ಕುಂದಾಪುರ ( ಮಾ 7 ) ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್.ಎಮ್ , ವಿ. ಕೆ. ಆರ್ ಶಾಲೆಗಳಲ್ಲಿ ಮಾ 4, 6 ಮತ್ತು 7 ರಂದು ಶಿಕ್ಷಕ – ಪೋಷಕ ಸಭೆಯನ್ನು ಏರ್ಪಡಿಸಲಾಗಿತ್ತು.ಶಾಲೆಯ ವಾರ್ಷಿಕ ಪಠ್ಯ – ಪಠ್ಯೇತರ ಚಟುವಟಿಕೆಯ ಕುರಿತಾಗಿ ಪೋಷಕರಿಗೆ ಮಾಹಿತಿ ನೀಡುವುದಲ್ಲದೇ, ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ತರಗತಿವಾರು ಮ್ಯಾಗಝಿನ್ ನನ್ನು ಬಿಡುಗಡೆಗೊಳಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಸಂಚಾಲಕರೂ, ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರು ಶಾಲಾ ಸಿಬ್ಬಂದಿಯವರ ಒಗ್ಗಟ್ಟು ಹಾಗೂ ಮಕ್ಕಳ ಕಲಿಕೆಯ ಮೇಲಿನ ಶಿಕ್ಷಕರ ತುಡಿತದ ಕುರಿತಾಗಿ ಅರುಹಿದರು.ಸಂಸ್ಥೆಯ ಪ್ರಾಂಶುಪಾಲರಾದ ಡಾ.ಚಿಂತನಾ ರಾಜೇಶ್ ರವರು ವಿವಿಧ ತರಗತಿಗಳ ವಿದ್ಯಾರ್ಥಿಗಳಿಗಾನುಸಾರವಾಗಿ ಅವರ ಕಲಿಕಾ ಮಟ್ಟ, ಕಲ್ಪನಾ ಶಕ್ತಿ ಹಾಗೂ ಪೋಷಕತ್ವದ ಕುರಿತಾಗಿ ಮಾಹಿತಿ ನೀಡಿದರು.ಶಿಕ್ಷಕಿಯರಾದ ಪ್ರಿಯಾಂಕ, ಶ್ರೀದೇವಿ, ದಿವ್ಯ.ಎನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಆಶಾ.ಎಸ್, ಕವಿತಾ.ಪಿ ಮತ್ತು ಶಿಕ್ಷಕ ಶ್ರೀನಿವಾಸ್ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ಮಾಡಲಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ವಿವರಿಸಿದರು. ಶಿಕ್ಷಕಿಯರಾದ ಶ್ವೇತಾ, ಕಿರಣ್ ಕೊಠಾರಿ ಹಾಗೂ ಭಾಗ್ಯ ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.