

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಮಾರುಕಟ್ಟೆ ದರಗಳನ್ನು 2023-24ನೇ ಸಾಲಿನ ತಾಲೂಕು ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿ ಸಭೆಯಲ್ಲಿ ಪರಿಷ್ಕರಿಸಲಾಗಿದೆ. ಪರಿಷ್ಕರಿಸಿದ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ದರಗಳ ಕರಡು ಪ್ರತಿಯನ್ನು ಸಾರ್ವಜನಿಕ ಸಲಹೆ ಸೂಚನೆ ಮತ್ತು ಆಕ್ಷೇಪಣೆಗಳಿಗಾಗಿ ಶ್ರೀನಿವಾಸಪುರ ಉಪ ನೊಂದಣಿ ಕಚೇರಿಯಲ್ಲಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಸಲಹೆ ಸೂಚನೆ ಆಕ್ಷೇಪಣೆ ಇದ್ದರೆ ಸೆಪ್ಟೆಂಬರ್ 14ರ ಒಳಗೆ ಶ್ರೀನಿವಾಸಪುರ ಉಪ ನೊಂದಣಾ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ, ಆಸ್ತಿ ಮೌಲ್ಯ ಮಾಪನ ಸಮಿತಿಗೆ ಲಿಖಿತ ರೂಪದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದು ಶ್ರೀನಿವಾಸಪುರ ಉಪ ನೊಂದಣಾ ಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