JANANUDI.COM NETWORK
ಡಿಸೆಂಬರ್ 22 ಮತ್ತು 27ರಂದು ರಾಜ್ಯದಾದ್ಯಂತ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದ ವಿವರಗಳು ಪ್ರಕಟವಾಗಿದ್ದು ವಿಜೇತ ಅಭ್ಯರ್ಥಿಗಳು ಇದೀಗ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲಾತಿಯ ನಿರೀಕ್ಷೆಯಲ್ಲಿ ಇದ್ದಾರೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ 3800ಕ್ಕೂ ಹೆಚ್ಚು ಗ್ರಾಮ ಪಂಚಾಯತಿ ಗಳಲ್ಲಿ ಗೆಲುವು ಸಾಧಿಸಿದೆ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂತಹ ಬಾಲಿಷ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದರು.
ಆದರೆ ಇದೀಗ ಪಕ್ಷವಾರು ಪಟ್ಟಿ ಪ್ರಕಟವಾಗಿದ್ದು ಆ ಪಟ್ಟಿಯ ಪ್ರಕಾರ ಕರ್ನಾಟಕ ರಾಜ್ಯದ ಒಟ್ಟು 91,339 ಸ್ಥಾನಗಳಲ್ಲಿ, ಕಾಂಗ್ರೆಸ್ 32,829 ಸ್ಥಾನಗಳನ್ನು ಪಡೆದು ಮೊದಲ ಸ್ಥಾನದಲ್ಲಿ ಇದ್ದರೆ, ಬಿಜೆಪಿ 30,853 ಸ್ಥಾನಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ಜೆಡಿಎಸ್ 16841 ಸ್ಥಾನಗಳನ್ನು, ಯೋಗೇಂದ್ರ ಯಾದವ್ ನೇತೃತ್ವದ ಸ್ವರಾಜ್ ಇಂಡಿಯಾ 1800 ಸ್ಥಾನಗಳನ್ನು, ಎಸ್ಡಿಪಿಐ: 221, ಸಿಪಿಐಎಂ: 150, ಸಿಪಿಐ: 88, ಡಬ್ಲೂಪಿಐ: 44, ಆಮ್‌ಆದ್ಮಿ: 286, ಬಿಎಸ್‌ಪಿ: 236 ಹಾಗೂ 7991 ಸ್ಥಾನಗಳನ್ನು ಪಕ್ಷೇತರರು ಮತ್ತಿತರರು ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪಟ್ಟಿಯ ಸತ್ಯಾಸತ್ಯತೆ ನಿಖರವಾಗಿ ಗೊತಿಲ್ಲಾ ಸತ್ಯಾಂಶ ಇನ್ನಷ್ಟೆ ತಿಳಿಯಬೇಕಿದೆ.