ಮುತ್ತಕಪಲ್ಲಿಯಲ್ಲಿ ಗ್ರಾಮಪಂಚಾಯತಿ ಮಟ್ಟದ ಕ್ರೀಡಾಕೂಟ ಬಿಇಒ ಉಮಾದೇವಿಯಿಂದ ಉದ್ಘಾಟನೆ

ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ,        ಸಂಪಾದಕರು: ಬರ್ನಾಡ್ ಡಿ’ಕೋಸ್ತಾ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ ಪಾಲ್ಗೂಳ್ಳುವ್ಯದರಿಂದ ದೈಹಿಕ ಹಾಗು ಮಾನಸಿಕವಾಗಿ ಸದೃಡವಾಗುತ್ತಾರೆಂದು ಬಿಇಒ ಉಮಾದೇವಿ ತಿಳಿಸಿದರು.


ಅವರು ತಾಲ್ಲೂಕಿನ ಮುತ್ತಕಪಲ್ಲಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ನಡೆದ ಗ್ರಾಮಪಂಚಾಯತಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೂಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಮನಸ್ಸು ಉಲ್ಲಾಸವಾಗಿ ,ಏಕಾಗ್ರತೆಯು ಬೆಳೆಯುತ್ತದೆ ಎಂದು ತಿಳಿಸಿದರು.


ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್, ಉಪನ್ಯಾಸಕ ಶೇಷಗಿರಿ, ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮಚೆನ್ನಪ್ಪ, ಸದಸ್ಯರಾದ ಎಂ.ಕೆ.ಸುರೇಶ್‍ಕುಮಾರ್, ನಸೀಮ್ಮನ್ನಿಸಾ, ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಎಂ.ವಿ.ಬಷೀರ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಲಕ್ಷ್ಮಯ್ಯ ಇತರರು ಇದ್ದರು.