

ಹಿರಿಯ ಜಮೀನುದಾರ, ಉದ್ಯಮಿ, ಕೃಷಿಕರಾದ ಎಚ್. ರಂಗನಾಥ ಕಾಮತ್ (89) ದಿನಾಂಕ 18 ರಂದು ಗಂಗೊಳ್ಳಿಯ ಸ್ವಗೃಹದಲ್ಲಿ ನಿಧನರಾದರು.
ಕುಂದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೃಷಿ ಜಮೀನು ಹೊಂದಿದ್ದ ಇವರು ಗಂಗೊಳ್ಳಿಯಲ್ಲಿ ಸಾ ಮಿಲ್ ಉದ್ಯಮ ನಡೆಸಿದವರು. ಸಾಮಾಜಿಕ ಧುರೀಣರಾಗಿ ಧಾರ್ಮಿಕ, ಶೈಕ್ಷಣಿಕ, ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ತಮ್ಮ ಮನೆತನದ ಬಸ್ರೂರು ಶ್ರೀರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದರು.
ಇವರು ಮೂವರು ಪುತ್ರಿಯರನ್ನು ಅಗಲಿದ್ದಾರೆ.