ಕೋಲಾರ,ಜೂ.07: ಗ್ರಾಮ ಪಂಚಾಯತಿ ಅಧಿಕಾರಿಗಳು ಪ್ರಾಮಾಣಿಕ ಸೇವೆಗೆ ಆದ್ಯತೆ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಥ್ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ, ಅಸರ, ಗ್ರಾಮವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ದಿ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಹಾಗೂ ಹವಾಮಾನ ಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರದ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಅಧಿಕಾರಿಗಳು ಸೇವೆಯಲ್ಲಿ ವರ್ಗಾವಣೆ ಹಾಗೂ ಕಿರಿಕಿರಿಗಳಿಗೆ ಹೆದರದೆ ಆತ್ಮಸಾಕ್ಷಿಗೆ ಮೊಸಮಾಡಿಕೊಳ್ಳದೆ ಪ್ರಾಮಾಣಿಕ ಸೇವೆಗೆ ಒತ್ತು ನೀಡುವ ಮೂಲಕ ಜನಸ್ನೇಹಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರೆ ಮಾತ್ರ ತಮ್ಮ ಸೇವೆಗೆ ಸಾರ್ಥಕಕತೆ ಬರುತ್ತದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯರಿಗೆ ಸಿಕ್ಕಿರುವ ರಾಜಕೀಯ ಸ್ಥಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಈಗ ಸಿಕ್ಕಿರುವ ಅವಕಾಶವನ್ನು ಮೀಸಲಿಟ್ಟು, ಗ್ರಾಮಗಳಿಗೆ ಉತ್ತಮ ಆಡಳಿತವನ್ನು ಪ್ರತಿಯೊಬ್ಬ ಸದಸ್ಯರು ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದರು.
ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ಬಂಡಿಗೆ ಎರಡು ಚಕ್ರಗಳಿದ್ದಂತೆ. ಇದರಲ್ಲಿ ಯಾರೊಬ್ಬರು ತಪ್ಪು ಮಾಡಿದರೂ ಬಂಡಿಯ ಚಕ್ರ ಕಳಚಿ ಬಿದ್ದಂತೆ. ಈ ನಿಟ್ಟಿನಲ್ಲಿ ಇಬ್ಬರು ಸಹ ಸರಿದಾರಿಯಲ್ಲಿ ಸಾಗಿ ಕರ್ತವ್ಯನಿಷ್ಟೆ ಪ್ರದರ್ಶಿಸಬೇಕೆಂದರು.
ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಉಪಾಧ್ಯಕ್ಷರೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಪಿ.ಡಿ.ಓ ಗಳೇ ಕಾರ್ಯದರ್ಶಿಗಳು ಆಡಳಿತದ ಸಂಪೂರ್ಣ ಅಧಿಕಾರ ನಿಮಗೆ ಇದೆ. ಗ್ರಾಮದ ಅಭಿವೃದ್ದಿ ಯೋಜನೆಗಳನ್ನು ನೀವೆ ರೂಪಿಸಿ ಅನುಮತಿ ಪಡೆದು ಅನುಷ್ಟನಗೊಳಿಸುವಂತ ಸ್ವಾತಂತ್ರ್ಯವನ್ನು ಪ್ರಜಾಪ್ರಭುತ್ವ ನಿಮಗೆ ನೀಡಿದೆ. ಅದರೆ ಅದನ್ನು ಸದ್ಬಳಿಸಿಕೊಂಡು ಅಭಿವೃದ್ದಿ ಪಡೆಸುವಂತ ಪ್ರಮಾಣಿಕ ಇಚ್ಚಾಶಕ್ತಿ ನಿಮ್ಮಲ್ಲಿ ಇರಬೇಕು ಎಂದರು.
