

ಗ್ರೀನ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ರೋಟರಿ ಕುಂದಾಪುರ ದಕ್ಷಿಣ ದ ಆಶ್ರಯದಲ್ಲಿ ಸಾರ್ವಜನಿಕ ರಿಗೆ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಅಮೂಲ್ಯ ಗಿಡಮೂಲಿಕೆ ಹಾಗೂ ಹಣ್ಣುಗಳ ಸಸಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು , ರೋಟರಿ ಕುಂದಾಪುರ ದಕ್ಷಿಣ ದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕರು ವಹಿಸಿದ್ದರು.
ಗ್ರೀನ್ ಇಂಡಿಯಾ ಫೌಂಡೇಶನ್ ಅಧ್ಯಕ್ಷ ಮುನಿಯಾಲ್ ಗಣೇಶ್ ಶೆಣೈ ಅಮೂಲ್ಯ ಸಸಿಗಳಿಂದಾಗುವ ಪ್ರಯೋಜನ ವಿವರಿಸಿದರು. ಸಂಸ್ಥೆಯ ವಿಶ್ವಸ್ಥ ಡಾ.ಉತ್ತಮಕುಮಾರ್ ಶೆಟ್ಟಿ ಫಲಾನುಭವಿಗಳ ವಿವರ ನೀಡಿದರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ವಂದಿಸಿದರು.

