗಿ, ರೋಟರಿ ಕ್ರೆಡಿಟ್ ಕೋ- ಒಪರೇಟಿವ್ ಸೊಸೈಟಿ ಲಿಮಿಟೆಡ್ ನ ಮಾಜಿ ನಿರ್ದೇಶಕರಾಗಿ, ವಾರ್ಡಿನ ಗುರಿಕಾರರಾಗಿ ಸೇವೆ ಸಲ್ಲಿಸಿದ್ದರು. ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮ್ರತರ ಅಂತಿಮ ಕ್ರಿಯೆಯು ನಾಳೆ 16 ನೆ ತಾರೀಕು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಆರಂಭವಾಗುವುದೆಂದು ಕುಟುಂಬ ಮೂಲದಿಂದ ತಿಳಿದು ಬಂದಿದೆ.