JANANUDI.COM NETWORK
ಕೋವಿಡ್ ಔಷಧಗಳಿಗೆ ಜಿ.ಎಸ್.ಟಿ. ವಿನಾಯಿತಿ ನೀಡಲಿಕ್ಕೆ ಆಗುವುದಿಲ್ಲ : ನಿರ್ಮಲಾ ಸೀತಾರಾಮನ್
ನವದೆಹಲಿ : ಕೋವಿಡ್ ಮಾರಕ ರೋಗದ ಅಗತ್ಯ ಚಿಕಿತ್ಸಾ ಔಷಧಿಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲಸಿಕೆ, ಔಷಧ ಮತ್ತು ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಲಸಿಕೆಗೆ 5ಶೇ. ತೆರಿಗೆ ಇದೆ. ಕೋವಿಡ್‌ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳಿಗೆ ಶೇ 12ರಷ್ಟು ತೆರಿಗೆ ಕಟ್ಟಲೇ ಬೇಕು ಎಂದು ತಿಳಿಸಿದ್ದಾರೆ
ಜಿಎಸ್‌ಟಿಯಿಂದ ಪೂರ್ತಿ ವಿನಾಯಿತಿ ನೀಡಿದರೆ, ಲಸಿಕೆ ತಯಾರಕರಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಜಿಎಸ್.ಟಿ ಮೊತ್ತವನ್ನು ಗ್ರಾಹಕರ ಮೇಲೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಸುದ್ದಿ ಮೂಲಗಳು ಹೇಳುತ್ತವೆ.
ಈ ಸರ್ಕಾರ ಇಂತಹ ಕಷ್ಟ ಸಂದರ್ಭದಲ್ಲೂ, ಸಾವು ನೋವಿನಲ್ಲಿ ಮಿಂದೆಳುತಿದ್ದಾಗ ಬಡ ಜನತೆಗೆ ಸಹಾಯ ಮಾಡದಿರುವುದು, ಇವರು ಬಡ ಜನತೆಯ ಉದ್ದಾರ ಮಾಡುತ್ತಿದೆಯೆ? ಈ ಸರ್ಕಾರದಿಂದ ಇನ್ನೇನು ಆಶಿಸಬಹುದು?