ಕುಂದಾಪುರದಲ್ಲಿ ಅಜ್ಜ ಅಜ್ಜಿ – ಹಿರಿಯರ ದಿನಾಚರಣೆ “ಬಿಳಿ ಕೂದಲು ಜೀವಿತಕ್ಕೆ ಒಂದು ಕೀರಿಟ: ಫಾ| ರೋಶನ್ ಡಿಸೋಜಾ


ಕುಂದಾಪುರ,ಜು.30: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಅಜ್ಜ-ಅಜ್ಜಿ ಹಾಗೂ ಹಿರಿಯರ ದಿನಾಚರಣೆಯನ್ನು (30-7-230) ಆಚರಿಸಲಾಯಿತು. ಮೊದಲಿಗೆ ಚರ್ಚಿನಲ್ಲಿ ಕøತ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಅ|ವಂ|ರೋಶನ್ ಡಿಸೋಜಾ ಪವಿತ್ರ ಬಲಿದಾನವನ್ನು ಅರ್ಪಿಸಿ ‘ನಾವು ನಮ್ಮ ಹಿರಿಯವರ ಹತ್ತಿರ ಕಲಿಯಬೇಕಾದ್ದು ತುಂಬಾ ಇದೆ, ನಮ್ಮಲ್ಲಿ ವಿಧ್ಯೆ, ಶಿಕ್ಷಣ, ದೊಡ್ಡ ದೊಡ್ಡ ಪದವಿಗಳಿರಬಹುದು, ಆದರೆ ಹಿರಿಯರಲ್ಲಿರುವ ಅನುಭವ ನಮ್ಮಲ್ಲಿ ಇಲ್ಲ. ಅವರಲ್ಲಿ ಜೀವನದ ಅಪಾರ ಅನುಭವ ಇದೆ, ಅವರು ಅಮಗಿರುವ ಸವಲತ್ತುಗಳು ಇಲ್ಲದೇಯು, ನಮಕ್ಕಿಂತ ಹೆಚ್ಚು ಶ್ರಮಪಟ್ಟು ನಮ್ಮನ್ನು ಸಲಹಿದ್ದಾರೆ. ಯಾರು ಹಿರಿಯರಿಗೆ ವಿಧೇಯತೆ, ಗೌರವ ಕೊಟ್ಟು ಬಾಳಿದ್ದಾರೊ ಅವರೆಲ್ಲರಿಗೆ ಒಳಿತಾಗಿದೆ, ಯಾರೆಲ್ಲ ಅಗೌರವ ದುಖ ನೀಡಿದ್ದಾರೊ ಅವರಿಗೆಲ್ಲ ಕೆಟ್ಟದಾಗಿದೆ, ಹಿರಿಯರಿಂದ ನಮಗೆ ಆಸ್ತಿ ಪಾಸ್ತಿ ಬಳುವಳಿ ಬಂದಿದೆ, ಎಲ್ಲದಕಿಂತ ಹೆಚ್ಚು ದೇವರ ಮೇಲಿನ ಧ್ರಡ ನಂಬಿಕೆಯನ್ನು ಕೊಡಮಾಡುತ್ತಲೇ ಬಂದಿದ್ದಾರೆ. ಹಿರಿಯರ ಬಿಳಿ ಕೂದಲು ಅವರ ಜೀವಿತಕ್ಕೆ ಒಂದು ಕೀರಿಟವಾಗಿದೆ” ಎಂದು ಹೇಳುತ್ತಾ ಹಿರಿಯರಿಗೆ ಒಂದು ಕಿವಿ ಮಾತು ಹೇಳಿದರು “ನೀವು ನಿಮ್ಮ ಮಕ್ಕಳಿಗೆ ಆಸ್ತಿ ಪಾಸ್ತಿ ಸಂಪತ್ತು ಇದ್ದರೆ ಎಲ್ಲವನ್ನು ಮಕ್ಕಳಿಗೆ ಕೊಡಬೇಡಿ, ಸ್ವಲ್ಪವಾದರೂ ದಾನಧರ್ಮ ಮಾಡಿ” ಎಂದು ಅವರು ಸಂದೇಶದಲ್ಲಿ ತಿಳಿಸಿದರು.
ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಹಬಲಿದಾನದಲ್ಲಿ ಭಾಗಿಯಾಗಿ, ಹಿರಿಯರಿಗೆ, ಅಜ್ಜ-ಅಜ್ಜಿಯಂದಿರಿಗೆ ಶುಭಾಶಯ ಕೋರಿ ಧನ್ಯವಾದಗಳನ್ನು ಅರ್ಪಿಸಿದರು. ಅತಿ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ ಇಗರ್ಜಿಯ 13 ವಾಳೆಯವರ ಅಜ್ಜ- ಅಜ್ಜಿಯಂದರಿಗೆ ಹೂ ನೀಡಿ ಅಭಿನಂದಿಸಲಾಯಿತು. ಭಾನುವಾರದ ಪ್ರಾರ್ಥನ ವಿಧಿಯನ್ನು ಹಿರಿಯರು ನೆಡಸಿಕೊಟ್ಟರು. ಕಾರ್ಯಕ್ರಮವನ್ನು ಇಗರ್ಜಿಯ ಕುಟುಂಬ ಆಯೋಗದಿಂದ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು. ಹಿರಿಯ ಧರ್ಮಭಗಿನಿಯರು ಸೇರಿ ಸುಮಾರು 140 ಹಿರಿಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸರ್ವ ಆಯೋಗದದ ಸಂಯೋಜಕಿ ಪ್ರೇಮಾ ಡಿಕುನ್ಹಾ, ಇಗರ್ಜಿಯ ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೆಜೆಸ್ ಮತ್ತು ಸದಸ್ಯರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಉಪಸ್ಥತರಿದ್ದರು.