JANANUDI.COM NETWORK
ಕುಂದಾಪುರ, ಮಾ.12: “ಸಾಧಕರಿಗೆ ಆಯಾಸವಿಲ್ಲ, ಸಾಧನೆ ಮಾಡಬೇಕಾದರೆ ನಮ್ಮ ಗುರಿ ತಲುಪಬೇಕಿದ್ದರೆ, ನಾವು ಪ್ರಯತ್ನ ಪಡಲೇ ಬೇಕು. ನೀವು ಪ್ರಯತ್ನಿಸಿದ್ದಿರಿ ನೀವು ಸಾಧಕರಾಗಿದ್ದಿರಿ, ಅದಕ್ಕೆ ನಿಮಗೆ ಅಭಿನಂದನೆಗಳು” ಎಂದು ಬೈಂದೂರು ಚರ್ಚಿನ ಧರ್ಮಗುರುಗಳಾದ ವಂ|ವಿನ್ಸೆಂಟ್ ಕುವೆಲ್ಲೊ ಹೇಳಿದರು.
ಅವರು ಕುಂದಾಪುರದಲ್ಲಿ ವಿದ್ಯಾದಾನದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜು ತಮ್ಮ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ವಿಜೇತ ಪ್ರತಿಭಾ ಶಾಲಿ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಗೌರವಿಸಿ ಸಂದೇಶ ನೀಡಿದಿರು ‘ಮಕ್ಕಳು ನೆನಪಿಟ್ಟುಕೊಳ್ಳಬೇಕು, ನಾವು ವಿದ್ಯಾರ್ಥಿ ಜೀವನದಲ್ಲಿ ಸಮಯ ಮೋಜು ಮಸ್ತಿಗೆ ಒಳ ಪಡಿಸದೆ, ಒದಿನತ್ತ ಗಮನ ಕೊಡಬೇಕು, ವಿದ್ಯಾರ್ಥಿ ಜೀವನಲ್ಲಿ ಜೀವನದಲ್ಲಿ ಕಲಿಯುವಿಕೆಯನ್ನೆ ನನ್ನ ತ್ರಪ್ತಿಯನ್ನಾಗಿಸಿಕೊಂಡರೆ, ಮುಂದಕ್ಕೆ ನೀವು ಜೀವನದಲ್ಲಿ ಯಶಸ್ವಿಯಾಗುತ್ತಿರಿ’ ಎಂದು ಅವರು ಹೇಳಿದರು.
ಗೌರವ ಅತಿಥಿಗಳು, ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ನವೀನ್ ಕುಮಾರ್ ಕೆ. ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಿ ಈ ವಿದ್ಯಾ ಸಂಸ್ಥೆಯಲ್ಲಿ ಜೀವನ ರೂಪಿಸುವ ಶಿಕ್ಷಣ ನೀಡಲಾಗುತ್ತೆ ಅಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಂಟ್ ಮೇರಿಸ್ ವಿದ್ಯಾ ಸಮುಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ, ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿ “ಮನಸಿದ್ದಲ್ಲಿ ಮಾರ್ಗವಿದೆ, ವಿದ್ಯಾರ್ಥಿ ಜೀವನದಲ್ಲಿ ಸಮಯ ಹಾಳು ಮಾಡದೆ, ವಿದ್ಯೆಯತ್ತ ಗುರಿ ವಹಿಸಿದ್ದಲ್ಲಿ, ವಿದ್ಯಾರ್ಥಿ ಜೀವನ ಸಫಲವಾಗುತ್ತೆ, ಸಾಧನೆ ಮಾಡಲು ಪರದೇಶಕ್ಕೆ ಹೋಗಬೇಕಾಗಿಲ್ಲ ಅದಕ್ಕೆ ಉದಾರಣೆ ನಮ್ಮ ಹಳೆ ವಿದ್ಯಾರ್ಥಿ ಇಂದಿನ ಗೌರವ ವಿದ್ಯಾರ್ಥಿ ಅವರು ಇಂದು ಸಮಾಜದಲ್ಲಿ ತಮ್ಮ ಗುರುತಿಸುವಿಕೆಯನ್ನು ಕಂಡುಕೊಂಡಿದ್ದಾರೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಪಿ.ಯು.ಸಿ.ಯಲ್ಲಿ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ವಿಜೇತರಾಗಿದವರಿಗೆ, ಹೆಚ್ಚು ಅಂಕ ಗಳಿಸಿದವರಿಗೆ, ಕಾಲೇಜಿನಲ್ಲಿ ಅತ್ಯುತ್ತಮ ಸ್ಥಾನ ಪಡೆದವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಗ್ಲೇನ್ ರೋಚ್ ಮತ್ತು ಸ್ನೇಹಲ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕರಾದ ನಾಗರಾಜ್, ದಿವ್ಯಾ, ಸಂಚನಾ ಸಹಕರಿಸಿದರು. ಉಪನ್ಯಾಸಕಿ ಪ್ರೀತಿ ಕ್ರಾಸ್ತಾ ಕಾರ್ಯಕ್ರಮದ ಸಂಚಾಲಿಕೆಯಾಗಿದ್ದು, ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ವಂದಿಸಿದರು.