ಕುಂದಾಪುರ (ಡಿ 21) : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ, ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ಡಿಸೆಂಬರ್ 28 ರಂದು ನೀಡಲಾಗುವ ಶಿವರಾಮ ಕಾರಂತ ಬಾಲ ಪುರಸ್ಕಾರಕ್ಕೆ ಕುಂದಾಪುರದ ಎಚ್.ಎಮ್.ಎಮ್ ಶಾಲೆಯ ಪ್ರಾಥಮಿಕ ವಿಭಾಗದ ಪ್ರತಿಭೆಗಳಾದ ಅವನಿ ಎ ಶೆಟ್ಟಿಗಾರ್ ಮತ್ತು ಶ್ರೇಯಸ್ ಎಸ್ ರಾವ್ ಆಯ್ಕೆಯಾಗಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ರವರು ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಬಾಲ ಪ್ರತಿಭೆಗಳಿಗೆ ಶುಭ ಹಾರೈಸಿ, ಅಭಿನಂದಿಸಿದರು.