

ಕುಂದಾಪುರ (ಎ.12) : ನಗು ಸಹಜ, ನಗಿಸುವುದು ಪರಧರ್ಮ. ಜೀವನದಲ್ಲಿ ನಗು ಅಳು ಮನಸ್ಸಿನ ಕನ್ನಡಿಯಂತೆ. ಏನೇ ನೋವುಗಳಿದ್ದರೂ ನಗುನಗುತ್ತಾ ಬದುಕಬೇಕು ಎಂದು ನೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ನ 8ನೇ ದಿನದ ಬೇಸಿಗೆ ಶಿಬಿರದಲ್ಲಿ ಹಾಸ್ಯ ಚಟಾಕಿ ನಡೆಸಿದರು.
ಇನ್ನೋರ್ವ ಅತಿಥಿ ಕುಂದಾಪುರದ ಒಡಿ. ಬೀನ್ ಎಂದು ಹೆಗ್ಗಳಿಕೆ ಪಡೆದ ಪ್ರಸಾದ್ ಜೋಗಿ ತಮ್ಮದೇ ಕುಂದಗನ್ನಡದ ಮಾತಿನ ಶೈಲಿಯಲ್ಲಿ ಮಾತನಾಡಿ ಎಲ್ಲರನ್ನೂ ನಗುವಿನ ಕಡಲಿನಲ್ಲಿ ತೇಲುವಂತೆ ಮಾಡಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಚಂದ್ರಶೇಖರ್ ಶೆಟ್ಟಿ ನಿರೂಪಿಸಿ ವಂದಿಸಿದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.


