ಶ್ರೀನಿವಾಸಪುರ 5 : ಬದುಕಿಗೆ ವಿದ್ಯೆಯ ಬೆಳಕು ತೋರುವ ಗರುವಿಗೆ ಭೂಮಿ ಮತ್ತು ತಾಯಿಯ ನಂತರದ ಸ್ಥಾನ ಸಿಕ್ಕಿರುವುದು ಗುರುವಿಗೆ ಮಾತ್ರ ಶ್ಲಾಘನೀಯವೆಂದು ಬಿಇಒ ವಿ.ಉಮಾದೇವಿ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೋಡಿಗೆ , ಪ್ರೌಡಶಾಲಾ ಸಹ ಸಂಘದ ನೂತನ ಪದಾಧಿಕಾರಿಗಳಿಗೆ, ತಾಲ್ಲೂಕು ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳಿಗೆ ಸನ್ಮಾನ, ನೂತನ ಸಿಆರ್‍ಪಿ ಗಳಗೆ ಅಭಿನಂದನೆ ಹಾಗು ರಾಜ್ಯ ಪುರಸ್ಕøತ ಶಿಕ್ಷಣ ಸಾರಥಿ ಪ್ರಶಸ್ತಿ ಶಿಕ್ಷಕ ವೇಣುಗೋಪಾಲ್‍ರವರಿಗೆ ಸನ್ಮಾನ, ಹಾಗು ಕ್ಷೇತ್ರ ಸಂನ್ಮೂಲ ಸಂಶೋದನ ಶಿಕ್ಷಕ ಜಿ.ವಿ.ಚಂದ್ರಪ್ಪರವರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಭವ್ಯ ಭಾರತ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಶಿಕ್ಷಕನು ಪ್ರತಿ ಮಗುವಿನಲ್ಲಿನ ಅಂದಕಾರವನ್ನು ಹೋಗಲಾಡಿಸಿ ಬೆಳಕಿನಡೆಗೆ ಕರೆದುಯ್ಯುವ ಕೆಲಸವನ್ನು ಮಾಡುತ್ತಿದ್ದು, ಇದರಿಂದಾಗಿ ಆಧುನಿಕ ಪ್ರಪಂಚಕ್ಕೆ ಶಿಕ್ಷಕರ ಕೂಡುಗೆ ಮಹತ್ವ ಪೂರ್ಣವಾಗಿದ್ದು, ವಯೋನಿವೃತ್ತಿಯನ್ನು ಹೋಂದುತ್ತಿರುವ ಶಿಕ್ಷಕರ ನಿವೃತ್ತಿ ಜೀವನ ಸಖಕರವಾಗಿರಲಿ ಎಂದು ಆಶಿಸಿದರು.
ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ ಸಮಾಜಕ್ಕೆ ಶಿಕ್ಷಕನ ಪಾತ್ರ ಮುಖ್ಯ . ಒಬ್ಬ ಶಿಕ್ಷಕ ವಿದ್ಯಾರ್ಥಿಯನ್ನು ಮೌಲ್ಯಯುತ ಶಿಕ್ಷಣವನ್ನು ನೀಡಿ , ಸಮಾಜದ ಆಗು ಹೋಗಗಳ ಬಗ್ಗೆ ತಿಳಿಸಿ . ಸಮಾಜಕ್ಕೆ ಕೊಡಿಗೆಯಾಗಿ ನೀಡುತ್ತಾನೆ ಉತ್ತಮ ಸಮಾಜ ಸೃಷ್ಟಿಯಾಗಲು ಶಿಕ್ಷಕನ ಪಾತ್ರ ಮುಖ್ಯ ಎಂದರು.
ಗೌರವಾಧ್ಯಕ್ಷ ಶ್ರೀನಿವಾಸಯ್ಯ, ಎನ್‍ಪಿಎಸ್ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ವಿ.ಅಶೋಕ್, ಖಜಾಂಚಿ ಜನಾರ್ಧನ್ ಹಾಗೂ ನೌಕರರ ಸಂಘದ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.