ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಮೂವರಿಗೆ ಗುರು ದೀಕ್ಷೆ 

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು

ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಉಡುಪಿಯ ಧರ್ಮಾಧ್ಯಕ್ಷರು ಆಗಿರುವ ಅತಿ ವಂದನಿಯ ಜೆರಾಲ್ಡ್ ಐಸಾಕ್ ಲೋಬೋ ರವರು  ದಿಯಾಕೋನ್ ಪ್ಯಾರೆಲ್ ಫೆರ್ನಾಂಡಿಸ್, ದಿಯಾಕೋನ್ ನೆಲ್ಸನ್ ರೆಬೆರೊ,ದಿಯಾಕೋನ್ ಮ್ಯಾಪ್ಲೀನ್ ಲೋಬೋ ಇವರಿಗೆ ಗುರು ದೀಕ್ಷೆಯನ್ನು ನೀಡಿ ಯೇಸುಕ್ರಿಸ್ತರ  ಸೇವಾ ಹಾಗೂ ತ್ಯಾಗ-ಬಲಿದಾನಗಳ ಬೋಧನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಲೊ,
ಗೋವಾ ಪಿಲಾರ್ ಮಹಾಸಭೆಯ ವಂದನೀಯ ನಜರೆತ್ ಫೆರ್ನಾಂಡಿಸ್, ವಂದನೀಯ ಪೀಟರ್ ಮೇಲೋ ಫೆರ್ನಾಂಡಿಸ್, ವಂದನೀಯ ಹೆರಾಲ್ಡ್ ಮಥಾಯಸ್ ಹಾಗೂ ವಿವಿಧ ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು
.