

ಕುಂದಾಪುರ (ಜನವರಿ 12) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಮಂಗಳೂರಿನಲ್ಲಿ ಜನವರಿ 6 ಮತ್ತು 7ರಂದು ನಡೆದ 6ನೇ ಕುದುರೆಮುಖ್ ಟ್ರೋಫಿ, ಆಲ್ ಇಂಡಿಯಾ ಓಪನ್ ಫೈಡ್ ರೆಟೆಡ್ ರಾಪಿಡ್ ಚೆಸ್ ಟೂರ್ನಮೆಂಟ್ 2024ರ ಫೈನಲ್ ರಾಂಕಿಂಗ್ ಲಿಸ್ಟ್ ನ ಕೆಟಗರಿಯಲ್ಲಿ ಅತ್ಯುತ್ತಮ ಏಳು ಚೆಸ್ ಆಟಗಾರರಲ್ಲಿ ಒಬ್ಬನಾಗಿ, ಕರ್ನಾಟಕದ ಶ್ರೀನಿತ್ ಶೇಟ್ ಭಾಗವಹಿಸಿ, 9 ಸುತ್ತಿನಲ್ಲಿ 4 ಪಾಯಿಂಟ್ ಗಳಿಸಿ, ಮೂರನೇ ಸ್ಥಾನವನ್ನು ಪಡೆದಿರುತ್ತಾನೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು