

ಕುಂದಾಪುರ (ಎ. 9) : ಕುಂದಾಪುರ ಎಜುಕೇಶನ್ ಸೊಸೈಟಿ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಹಮ್ಮಿಕೊಂಡಿರುವ ಸಮ್ಮರ್ ಕ್ಯಾಂಪ್ ʼಪ್ಯಾಟಿ ಮಕ್ಕಳ್ ಹಳ್ಳಿ ಟೂರ್ʼ 4ನೇ ದಿನವಾದ ಇಂದು ಶಿಬಿರಾರ್ಥಿಗಳು ವಾಣಿಜ್ಯ ಬೆಳೆಗಳ ಬಗ್ಗೆ ಅರಿಯಲು ಆಲೂರಿಗೆ ಭೇಟಿ ನೀಡಿದರು.
ಆಲೂರಿನಲ್ಲಿರುವ ಬಾಳೆಯ ತೋಟ ಹಾಗೂ ಅಡಿಕೆ ತೋಟಗಳನ್ನು ವೀಕ್ಷಿಸಿ ಅದರ ನಿರ್ವಹಣೆ ಅಲ್ಲದೇ ರಬ್ಬರ್ ತೋಟದಲ್ಲಿ ರಬ್ಬರ್ ಹಾಲಿನ ಸಂಗ್ರಹಣೆ, ನಿರ್ವಹಣೆ, ಮರದ ಬಾಳಿಕೆ ಹಾಗೂ ರಬ್ಬರ್ ನಿಂದ ತಯಾರಿಸುವ ವಿವಿಧ ಉಪಯೋಗಿ ವಸ್ತುಗಳ ಬಗ್ಗೆ ತೋಟದ ಮಾಲೀಕರಾದ ವಿ. ವಿ. ಥಾಮಸ್ ರವರಿಂದ ಹೆಚ್ಚಿನ ಮಾಹಿತಿಯನ್ನು ಪಡೆದರು.
ವಿದ್ಯಾರ್ಥಿಗಳು ತೋಟದಲ್ಲಿ ವಿವಿಧ ಆಟಗಳನ್ನು ಆಡಿ ಸಂಭ್ರಮಿಸಿದರು. ಸೌಪರ್ಣಿಕಾ ನದಿಯಲ್ಲಿನ ನೀರಾಟವು ವಿದ್ಯಾರ್ಥಿಗಳ ಖುಷಿಯನ್ನು ಇಮ್ಮಡಿಗೊಳಿಸಿತು. ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

