ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ದೈಹಿಕ ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಕುರಿತು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದರು.
ಕೋಲಾರ ಜಿಲ್ಲೆಯ ಪದಾಧಿಕಾರಿಗಳು ಸೇರಿದಂತೆ ರಾಜ್ಯ ದೈಹಿಕ ಶಿಕ್ಷಕರ ಸಂಘದಿಂದ ಬೆಂಗಳೂರಿನ ಶಾಸಕರ ಭವನದಲ್ಲಿ ಆಯೋಜಿಸಿದ್ದ ಸಂಘದ ಕಾರ್ಯಕಾರಿ ಸಭೆಗೆ ಚಾಲನೆ ನೀಡಿ, ಸಂಘ ನೀಡಿದ ಸನ್ವಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಲ್ಲಿ ಶಿಸ್ತು ಸಂಸ್ಕಾರ ಬೆಳೆಸುವ ಅತಿ ಪ್ರಮುಖ ಹೊಣೆ ಹೊತ್ತಿರುವ ದೈಹಿಕ ಶಿಕ್ಷಕರ ಕಾಯವನ್ನು ಮರೆಯಲಾಗದು, ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಶಾಲೆಗಳ ಭೌತಿಕ ತರಗತಿ ಆರಂಭಕ್ಕೆ ಅವಕಾಶ ನೀಡಿರುವುದರಿಂದ ನಿಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದು ತಿಳಿಸಿದರು.
ಪ್ರತಿ ಹಂತದಲ್ಲೂ ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಮಕ್ಕಳಿಗೆ ನೀವೇ ಪ್ರೇರಣೆಯಾಗಬೇಕು ಎಂದು ಕಿವಿಮಾತು ಹೇಳಿದ ಸಚಿವರು, ನಿಮ್ಮ ಬಹುಕಾಲದ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ದವಾಗಿದೆ, ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕ,ಪದವೀಧರ ವಿಧಾನಪರಿಷತ್ ಶಾಸಕರ ಬೆಂಬಲವೂ ನಿಮಗೆ ಇದ್ದು, ಬೇಗ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ವೈದ್ಯನಾಥನ್ ವರದಿ ಜಾರಿ ಮಾಡಿ-ವೈಎಎನ್
ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಶಿಸ್ತು,ದೇಶಪ್ರೇಮ ಬೆಳೆಸುವ ದೈಹಿಕ ಶಿಕ್ಷಕರ ಬಗ್ಗೆ ಅಪಾರಗೌರವವಿದೆ, ಅವರ ಬೇಡಿಕೆಗಳ ಈಡೇರಿಕೆ ವಿಳಂಬ ಸರಿಯಲ್ಲ, ದಯಮಾರಿ ಡಾ.ಎಲ್.ಆರ್.ವೈದ್ಯನಾಥನ್ ವರದಿ ಜಾರಿಗೆ ಸಚಿವರಿಗೆ ಮನವಿ ಮಾಡಿದರು.
ದೈಹಿಕ ಶಿಕ್ಷಣ ಶಿಕ್ಷಕರ ಬಹುದಿನಗಳ ಬೇಡಿಕೆಯಾದ ದೈಹಿಕ ಶಿಕ್ಷಕರ ವೃಂದ ನೇಮಕಾತಿ ನಿಯಮಗಳ ತಿದ್ದಪಡಿ ಮಾಡಿ ಸಹ ಶಿಕ್ಷಕರು ಎಂದು ಪದನಾಮ ಬದಲಾಯಿಸಿ ಸೇವಾ ಜೇಷ್ಟತೆಯನ್ವಯ ಮುಖ್ಯಶಿಕ್ಷಕರಾಗಿ ಬಡ್ತಿಗೆ ಅವಕಾಶ ಕಲ್ಪಿಸುವಂತೆ ಕೋರಿದರು.
ವಿಧಾನಪರಿಷತ್ ಶಾಸಕ ಅರಣ್‍ಶಹಾಪುರ ವೈದ್ಯನಾಥನ್ ವರದಿ ಕುರಿತು ಎಳೆಎಳೆಯಾಗಿ ವಿವರಿಸಿ, ದೈಹಿಕ ಶಿಕ್ಷಕರ ಹೆಸರನ್ನು ಶಾಲೆಗಳ ನಾಮಫಲಕದಲ್ಲಿ ಜೇಷ್ಠತಾ ಆಧಾರದಲ್ಲಿ ಪ್ರಕಟಿಸಲು, ಹಾಜರಾತಿ ವಹಿಯಲ್ಲಿ ನಮೂದಿಸಲು, ಪ್ರಭಾರ ನೀಡಿಕೆಯಲ್ಲಿನ ಗೊಂದಲ ಪರಿಹರಿಸಲು ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರ& ಪದವೀಧರ ಕ್ಷೇತ್ರದ ಎಲ್ಲಾ 14 ಜನ ಶಾಸಕರು ಈ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಜೊತೆಗಿರುವುದಾಗಿ ತಿಳಿಸಿದರು ಜೊತೆಗೆ ಪದವಿ ಪೂರ್ವ ಕಾಲೇಜಿನಲ್ಲಿ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಿಲ್ಲ ಖಾಲಿಯಿರುವ ಪ್ರಾಥಮಿಕ ,ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ನೇಮಕಾತಿ ಮಾಡುವಂತೆ ಸಚಿವರಲ್ಲಿ ಕೋರಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಎಸ್.ಚೌಡಪ್ಪ, ಪ್ರಾಸ್ತಾವಿಕವಾಗಿ ಮಾತನಾಡಿ, ವೃಂದ ಮತ್ತು ನೇಮಕಾತಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಿಗೆ ಮುಂಬಡ್ತಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ & ಪದವಿ ಕಾಲೇಜುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ, ಅನುದಾನಿತ ಶಾಲಾ ನೌಕರರಿಗೆ ಶಿಶುಪಾಲನೆ ರಜೆ, ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾಕೂಟ, ಮುಂಬಡ್ತಿಗಳು, ಈಗೆ ಹಲವಾರು ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ್ಯ ವಾದ ಬೇಡಿಕೆಗಳನ್ನು ಒಳಗೊಂಡ ವಿಷಯವನ್ನು ಸವಿಸ್ತಾರವಾಗಿ ಸಚಿವರ ಗಮನಕ್ಕೆ ತಂದರು.