ಇದೇ ರೀತಿ ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ತ್ರಿಲೋಕಚಂದ್ರ ಮತ್ತು ಸಂಜಯ್ ದಾಸ್ ಗುಪ್ತ ಅವರು ಕೆರೆ ಕುಂಟೆ, ಕಲ್ಯಾಣಿಗಳ ಸ್ವಚ್ಚತೆ, ಕೆರೆಗಳಲ್ಲಿ ಹೊಳು ಎತ್ತುವಿಕೆ, ಕೊಳವೆಬಾವಿಗಳ ಮರುಪೂರ್ಣ ಯೋಜನೆಯ ಮೂಲಕ ಸುಮಾರು 300 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆ ಹರಿಸುವ ಜೂತೆಗೆ ಕಲ್ಯಾಣಿಗಳು, ಕೆರೆಗಳ ಸ್ವಚ್ಚತೆಗೆ ಅದ್ಯತೆ ನೀಡಿದ್ದನ್ನು ಸ್ಮರಿಸಿದರು.
ಅದರೆ ಇಂದು ನಾವು ಕೆರೆ, ಕಾಲುವೆಗಳನ್ನು ಒತ್ತುವರಿ ಮಾಡದೆ, ಗಿಡಮರಗಳನ್ನು ನಾಳ ಪಡಿಸದೆ ಉಳಿಸಿ ಕೊಂಡಿದ್ದರೆ ಕೊಳವೆ ಬಾವಿಗಳನ್ನು ಪಾತಳದ ಅಳಕ್ಕೆ ಕೊರೆಯ ಬೇಕಾಗಿರಲಿಲ್ಲ. ಬೆಳೆಗಳಿಗೆ ರಾಸಾಯನಿಕ, ಔಷಧಿಗಳನ್ನು ಸಿಂಪಡಿಸ ಬೇಕಾದ ದುರ್ಗತಿ ಬರುತ್ತಿರಲಿಲ್ಲ. ನಾವು ಇಂದು ಕೊಳಚೆ ನೀರನ್ನು ಶುದ್ದೀಕರಿಸಿ ಕೊಂಡು ಬಳಿಸುವಂತ ಕರ್ಮವೂ ಇರುತ್ತಿರಲಿಲ್ಲ ಎಂದು ಕುಟುಕಿದರು,
ಗಿಡಮರಗಳನ್ನು ನಾಶ ಪಡೆಸಿದ ಹಿನ್ನಲೆಯಲ್ಲಿ ಅರಣ್ಯದ ಪ್ರಾಣಿಗಳು ನಾಡಿಗೆ ಬರುವಂತಾಗಿದೆ. ಹವಮಾನ ವೈಪರಿತ್ಯಗಳಿಂದಾಗಿ ಎತ್ತಿನ ಹೊಳೆ, ಕೆ.ಸಿ.ವ್ಯಾಲಿ, ಯರ್ಗೋಳ್ ಮುಂತಾದವರುಗಳಿಗೆ ಸಾವಿರಾರು ಕೋಟಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಉಂಟಾಗುತ್ತಿರಲಿಲ್ಲ. ಈಗಾಗಲು ಯರ್ಗೋಳ್ ಸುತ್ತಮುತ್ತಲು ಮಲೆನಾಡು ನೆನಪಿಗೆ ತರುತ್ತದೆ. ಮುಳಬಾಗಿಲಿನಲ್ಲೂ ಸಹ ಇದೇ ರೀತಿ ಇರುವುದನ್ನು ಕಾಣಬಹುದಾಗಿತ್ತು ಎಂದರು,
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಬಿ. ಮಾತನಾಡಿ, ಹವಮಾನ ವೈಪರಿತ್ಯಗಳು ರಾಷ್ಟ್ರ ಮಟ್ಟದಿಂದ ಗ್ರಾಮ ಪಂಚಾಯತ್ ಮಟ್ಟದವರೆಗೆ ಬರುವುದರಿಂದ ಪರಿಸರವನ್ನು ಉಳಿಸಿ ಬೆಳೆಸಿ ಕೊಳ್ಳುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ ಪರಿಸರ ಉಳಿಸಿದರೆ ನಮ್ಮ ಉಳಿವು ಸಾಧ್ಯ ಎಂಬ ಅರಿವು ಇರುವಂತಾಗಬೇಕೆಂದರು.
ಹವಮಾನ ವೈಪರಿತ್ಯಗಳಿಗೆ ಮಾನವನ ಅತಿಕ್ರಮಣಗಳು ಕಾರಣವಾಗಿದೆ. ಸಾಮಾನ್ಯ ತಾಪಮಾನಗಳು ಬದಲಾವಣೆಯಿಂದ ಉಷ್ಟಾಂಶಗಳ ನಿಯಂತ್ರಣದಲ್ಲಿರದೆ ಹೆಚ್ಚಳವಾಗುವುದು ಸೂರ್ಯನ ಕಿರಣಗಳು ಭೂಮಿಯಿಂದ ವಾಪಾಸ್ ಅಗದೆ ಇಂಗಾಲವಾಗಿ ಮಾನವನ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅಕಾಲಿಕ ಮಳೆ, ಜಡಿ ಮಳೆ, ಬರಗಾಲ ಇತ್ಯಾದಿಗಳಿಗೆ ಕಾರಣವಾಗಲಿದೆ. ಬೆಳೆಗಳ ಇಳುವರಿ ಕಡಿಮೆ, ಬೆಳೆಗಳ ಬೆಳವಣಿಕೆ ಕುಂಠಿತ, ಇತ್ಯಾದಿಗಳಿಂದಾಗಿ ಕೃಷಿಯ ಮೇಲೂ ಕೆಟ್ಟ ಪರಿಣಮವಾಗಲಿದೆ. ಇದೆಲ್ಲಾವನ್ನು ನಿಯಂತ್ರಿಸುವ ಶಕ್ತಿ ಪರಿಸರಕ್ಕೆ ಮಾತ್ರ ಇದೆ ಹಾಗಾಗಿ ಪರಿಸರವನ್ನು ನಾವು ಉಳಿಸಿಕೊಳ್ಳ ಬೇಕಾಗಿರುವುದು ಎಲ್ಲರಿಗೂ ಅನಿವಾರ್ಯವಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಗ್ರಾಮ ವಿಕಾಸ ಕಾರ್ಯನಿರ್ವಾಹಕ ಎಂ.ವಿ.ಎನ್.ರಾವ್ ಪ್ರಸ್ತಾವಿಕ ನುಡಿಗಳಾಡಿ, ಹವಮಾನ ಬದಲಾವಣೆ ಒಂದು ಚಳುವಳಿಯಾಗಿದೆ. ಪರಿಸರದ ನಾಶದಿಂದ ಹವಮಾನಗಳು ಬದಲಾಗುತ್ತಿದೆ. ನೈಸರ್ಗಿಕತೆಯ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವುದೇ ನಾವು ಅವರಿಗೆ ನೀಡುವಂತ ಕೊಡುಗೆಯಾಗಲಿದೆ ಎಂಬುವುದನ್ನು ಅರಿತು ಪ್ರತಿಯೊಬ್ಬರು ಪರಿಸರ ಉಳಿವಿಗೆ ಸರ್ಕಾರದ ಯೋಜನೆಗಳ ಅನುಷ್ಟನಕ್ಕೆ ಸಹಕಾರ ನೀಡುವ ಮೂಲಕ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿಚಂದ್ರನ್, ಆಸರ ಸಂಸ್ಥೆಯ ಯೋಜನೆ ಮತ್ತು ಕಾರ್ಯಚರಣೆ ವ್ಯವಸ್ಥಾಪಕ ಕೆ.ಸುದೀಪ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೋಸೆಪ್ಎ, ಚೌಡಪ್ಪ, ಹೂಹಳ್ಳಿ ನಾಗರಾಜ್ ಉಪಸ್ಥಿತರಿದ್ದರು.
ಪಾಪಮ್ಮ ಪ್ರಾರ್ಥನೆಯಲ್ಲಿ ಜಮೀನು, ಜಲ, ಜಂಗಲ್, ಜೀವಕ್ಕೆ ಅವಶ್ಯಕ ಎಂಬ ಪರಿಸರ ಗೀತೆಯನ್ನು ಅರ್ಥಪೂರ್ಣವಾಗಿ ಹಾಡಿದರು.