ಸಭಾಪತಿ ಬಸವರಾಜಹೊರಟ್ಟಿ ಸೇರಿದಂತೆ ಶಿಕ್ಷಕ,ಪದವೀಧರ ಕ್ಷೇತ್ರದ ಎಲ್ಲಾ ಶಾಸಕರು ದೈಹಿಕ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಮ್ಮೊಂದಿಗಿದ್ದಾರೆ, ಅವರು ನೀಡುತ್ತಿರುವ ಸಹಕಾರವನ್ನು ದೈಹಿಕ ಶಿಕ್ಷಕರು ಎಂದಿಗೂ ಮರೆಯುವುದಿಲ್ಲ ಎಂದು ಧನ್ಯವಾದ ಸಲ್ಲಿಸಿದರು.
ಅಜಾದ್ ಅಹಮದ್‍ಗೆ ಸಚಿವರಿಂದ ಸನ್ಮಾನ
ಅಂತರ್ಜಾಲದ ಮುಖೇನ ವಿದ್ಯಾರ್ಥಿಗಳಿಗೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರುಗಳಿಗೆ ಪಠ್ಯ ಮತ್ತು ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ಸುಮಾರು 200 ವಿಡಿಯೋ ಗಳನ್ನು ಅಪೆÇ್ಲೀಡ್ ಮಾಡಿ ಎ¯್ಲರ ಗೌರವಕ್ಕೆ ಪಾತ್ರರಾಗಿರುವ ಅಜಾದ್ ಮಹಮ್ಮದ್, ತಮಿಳುನಾಡು ಸರ್ಕಾರ ನೀಡಿದ ರಾಜ್ಯ ಮಟ್ಟದ ಕ್ರೀಡಾ ವ್ಯಕ್ತಿತ್ವ ಪ್ರಶಸ್ತಿ ಸ್ವೀಕರಿಸಿದ ರಾಜ್ಯ ಸಂಘದ ಗೌರವ ಅಧ್ಯಕ್ಷ ಡಾ.ವೆಂಕಟೇಶ್‍ರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಲೀಲಾ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಚಂದ್ರಶೇಖರ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಪಿ.ಡಿ.ಕಾಲವಾಡ. ತ್ಯಾಗಮ್ ಹರೆಕೇಳ, ಖಜಾಂಚಿ ಬಾಲರಾಜ್, ಕೆ. ಎಚ್. ನಾಯಕ್ ಇ. ಶ್ರೀನಿವಾಸಗೌಡ, ಕೃಷ್ಣಪ್ಪ, ಪ್ರಮೋದ್ ರೋಣದ, ಶ್ರೀನಿವಾಸರೆಡ್ಡಿ ಮುದನಾಳ, ಸಿ.ಎಸ್.ಬರಗಾಲಿ, ಕುಮಾರ್ ಹೆಚ್, ವಿಜಯ ಕುಮಾರ್, ಅಸ್ಲಾಂ ಪಾಷ, ಶಂಕರ ಲಿಂಗಪ್ಪ, ಸುರೇಖಾ ಮಿರ್ಜಿ, ವಿಜಯಲಕ್ಷ್ಮಿ, ಉಷಾರಾಣಿ, ಡಾ|| ರತ್ನಮ್ಮ, ಗುರುರಾಜ್, ಮಧು,ಮುನಿಯಪ್ಪ, ಕೌಸಲ್ಯರಾಣಿ,ಉಷಾ, ಮುನಿಯಮ್ಮ,ಮಹೇಶ್, ಸುರೇಶ್ ಕುಮಾರ್,ಮುರಳಿ ಮೋಹನ್ ಸಾಧನ ಬದ್ರಿ, ಕಾಂಚನಾ, ಆರೋಗ್ಯಸ್ವಾಮಿ ಪ್ರಕಾಶ್, ವೆಂಕಟೇಶ್,ವೈ ರವಿಕುಮಾರ್, ಶ್ರೀರಾಮ್,ಅಂಬಿಕಾ, ಜಗದೀಶ್ ಚನ್ನಯ್ಯ ಮಠಪತಿ,ಮುಂತಾದ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.